Monday, October 17, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೩೦

ಇಲ್ಲಿಯವರೆಗೆ ನಾನು ಸಂಗ್ರಹ ಮಾಡಿದ್ದ ಉತ್ತರ ಕರ್ನಾಟಕ ಪದಗಳ ಕೋಶಕ್ಕೆ ಇವತ್ತಿನ ತರಗತಿ ಕೊನೆಯದು.
ಸರಿ ಸುಮಾರು ನೂರ ಇಪ್ಪತ್ತು ಪದಗಳನ್ನ ಇಲ್ಲಿಯವರೆಗೆ ಹಾಕಿದ್ದೇನೆ.  ಇನ್ನು ಬೇಕಾದಷ್ಟು ಪದಗಳು ನನ್ನ ಗಮನಕ್ಕೆ ಬರದೆ ಹೋಗಿವೆ. ನೆನಪಿಗೆ ಬಂದಾಗ ಮತ್ತೆ ಈ ಕೋಶಕ್ಕೆ ಸೇರಿಸುತ್ತೇನೆ.
 
ಬೆನ್ನು ತಟ್ಟಿದ ನಿಮ್ಮೆಲ್ಲರಿಗೂ ಆತ್ಮೀಯ ಧನ್ಯವಾದಗಳು

ಪದಗಳು - ಅರ್ಥ

೧) ಕಾಯಿಪಲ್ಲೆ - ತರಕಾರಿ
೨) ಕೊಸುಗಡ್ಡಿ - ಗಡ್ಡೆ ಕೋಸು
೩) ಉಳ್ಳಾ ಗಡ್ಡಿ - ಈರುಳ್ಳಿ
೪) ಶೇಂಗಾ - ನೆಲಗಡಲೆ

Thursday, October 13, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೯

ಪದಗಳು - ಅರ್ಥ

೧) ಹರಕತ್ - ಅವಶ್ಯಕತೆ 
೨) ಕಾಟು - ಅಳಿಸಿಹಾಕು
೩)  ಸೂಲಿ - ನೋವು ( ಉದಾ: ತಲೆಸೂಲಿ)
೪) ಉಲುವು  - ಗದ್ದಲ, ಉತ್ಸಾಹದಿಂದ ಕೂಡಿದ ವಾತಾವರಣ

Wednesday, October 12, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೮

ಪದಗಳು - ಅರ್ಥ

೧) ಮಾರಿ - ಮುಖ
೨) ಮಜಬೂತ್ - ಉತ್ತಮ ಗುಣಮಟ್ಟದ್ದು
೩) ಧಾವತಿ - ಜಾಸ್ತಿ ಕೆಲಸ, ಆಯಾಸ ( ಉದಾ: ಎಲ್ಲ ಕೆಲಸಾನು ನಿನ್ ತಲಿಮೇಲೆ ಹಾಕ್ಕೊಂಡು ಧಾವತಿ ಮಾಡ್ಕೋಬೇಡ )
೪) ಥೋಡೆ  - ಕಡಿಮೆ

Tuesday, October 11, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೭

ಪದಗಳು - ಅರ್ಥ
೧) ಇರಕಟ್ಟ- ವಿಶಾಲವಲ್ಲದ, ಕಡಿಮೆ ಜಾಗ ( ಉದಾ: ಅಲ್ಲಿ ನಿಲ್ಲಲಿಕ್ಕೂ ಜಾಗಾನೆ ಇಲ್ಲ, ಭಾಳ ಇರಕಟ್ಟ ಅದ)
೨) ಹತ್ಯಿ  - ಬಿಗಿ ಯಾಗುವುದು ( ಉದಾ: ಆ ಅಂಗಿ ನನಗ ಸರಿ ಹೊಂದುದಿಲ್ಲ, ಹತ್ಯಿ ಆಗ್ತದ)
೩) ಭಿಡೆ - ಸಂಕೋಚ
೪) ಹೀಂಗ  - ಹೀಗೆ  

Monday, October 3, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೬

ಪದಗಳು - ಅರ್ಥ
 
೧) ವಸ್ತಿ - ತಂಗುವುದು, ಅಲ್ಲೇ ಉಳಿದುಕೊಳ್ಳುವುದು ( ಉದಾ : ಇವತ್ತೊಂದಿನ ಇಲ್ಲೇ ವಸ್ತಿ ಮಾಡಿ ನಾಳೆ ಮುಂದಕ್ಕೆ ಹೋಗೋಣ)
೨) ತುಟ್ಟಿ - ದುಬಾರಿ
೩) ಒಡಗತ್ತು - ಒಗಟು
೪) ಇಬ್ಳರು ( ದಾವಣಗೆರೆ ಭಾಗದಲ್ಲಿ ಹೆಚ್ಚು ಬಳಸುವ ಪದ) - ಇಬ್ಬರು
 

Sunday, October 2, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೫

ಪದಗಳು - ಅರ್ಥ

೧) ಸೊಸ್ಲಾ ( ಬಿಜಾಪುರ), ಮಂಡಕ್ಕಿ ( ಬಳ್ಳಾರಿ, ಚಿತ್ರದುರ್ಗ), ಮಂಡಾಳು ( ರಾಯಚೂರು, ಗುಲಬರ್ಗಾ) - ಪುರಿ 
೨)  ಶರಬತ್ - ನಿಂಬೆ ಹಣ್ಣಿನ ಪಾನಕ
೩) ಹಿಂಗ್ಯಾಕಾತು  - ಹೀಗೆಕಾಯ್ತು
೪) ಹಂಗ್ಯಾಕಾತು - ಹಾಗೆಕಾಯ್ತು

Thursday, September 29, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೪

 ಪದಗಳು - ಅರ್ಥ

೧) ಮಟ - ವರೆಗೆ ( ಉದಾ : ಬರಮಟ - ಬರುವವರೆಗೆ; ಅಲ್ಲಿಮಟ - ಅಲ್ಲಿವರೆಗೆ)
೨) ಹಾಂಗ - ಹಾಗೆ
೩) ಹಲ್ಕಾ - ಹಗುರವಾದ, ಉತ್ತಮ ವಲ್ಲದ, ಗುಣಮಟ್ಟವಿಲ್ಲದ
೪) ಜಳಕ - ಸ್ನಾನ

Wednesday, September 28, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೩

ಪದಗಳು - ಅರ್ಥ

೧) ಎಷ್ಟಕೊಂದು - ಎಷ್ಟೊಂದು, ಬಹಳ ( ಉದಾ: ಆ ಜಾತ್ರ್ಯಾಗ ಎಷ್ಟಕೊಂದು ವ್ಯಾಪಾರ ಆತು)
೨) ಕಿಸೆ, ಬಕ್ಕಣ - ಜೇಬು ( ಅಂಗಿ ಅಥವಾ ಪಾಂಟಿನ ಜೇಬು, ದುಡ್ಡು ಇಟ್ಟುಕೊಳ್ಳುವ ಸ್ಥಳ)
೩) ತರುಬು - ನಿಲ್ಲಿಸು
೪) ಒಣ - ಖಾಲಿ, ಹುರುಳಿಲ್ಲದ ( ಉದಾ: ಅವನದು ಬರೀ ಒಣ ಧಿಮಾಕು)

Tuesday, September 27, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೨

ಪದಗಳು - ಅರ್ಥ

೧) ಐತೆ - ಇದೆ
೨) ಜಿಬಟು - ಜಿಪುಣ  ( ಉದಾ: ಬಲು ಜಿಬಟು ಇದಾನ ಅಂವ, ಒಂದು ರೂಪಾಯಿ ಬಿಚ್ಚಂಗಿಲ್ಲ)
೩) ದವಾಖಾನಿ - ಆಸ್ಪತ್ರೆ
೪) ಬೆರಿಕಿ, ಚಾಲೂ - ಎಲ್ಲೂ ಸಿಕ್ಕಿ ಹಾಕಿ ಕೊಳ್ಳದವ, ತಂತ್ರಗಾರಿಕೆಯ ಮನುಷ್ಯ, ಚಾಣಾಕ್ಷ  

Monday, September 26, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೧

ಪದಗಳು - ಅರ್ಥ

೧) ಶೆಟ ಗೊಳ್ಳೋದು - ಸಿಟ್ಟಾಗುವುದು
೨) ಶ್ಯಾಣೆ  - ಬುದ್ದಿವಂತ
೩) ತಟಗು - ಸ್ವಲ್ಪ
೪) ತಿಪ್ಲ, ತ್ರಾಸ - ಕಷ್ಟ 

Sunday, September 25, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೦

ಪದಗಳು - ಅರ್ಥ
೧) ವಲ್ಲೆ - ಬೇಡ 
೨) ಯಥಾರ್ಥ  - ಅಷ್ಟೊಂದು ಶ್ಯಾಣೆ ನೂ ಅಲ್ಲದ ದಡ್ಡನೂ ಅಲ್ಲದ
೩) ರೊಕ್ಕ - ದುಡ್ಡು
೪) ತಿರಷೆಷ್ಟಿ - ಯಾರ ಮಾತೂ ಕೆಳದವ, ಯಡವಟ್ಟು 

Wednesday, September 21, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೯

ಪದಗಳು - ಅರ್ಥ 

೧) ಉಸುಕು, ಉಸುಗು - ಮರಳು
೨) ಉದ್ರಿ - ತಲೆಹರಟೆ, ಕೆಲಸಕ್ಕೆ ಬಾರದ
೩) ವಾಜಮಿ - ಒಪ್ಪಬೇಕಾದ ಮಾತು
೪) ವಜ್ಜ  - ಗಟ್ಟಿ ಮುಟ್ಟಾದದ್ದು

Tuesday, September 20, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೮

ಪದಗಳು - ಅರ್ಥ 

1) ಉಚ್ಚು - ಬಿಚ್ಚಿಬಿಡು, ತೆಗೆದುಬಿಡು
೨) ಉಡಾಳ - ಯಾವುದಕ್ಕೂ ಉಪಯೋಗಕ್ಕೆ ಬಾರದೆ ಖಾಲಿ ತಿರುಗುವವ
೩) ಉಪರಾಟಿ - ಉಲ್ಟಾ, ಮತ್ತೆ ಮೊದಲಿನಿಂದ
೪) ಉಸಾಬರಿ - ತಂಟೆಗೆ

Monday, September 19, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೭

ಪದಗಳು - ಅರ್ಥ

೧)  ಸಬಾಣಾ, ಸಬಕಾರ - ಸೋಪು  ( ಮೈಗೆ ಹಚ್ಚಿ ಕೊಳ್ಳುವ ಅಥವಾ ಬಟ್ಟೆ ಒಗೆಯುವ)
೨) ಸೊಕ್ಕು - ಕೊಬ್ಬು, ಧಿಮಾಕು
೩) ಸೂಟಿ - ರಜಾ
೪) ಸವಡು - ಪುರುಸೊತ್ತು ಮಾಡಿಕೊಂಡು, ಬಿಡುವಿದ್ದಾಗ ( ಉದಾ: ಸ್ವಲ್ಪ ಸವಡು ಮಾಡಿಕೊಂಡು ನಮ್ಮ ಮನೆಗೂ ಬನ್ನಿ)

Sunday, September 18, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೬

ಪದಗಳು - ಅರ್ಥ
೧) ಪುಷೆಟೆ - ಉಚಿತವಾಗಿ, ಪುಕ್ಸಟ್ಟೆ
೨) ನಮ್ - ಹಸಿ ( ಉದಾ: ಒಗೆದುಹಾಕಿದ ಬಟ್ಟೆ ಇನ್ನು ಒಣಗಿಲ್ಲ, ನಮ್ ಅವ)
೩) ನಿಷ್ಟುರು - ಕೆಟ್ಟ ಅನಿಸಿಕೊ
೪) ಸಾಪ : ಸಾಪ -  ಖಡಾ ಖಂಡಿತವಾಗಿ
 

Thursday, September 15, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೫

ಪದಗಳು - ಅರ್ಥ

೧) ಪಾನಸರಿಗೆ, ವಾರದಸರಿಗೆ, ಮಟ್ಟಸ - ಒಂದು ರೀತಿಯ ಕ್ರಮಬಧ್ಧವಾಗಿ ( ಶಿಸ್ತು ಪಾಲಿಸುವುದು)
೨) ಪಾಂಟೋಣಿಗಿ - ಮೆಟ್ಟಿಲು
೩) ಫಾಲ್ತು - ಉಪಯೋಗಕ್ಕೆ ಬಾರದ, ಕೆಲಸಕ್ಕೆ ಬಾರದ
೪) ಫರಕ್ - ವ್ಯತ್ಯಾಸ

Tuesday, September 13, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೪

ಪದಗಳು - ಅರ್ಥ

೧) ಕೂನ - ಗುರುತು
೨) ಖೊಟ್ಟಿ - ಬಹಳ ಕೆಟ್ಟದಾದದ್ದು ( ಉದಾ: ಆ ಮನುಷ್ಯ ಅಂದಾಕರ ಖೊಟ್ಟಿ ಇದಾನ)
೩) ಮಾಲು - ಸಾಮಾನು
೪) ಪಡಸಾಲಿ - ಮನೆಯಲ್ಲಿನ  "ಹಾಲ್" 

Monday, September 12, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೩

ಪದಗಳು - ಅರ್ಥ 
 
೧) ಕಟಪಟ - ಕಷ್ಟಪಡುವುದು ( ಉದಾ: ಆ ಮನುಷ್ಯ ಬಹಳ ಕಟಪಟ ಪಟ್ಟ )
೨)  ಕೀಟು (ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಇಷ್ಟು
೩)  ಖಳೆ - ಕಾಂತಿ ( ಉದಾ: ಆ ಹುಡುಗನ ಮುಖದ ಮೇಲೆ ಖಳೆ ಚೊಲೋ ಅದ)
೪) ಖ್ಯಾಲ - ನೆನಪಾಗುವುದು ( ಉದಾ : ಅವನಿಗೆ ಊರಿನ ಕಡೆ ಖ್ಯಾಲ ಆಗ್ಯಾದ)

Sunday, September 11, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೨

ಪದಗಳು - ಅರ್ಥ

೧) ಗಂಗಾಳ - ಊಟದ ತಟ್ಟೆ
೨) ಗುಳುಗಿ - ಮಾತ್ರೆ
೩) ಹಗುರಕ - ನಿಧಾನವಾಗಿ
೪) ಕನ್ನಡ ಸಾಲಿ - ಸರಕಾರಿ ಕನ್ನಡ ಮಾಧ್ಯಮ ಶಾಲೆ

Thursday, September 8, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೧

ಪದಗಳು - ಅರ್ಥ

೧) ಧಾಡಸಿ - ಒರಟು, ಗಟ್ಟಿಮುಟ್ಟು
೨) ದಿಡ್ಡಿ ಬಾಗಿಲು - ಹಿಂದಿನ ಬಾಗಿಲು ( ಹಿತ್ತಿಲ ಬಾಗಿಲು)
೨) ದೌಡ , ಜಲ್ದಿ, ಲಗೂನ, ಭಧಾನ, ಗಡಾನ - ಬೇಗನೆ  ( ಉದಾ: ಜಲ್ದಿ ಬಾ, ಲಗೂನ ಓಡಿಕೊಂಡು ಬಾ, ಗಡಾನ ಬಾ, ದೌಡ  ಹೋಗಿ ದೌಡ  ಬಾ)
೪) ಈಯತ್ತೆ - ತರಗತಿ ( ಉದಾ  : ನಾನು ನಾಲ್ಕನೆ ಈಯತ್ತೆ ಯಲ್ಲಿ ಓದ್ಲಿಕತ್ತೀನಿ)

 

Wednesday, September 7, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೦

ಪದಗಳು - ಅರ್ಥ

೧) ಚೊಲೋ - ಚೆನ್ನಾಗಿ
೨) ಚುಮಣಿ ಎಣ್ಣಿ - ಸೀಮೆ ಎಣ್ಣಿ
೩) ಹೌರ - ಹಗುರವಾದದ್ದು, ಭಾರ ಇಳಿಸು
೪) ಇಟ್ಟಂಗಿ - ಇಟ್ಟಿಗೆ

Tuesday, September 6, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೯

ಪದಗಳು - ಅರ್ಥ
 
೧) ಬ್ಯಾಡ - ಬೇಡ
೨) ಬ್ಯಾನಿ - ನೋವು
೩) ಚಾದರ - ಹೊದಿಕೆ
೪) ಚಂದ - ಚೆನ್ನಾಗಿ ಇರುವುದು ಅಥವಾ ಕಾಣುವುದು

Monday, September 5, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೮

ಪದಗಳು - ಅರ್ಥ

೧) ಭರೋಸ ( ಬಿಜಾಪುರ್, ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಭರವಸೆ
೨) ಭರ್ತಿ - ಪೂರ್ತಿ
೩) ಭಿರಿ ( ಬಿಜಾಪುರ್, ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಕಷ್ಟವಾದದ್ದು, ಸರಳವಲ್ಲದ
೪) ಬುನಾದಿ - ಅಡಿಪಾಯ  

Sunday, September 4, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೭

ಪದಗಳು - ಅರ್ಥ
೧) ಭಾಂಡಿ - ಪಾತ್ರೆ ಸಾಮಾನು
೨) ಭಾರಿ, ವಜ್ಜ  - ಭಾರವಾದದ್ದು ( ಈ ಮಾಲು ಭಾರಿ ವಜ್ಜ ಅದ)
೩) ಭಧಾನ  - ಬೇಗನೆ
೪) ಭಕ್ರಿ - ಜೋಳದ ರೊಟ್ಟಿ

Monday, August 29, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೬

ಪದಗಳು - ಅರ್ಥ
೧) ಅದರಾಗ (ರಾಯಚೂರು ಭಾಗದಲ್ಲಿ ಹೆಚ್ಚು ಬಳಸಲ್ಪಡುತ್ತದೆ) - ಅದರಲ್ಲಿ
೨) ಬದ್ಲಿಗಿ - ಬದಲಿಗೆ
೩) ಬಗಾನ (ರಾಯಚೂರು ಭಾಗದಲ್ಲಿ ಹೆಚ್ಚು ಬಳಸಲ್ಪಡುತ್ತದೆ) - ಒಂದು ವೇಳೆ
೪) ಭಾಳ - ಬಹಳ 

Sunday, August 28, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ )ಗಳು - ತರಗತಿ ೫

ಪದಗಳು - ಅರ್ಥ

೧) ಅಂದಾಕರ - ಬಹಳ (ಉದಾ: ಆ ಮನುಷ್ಯ ಅಂದಾಕರ ಕೆಟ್ಟ ಇದಾನ)
೨) ಅರಾಮಿಲ್ಲಾ - ಹುಷಾರಿಲ್ಲ; 
೩) ಅರಬಿ (ಬಿಜಾಪುರ್, ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ) - ಬಟ್ಟೆ
೪) ಬಾಜಿ ( ಹುಬ್ಬಳ್ಳಿ, ಗದಗ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ) - ಪಲ್ಯ

Thursday, August 25, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೪

ಪದಗಳು - ಅರ್ಥ
ಈತ - ಇವನು
ಆತ - ಅವನು
ಅಗದಿ - ನಿಖರವಾಗಿ, ತೀರ ( ಉದಾ: ಅವರಿಬ್ಬರೂ ಅಗದಿ ಹತ್ತಿರದ ಸ್ನೇಹಿತರು)
ಅನಕತ್ತನ - ಅಲ್ಲಿವರೆಗೆ      ( ಉದಾ : ನಾನು ಬರೋದು ತಡವಾಗಬಹುದು, ಅನಕತ್ತನ ಅಲ್ಲೇ ಇರು)

Wednesday, August 24, 2011

ಉತ್ತರ ಕರ್ನಾಟಕ ಪದಾರ್ಥ(ಪದ+ಅರ್ಥ)ಗಳು-ತರಗತಿ ೩



ಪದಗಳು - ಅರ್ಥ
ಇಂವ - ಇವನು
ಅಂವ - ಅವನು
ಆಕಿ - ಅವಳು
ಇಕಿ - ಇವಳು

Tuesday, August 23, 2011

ಪದಾರ್ಥ( ಪದ + ಅರ್ಥ ) ಗಳು - ತರಗತಿ ೨

ಪದಾರ್ಥ( ಪದ + ಅರ್ಥ ) ಗಳು - ತರಗತಿ ೨
ಉತ್ತರ ಕರ್ನಾಟಕ ಪದಗಳು  -                                    ಅರ್ಥ
ಕಲ್ಲಿ  (ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) -  ಅಲ್ಲಿ
ಕಿಲ್ಲಿ (ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) -  ಇಲ್ಲಿ
ಇತ್ತಾಗ  ( ಬಳ್ಳಾರಿ,  ಭಾಗದಲ್ಲಿ ಹೆಚ್ಚು ಬಳಸಲ್ಪಡುತ್ತದೆ) -  ಇಲ್ಲಿ
ಅತ್ತಾಗ  (ಬಳ್ಳಾರಿ  ಭಾಗದಲ್ಲಿ ಹೆಚ್ಚು ಬಳಸಲ್ಪಡುತ್ತದೆ) -   ಅಲ್ಲಿ

Monday, August 22, 2011

ಉತ್ತರ ಕರ್ನಾಟಕದ ಕನ್ನಡ ಪದಾರ್ಥ ( ಪದ + ಅರ್ಥ ) ಗಳು:

ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಕನ್ನಡವಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಉತ್ತರ ಕರ್ನಾಟಕದ 'ಕನ್ನಡ' ಕರ್ನಾಟಕದ ತುಂಬಾ ಪ್ರಸಿದ್ದಿ ಯಾಗುತ್ತಿದ್ದು ( ವಿಶೇಷವಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ), ನಮ್ಮ ಕನ್ನಡ ವನ್ನ ಮತ್ತಷ್ಟು ನಿಮಗೆ ಪರಿಚಯಿಸುವ ಪ್ರಯತ್ನಇಲ್ಲಿ ನಾನು ಮಾಡಿದ್ದೇನೆ. ಪ್ರತಿದಿನವೂ ಒಂದಿಷ್ಟು ಉತ್ತರ ಕರ್ನಾಟಕ ಕನ್ನಡ ದ ಪದಾರ್ಥ ( ಪದ + ಅರ್ಥ ) ಗಳನ್ನ ನೋಡೋಣ. ನೀವೂ ಸಹ "ನಿಮ್ಮ- ಕನ್ನಡ" ದ ಪದಾರ್ಥ ಗಳನ್ನು ಇಲ್ಲಿ  ನಮಗೆ ಉಣಬಡಿಸಬಹುದು, ಜೊತೆಗೆ ಚರ್ಚೆಗೆ ಮುಕ್ತ ಅವಕಾಶವೂ ಇದೆ:)

ಪದಾರ್ಥ( ಪದ + ಅರ್ಥ ) ಗಳು - ತರಗತಿ ೧
ಉತ್ತರ ಕರ್ನಾಟಕ ಪದಗಳು                                                               ಅರ್ಥ
ಅಚ್ಚಿಕಡೆ ( ಬಿಜಾಪುರ್, ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) -  ಆ ಕಡೆ 
ಇಚ್ಚಿಕಡೆ ( ಬಿಜಾಪುರ್, ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಈ ಕಡೆ
ಅತ್ಲಾಗ   (ರಾಯಚೂರು, ಬಳ್ಳಾರಿ  ಭಾಗದಲ್ಲಿ ಹೆಚ್ಚು ಬಳಸಲ್ಪಡುತ್ತದೆ)     -  ಅಲ್ಲಿ
ಇತ್ಲಾಗ   (ರಾಯಚೂರು, ಬಳ್ಳಾರಿ  ಭಾಗದಲ್ಲಿ ಹೆಚ್ಚು ಬಳಸಲ್ಪಡುತ್ತದೆ)     -  ಇಲ್ಲಿ

Saturday, July 23, 2011

ಹುಚ್ಚ - ಶ್ಯಾಣೆ

ಹುಚ್ಚರ ಮಧ್ಯೆ ಹುಚ್ಚನ ಥರ ಇರೊನು ಶ್ಯಾಣೆ,
ಹುಚ್ಚರ ಮಧ್ಯೆ ಶ್ಯಾಣೆ ಆಗ್ಲಿಕ್ಕೆ ಹೊಗೋನು ಖರೆನೆ ಹುಚ್ಚ.

Tuesday, July 19, 2011

ತಮಸೋಮ

ಕೆಟ್ಟ ಸುದ್ದಿಯನ್ನೇ ಆದಷ್ಟು  ಮುಖಪುಟದಲ್ಲಿ ಕೂಡಿಸುವ ಪತ್ರಿಕೆಗಳು,
ಕೊಳಕು ಶಬ್ದಗಳನ್ನೇ ಬಂಡವಾಳವಾಗಿಸಿಕೊಂಡಿರುವ ರಿಯಾಲಿಟಿ ಷೋ ಗಳು,
ಸಾವಿರ ಎಪಿಸೋಡು ಮುಗಿದರೂ, ಇನ್ನೂ ಪರಸ್ಪರ ವೈಷಮ್ಯ ಸಾಧಿಸುವ ಧಾರಾವಾಹಿಯ ಪಾತ್ರಗಳು.....
ಓ ದೇವರೇ ಇನ್ನಾದರೂ ನಮ್ಮನ್ನು, "ತಮಸೋಮ ಜ್ಯೋತಿರ್ಗಮಯ".

ಶಬ್ದಗಳು

ಶಬ್ದಗಳು ತುಂಬಾ ಪ್ರಭಾವಶಾಲಿ.
ಅವುಗಳ ಮೂಲಕ ಇನ್ನೊಬ್ಬರಲ್ಲಿ ಶಕ್ತಿಯನ್ನು ತುಂಬಲೂಬಹುದು ಅಥವಾ
ಶಕ್ತಿಯನ್ನೆಲ್ಲಾ ಹೀರಿ ಮೂಲೆಗುಂಪು ಮಾಡಲೂಬಹುದು.

Thursday, July 14, 2011

ಸ್ನೇಹಿತ

ನಮ್ಮನ್ನು ನಾವಿದ್ದಹಾಗೆಯೇ ಸ್ವಿಕರಿಸುವವನು ಹಾಗೂ
ನಮ್ಮೆದುರು ತನ್ನನ್ನು ತಾನಿದ್ದಹಾಗೆಯೇ ಯಾವ ಭಿಡೆ ಇಲ್ಲದೆ  ಇರುವವನನ್ನು "ಸ್ನೇಹಿತ" ಎನ್ನಬಹುದು.

ಓಡುತ್ತಿದ್ದೇವೆ

ಇಲ್ಲಿ ಎಲ್ಲರೂ ಓಡುತ್ತಿದ್ದೇವೆ, ........

Thursday, June 30, 2011

ನೂರೆಟು

 ನೂರೆಟು  "ನೂರ್ಕಡೆ" ಬರದೇನು ನಿನ್ಕಡೆ
ನೂರೆಟು "ಒಂದೇಕಡೆ" ಬರ್ತೈತೆಲ್ಲಾ ನಿನ್ನೆಡೆ

Tuesday, June 28, 2011

ಅನಿರೀಕ್ಷಿತ ಖುಷಿ

ಅನಿರೀಕ್ಷಿತ ವಾಗಿ ನಮ್ಮ ಬಗ್ಗೆ ಯಾರಾದರು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದಾಗ ಆಗುವ ಖುಷಿ ಅಷ್ಟಿಷ್ಟಲ್ಲ!
ಒಂದು ವೇಳೆ ಅಂತಹ ಖುಷಿ ನಮ್ಮಿಂದ ಬೇರೆಯವರಿಗೆ ಸಿಕ್ಕರೆ ಅದಕ್ಕಿಂತ ತೃಪ್ತಿ ಇನ್ನೊಂದಿಲ್ಲ.

Tuesday, June 14, 2011

ಹತ್ತರಲ್ಲಿ ಹನ್ನೊಂದು

ನಾವು ಕಷ್ಟದಲ್ಲಿ ಇದ್ದೇವೆ ಅಂತ ಗೊತ್ತಿದ್ದೂ ಸಹ , ಅದೇ ಸಮಯದಲ್ಲೇ ನಮಗೆ " ಅತೀ ಹತ್ತಿರವಿದ್ದವರು" ನಮ್ಮ ಮೇಲೆ ಯುದ್ಧ ಸಾರಿಬಿಟ್ಟಿರುತ್ತಾರೆ. ಚಿಂತೆಯಿಲ್ಲ,  ಹತ್ತರಲ್ಲಿ ಹನ್ನೊಂದು ಅಂತ ಅದನ್ನೂ ನಗು ನಗುತ್ತಲೇ  ಸ್ವೀಕರಿಸಿದರಾಯ್ತು.

Wednesday, June 8, 2011

ಐವತ್ತು

ಐವತ್ತಕ್ಕೆ ಬಂದು ಮುಟ್ಟಿ ದ್ದೇವೆ  ಅಂದರೆ ಅರ್ಧ ಹಾದಿಗೆ ಕ್ರಮಿಸಿದ್ದೇವೆ ಅಂತ ಅಲ್ಲ!
ಇಷ್ಟಕ್ಕೂ ಜೀವನವನ್ನ ನೂರಕ್ಕೆ ಸೀಮಿತಗೊಳಿಸಿದವರು "ನಾವೇ" ಹೊರತು ಬೇರಾರು ಅಲ್ಲ!


ಆನೆ ಬಲ

ಮನಸು ಮುಗುಚಿ ಬಿದ್ದಾಗ ಒಂದೆರಡು ಸಾಂತ್ವನದ ಮಾತು " ಆನೆ ಬಲ" ಬಂದಷ್ಟು ನೆಮ್ಮದಿ ಕೊಡುವುದರಲ್ಲಿ ಸಂದೇಹವೇ ಇಲ್ಲ.

ನಮಗೆ ಏನನ್ನಬೇಕು?

ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ "ಹುಚ್ಚು ಮನಸ್ಸು" ಹೇಳಿದ ಹಾಗೆ ಕುಣಿದು ಮತ್ತೆ ಮತ್ತೆ ಹಳ್ಳಕ್ಕೆ ಬೀಳುತ್ತೆವಲ್ಲ, ನಮಗೆ ಏನನ್ನಬೇಕು?

ಹೇಳಿಕೊಳ್ಳುವುದು - ತಿಳಿದುಕೊಳ್ಳುವುದು

ನಮ್ಮ ಬಗ್ಗೆ ನಾವೇ ಖುದ್ದಾಗಿ  ಹೇಳಿಕೊಳ್ಳುವುದಕ್ಕೂ,
ಬೇರೆಯವರೇ ಕುತೂಹಲ ದಿಂದ ನಮ್ಮ ಬಗ್ಗೆ ತಿಳಿದು ಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸವಿದೆ.


ಇಷ್ಟವಿರಲಿ ಬಿಡಲಿ

ನಿಮಗೆ ಇಷ್ಟವಿರಲಿ ಬಿಡಲಿ ನಿಮ್ಮನ್ನ ಆಡಿಕೊಳ್ಳಲು ಒಂದಿಬ್ಬರಾದರೂ ತಮ್ಮ ಸಮಯವನ್ನ ಅದಕ್ಕಾಗಿಯೇ ತೆಗೆದು ಇಟ್ಟಿರುತ್ತಾರೆ. 

ಮಾನವ ಜನ್ಮ ದೊಡ್ಡದೋ

ಕಾಡಿನಲ್ಲಿ ಒಂದು ಹುಲಿಯನ್ನ ಮತ್ತೊಂದು ಹುಲಿಯಿಂದ ರಕ್ಷಿಸಲು,  ಒಂದು ಜಿಂಕೆಯನ್ನ ಮತ್ತೊಂದು ಜಿಂಕೆಯಿಂದ ರಕ್ಷಿಸಲು,
ಒಂದು ಆನೆಯನ್ನ ಮತ್ತೊಂದು ಆನೆಯಿಂದ ರಕ್ಷಿಸಲು, ಯಾವುದೇ ಕಾಯಿದೆ ಕಾನೂನು ಇಲ್ಲ.
ಆದರೆ ಅದೇ ನಾಡಿನಲ್ಲಿ ಒಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನನ್ನ ರಕ್ಷಿಸಲು ಸಾವಿರಾರು ಪುಟಗಳ ಕಾಯಿದೆ ಗಳೂ, ಕಾನೂನುಗಳೂ ಇವೆ.  ಮಾನವ ಜನ್ಮ ದೊಡ್ಡದೋ .....

ಕೆಲಸ - ಕುತೂಹಲ

ಯಾವುದೇ ಕೆಲಸವಿರಲಿ ಪೂರ್ಣ ವಾಗುವ ಮುಂಚೆಯೇ ಅದರ ಬಗ್ಗೆ ಎಲ್ಲರ ಹತ್ತಿರ ಡಂಗುರ ಸಾರಿದರೆ ಕೊನೆಯಲ್ಲಿ ಕುತೂಹಲ ಉಳಿಯುವುದೇ ಇಲ್ಲಾ.

ಆಸಕ್ತಿ ಜಾಸ್ತಿ

ಆಗಬೇಕಾಗಿರುವ ವಿಷಯಕ್ಕಿಂತ ಆದ ವಿಷಯದ ಬಗ್ಗೆ ನೆ ಬಹಳಷ್ಟು ಜನಕ್ಕೆ ಆಸಕ್ತಿ ಜಾಸ್ತಿ.

ಸಾಗುವ ದಾರಿ - ಸುಸ್ತು

ಸಾಗುವ ದಾರಿ ಬಹಳ ಇರುವುದರಿಂದ ಅಷ್ಟು ಬೇಗ ಸುಸ್ತಾಗುವುದು ಬೇಡ.
ಒಂದು ವೇಳೆ ಸುಸ್ತಾದರೂ, ಹಾಗೆ ಆದವರಂತೆ ಕಾಣಿಸಿ ಕೊಳ್ಳುವುದು ಬೇಡ.


Wednesday, June 1, 2011

ಪುಟ್ಟ ಮಗು

ಪುಟ್ಟ ಮಗುವಿನ ಮುಖದಲ್ಲಿ ಅಂತಹುದೇನು ಇರುತ್ತದೆ ಅಂತ ಗೊತ್ತಿಲ್ಲ, ಆದರೆ ಅವರ ಮುಖ ನೋಡಿದ ತಕ್ಷಣ
ಆಯಾಸವೆಲ್ಲ ನೀರಾಯಾಸ ವಾಗಿ ಕರಗಿ, ಮತ್ತಷ್ಟು ಚೈತನ್ಯ ನಮ್ಮಲ್ಲಿ ನಮಗೆ ಗೊತ್ತಿಲ್ಲದಂತೆಯೇ ಬಂದು ಬಿಡುತ್ತದೆ.

Monday, May 30, 2011

ಸೋಮಾರಿ ಸ್ನೇಹಿತರು

ಎಲ್ಲರು ಸ್ನೇಹಿತರಾದರೆ ಸೋಮಾರಿಗಳಾಗಿಬಿಡುತ್ತೀವಿ, ಒಂದಿಬ್ಬರಾದರೂ ವಿರೋಧಿಗಳು ಇದ್ದರೆ ಒಂಚೂರು ಎಚ್ಚರದಿಂದಾರು ಇರ್ತೀವಿ.

ನಾಷನಲ್ - ಹೈವೆ : ಕಚ್ಚಾ- ರಸ್ತೆ

ಮನಸ್ಸು ತುಂಬ ಗಲಿಬಿಲಿಗೊಂಡಾಗ ಸಾಗುವ ದಾರಿ  "ನಾಷನಲ್ - ಹೈವೆ" ಥರ ಇದ್ದರೂ  ಪ್ರಯಾಣ ಕಷ್ಟವೆನಿಸುತ್ತದೆ,
ಮನಸ್ಸು ತಿಳಿಯಾಗಿದ್ದಾಗ ಸಾಗುವ ದಾರಿ " ಕಚ್ಚಾ- ರಸ್ತೆ"  ಆಗಿದ್ದರೂ ಪ್ರಯಾಣ ಸುಲಭವೆನಿಸುತ್ತದೆ.  

Monday, May 23, 2011

ಸಮಚಿತ್ತ

ಎಲ್ಲ ಸಮಯ - ಸಂಧರ್ಭ ಗಳಲ್ಲಿಯೂ ಸಂತೃಪ್ತಿ ಯಾಗಿ 'ಸಮಚಿತ್ತ' ದಿಂದ ಇರುವವನಿಗೆ, ಸ್ವರ್ಗಕ್ಕೆ ಕಿಚ್ಚು ಹಚ್ಚುವ 'ಅರ್ಹತೆ ಮತ್ತು ಸ್ವತಂತ್ರ' ಎರಡೂ  ಇರುತ್ತದೆ.

Thursday, May 19, 2011

ಆಲೋಚನೆ - ಕೆಲಸ

ತಲೆಯ ತುಂಬಾ ಆಲೋಚನೆಗಳೇ  ಓಡಾಡುತ್ತಿರುವಾಗ, ಯಾವ ಕೆಲಸವೂ ಮುಂದಕ್ಕೆ ಸಾಗುವುದಿಲ್ಲ. 
ಆಲೋಚನೆಗಳನ್ನೆಲ್ಲ ಒಂದು ಕಡೆ ಗಂಟು ಕಟ್ಟಿಟ್ಟು, ಕೆಲಸಗಳ ಜೊತೆ ಮುನ್ನಡೆಯುವುದು ಚೊಲೊ(ಲೇಸು).

ಒಂದು ಹೆಜ್ಜೆ

ಎಷ್ಟೇ ದೊಡ್ಡವರಿರಲಿ, ಚಿಕ್ಕವರಿರಲಿ, ನಡೆಯುವಾಗ ಒಂದು ಸಲಕ್ಕೆ "ಒಂದು ಹೆಜ್ಜೆ" ಯನ್ನು ಮಾತ್ರ ಇಡಲಿಕ್ಕೆ ಸಾಧ್ಯ.

Tuesday, May 17, 2011

ಹೀಗಾಯ್ತು - ಹಾಗಾಯ್ತು

"ಹೀಗಾಯ್ತು" ಅಂತ ಹೇಳಿದರೆ, "ಹಾಗಾಗಿದ್ದರೆ ಇನ್ನು ಚೆನ್ನಾಗಿರ್ತಿತ್ತು" ಮತ್ತು  
"ಹಾಗಾಯ್ತು" ಅಂತ ಹೇಳಿದರೆ, "ಹೀಗಾಗಿದ್ದರೆ ಸರಿಯಾಗಿರ್ತಿತ್ತು" ಅಂತ ಅನ್ನೋರ ಮುಂದೆ 
 "ಹೀಗಾಯ್ತು, ಹಾಗಾಯ್ತು" ಅಂತ ಹೇಳೋದೇ ನಮ್ಮ ಮೂರ್ಖತನ.

Wednesday, May 11, 2011

ಇಂಪ್ರೆಸ್ - ಸರ್ಕಸ್

ಯಾರ್ಯಾರನ್ನೋ ಇಂಪ್ರೆಸ್ ( ಮನವೊಲಿಸುವ  ಕೆಲಸ ) ಮಾಡಲಿಕ್ಕೆ  ಸರ್ಕಸ್ ಮಾಡುವ ಬದಲು ನಮ್ಮ ಮನಸ್ಸನ್ನು ತೃಪ್ತಿಗೊಳಿಸುವ ಕೆಲಸ ದಲ್ಲಿ ತೊಡಗಿಕೊಳ್ಳುವುದು ಉತ್ತಮ.


Monday, May 9, 2011

ಹೋಲಿಕೆ

ನಮ್ಮನ್ನ ಇನ್ನೊಬ್ಬರಿಗೆ "ಹೋಲಿಕೆ" ಮಾಡಿಕೊಳ್ಳುವುದು ಅಂದರೆ, "ನೀರನ್ನು ಕೆ.ಜಿ. ಮಾಪನದಲ್ಲಿ ಹಾಗೂ ಅಕ್ಕಿಯನ್ನು ಲೀಟರ್ ಮಾಪನದಲ್ಲಿ ಅಳತೆ ಮಾಡಿದ ಹಾಗೆ". ಪ್ರತಿಯೊಂದಕ್ಕೂ ಅದರದೇ ಆದ ಮಾನದಂಡ ಇರುತ್ತದೆ.

ಅವಶ್ಯಕತೆ

ಕೆಲವೊಂದು ಕೆಲಸಗಳು ನಮ್ಮಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ನಾವಿಲ್ಲಿ ಇರುವುದು. ಇಲ್ಲದಿದ್ದರೆ ಈ "ಭೂಮಿಗೆ" ನಮ್ಮ "ಅವಶ್ಯಕತೆ"ಯಾದರೂ ಏನಿತ್ತು?


ನಾವು ಮತ್ತು ನಮ್ಮ ಕಷ್ಟಗಳು

ನಾವು ಕಷ್ಟದಲ್ಲಿ ಇದ್ದಾಗ ಆದಷ್ಟು ನಮ್ಮ ಕಷ್ಟ ಗಳ ಬಗ್ಗೆ ಬೇರೆಯವರ ಹತ್ತಿರ ಬಡ-ಬಡಿಸುವುದನ್ನ ಬಿಡಬೇಕು.

ಇಗೋ(ego)

ತುಂಬಾ "ಇಗೋ( ego)" ಇರುವ ವ್ಯಕ್ತಿಗಳ ಮಧ್ಯೆ ಗೆಳೆತನವಾಗಲಿ, ಸಂಭಂದಗಳಾಗಲಿ ಬಹಳ ದಿನ ಬಾಳಿಕೆ ಬರುವುದಿಲ್ಲ.

ಸಂಭಂಧಗಳಲ್ಲಿ ಮೊದಲ ಹೆಜ್ಜೆ

ಸಂಭಂಧ ಗಳು  ಹಳಸಿದಾಗ ಅವುಗಳನ್ನು ಸರಿಪಡಿಸುವ ಮೊದಲ ಹೆಜ್ಜೆ ನಾವು ಇಡೋಣ, ಪುನಃ  ಹಳಸಿದರೆ ಈ ಸಲ ಅವಕಾಶವನ್ನ ಆ ತುದಿಯಲ್ಲಿರುವವರಿಗೆ ಕೊಡೋಣ.

ಹೊಗಳಿಕೆ

ಇನ್ನೊಬ್ಬರಿಂದ ಕೇವಲ  "ಬರೀ ಹೊಗಳಿಕೆಯನ್ನ"  ನೀರಿಕ್ಷಿಸುವ ಮನುಷ್ಯ  ನಿಂತ ನೀರಾದರೆ ಆಶ್ಚರ್ಯ ಪಡಬೇಕಾಗಿಲ್ಲ.

ಸಿಟ್ಟು

ಸಿಟ್ಟು ಬಂದಾಗ ನಮ್ಮ ಅಸಹಾಯಕ ತನ ನೋಡಿ ನಾವೇ ನಕ್ಕು ಬಿಡವುದು ಒಳ್ಳೇದು.

Sunday, May 1, 2011

ನಾನು

ಜಗತ್ತಿನ ಎಲ್ಲ ಭಾಗಗಳಲ್ಲೂ,  ಅವರವರ ಭಾಷೆಯಲ್ಲಿ ಪ್ರತಿಯೊಬ್ಬರೂ ಅತಿ ಹೆಚ್ಚು ಸಲ ಬಳಸುವ ಪದ-"ನಾನು".

Friday, April 29, 2011

ಸಮಯದ ಹಣ

ಪ್ರತಿದಿನ ಬೆಳಿಗ್ಗೆ ಪ್ರತಿಯೊಬ್ಬರಿಗೂ "ಇಪ್ಪತ್ತು ನಾಲಕ್ಕು ಗಂಟೆಗಳು" ಉಚಿತವಾಗಿ ಸಿಗುತ್ತವೆ. ಇದಕ್ಕಾಗಿ ಯಾವ ಬಿಲ್ ಕೂಡ ಪಾವತಿಸಬೇಕಾಗಿಲ್ಲ ಹಾಗೂ ಪ್ರಪಂಚದಲ್ಲಿರುವ ಎಲ್ಲಾ ಹಣವನ್ನು ಒಟ್ಟು ಗೂಡಿಸಿದರೂ ಇದಕ್ಕಿಂತ ಜಾಸ್ತಿ "ಒಂದು ನಿಮಿಷವನ್ನು" ಕೊಂಡುಕೊಳ್ಳಲು ಸಾಧ್ಯವಿಲ್ಲ.


ಜವಾಬ್ದಾರಿಗಳು

ಇಷ್ಟವಿರಲಿ ಬಿಡಲಿ, ಬರುಬರುತ್ತಾ ಜವಾಬ್ದಾರಿಗಳು ಜಾಸ್ತಿ ಆಗುತ್ತಾ ಹೋಗುತ್ತವೆಯೇ ಹೊರತು ಕಡಿಮೆ ಆಗುವುದಿಲ್ಲ.

Tuesday, April 26, 2011

ಬರೆದು ಕೊಟ್ಟಿಲ್ಲ!

"ಇಲ್ಲಿ ಎಲ್ಲವೂ ನಾವಂದುಕೊಂಡಂತೆಯೆ ಆಗುತ್ತೆ" ಅಂತ ಯಾರೂ ನಮಗೆ ನಾವು ಹುಟ್ಟಿದಾಗ ಬಾಂಡ್ ಪೇಪರ್ ಮೇಲೆ ಬರೆದು ಕೊಟ್ಟಿಲ್ಲ!

Thursday, April 21, 2011

ಬಿಟ್ಟಿ ಸಲಹೆ

"ಸಲಹೆಗಳು ಬಿಟ್ಟಿಯಾಗಿ ಬೇಕಾದಷ್ಟು ಸಿಗುತ್ತವೆ" ಅನ್ನುವ ಮಾತಿದ್ದರೂ, ಅವುಗಳನ್ನ ಉಪಯೋಗಿಸಿಕೊಳ್ಳುವುದು, ಬಿಡುವುದು ಮಾತ್ರ ನಮಗೆ ಬಿಟ್ಟದ್ದು. ಇಲ್ಲಿರುವ ಬರಹಗಳೂ ಸಹ ಇದಕ್ಕೆ ಹೊರತಲ್ಲ!


ನಮ್ಮ 'ತನ'

ನಮ್ಮ 'ತನ' ಅನ್ನುವುದು ನಮಗೆ ಮಾತ್ರ ಸೀಮಿತ. ನಾವು ಏನೇ ಕೆಲಸ ಮಾಡಿದರೂ ಅದರಲ್ಲಿ ನಮ್ಮ 'ತನ' ವನ್ನ ತೋರಿಸುವುದು ಒಳ್ಳೆದು.


ಎಲ್ಲ ನಮ್ಮ ಮನಸ್ಸಿನಲ್ಲಿ

ಈ  ಗೊಂದಲ, ಹತಾಶೆ, ಗಜಿಬಿಜಿ, ನಿರಾಶೆ, ಸಿಟ್ಟು, ಅಸಹನೆ, ಅಸೂಯೆ..... ಅನ್ನುವುದು ಹೊರಗಡೆ ಎಲ್ಲೂ ಇಲ್ಲ. ಇದೆಲ್ಲ ಇರುವುದು ಕೇವಲ ನಮ್ಮ ಮನಸ್ಸಿನಲ್ಲಿ.


Thursday, April 14, 2011

ಇತಿಹಾಸವಾಗುತ್ತದೆ

ಎಲ್ಲವೂ ಮುಂದೊಂದು ದಿನ ಇತಿಹಾಸವಾಗುತ್ತದೆ.

ಮಾತು-ಮೌನ

ತಿಳಿದೂ ತಿಳಿದೂ ಆಡಿದ 'ಮಾತು' ಯೋಗ್ಯತೆ ತೋರಿಸುತ್ತೆ,  ಆದರೆ 'ಮೌನ' ಸುಮ್ಮನಿದ್ದು ಘನತೆ ಹೆಚ್ಚಿಸುತ್ತೆ.

ಪ್ರಶ್ನೆ- ಉತ್ತರ

ಒಮ್ಮೊಮ್ಮೆ ಕೆಲವೊಂದು ಪ್ರಶ್ನೆಗಳಿಗೆ, ಮಾತಿಗಿಂತ 'ಕೃತಿ'ಯ ಉತ್ತರ ಸೂಕ್ತ.

Monday, April 11, 2011

ಇವತ್ತು - ನಿನ್ನೆ - ನಾಳೆ

ಇವತ್ತು ನಾವೇನು ಮಾಡುತ್ತೇವೋ ಅದಷ್ಟೇ ನಿಜ. ನಿನ್ನೆ ಮುಗಿದು ಹೋಯ್ತು. ನಾಳೆ ಇನ್ನು ಬಂದಿಲ್ಲ!


Thursday, March 31, 2011

ಎದ್ದೇಳು

ಬಿದ್ದಾಗ ಎದ್ದೇಳಲು, ಗೆದ್ದಾಗ ಮತ್ತೊಂದು ಹೆಜ್ಜೆ ಮುಂದೆ ಇಡಲು
" ನಮ್ಮ ಕಾಲುಗಳೇ" ಬೇಕು.



ಚಿಂತೆ ಕಂತೆ ಸಂತೆ

ಹೊತ್ತು ಹರಿದ ಮೇಲೆ ಜೀವನದ ಬಗೆಗಿನ ನೂರಾರು ಚಿಂತೆಗಳು ಕಂತೆ ಕಂತೆ,
ಹೊತ್ತು ಮುಗಿದ ಮೇಲೆ ಬರೀ ಮೌನದ ಸಂತೆ.


ಧೀರ್ಘವಾದ "ನಡೆ"

ಒಂದು ಧೀರ್ಘವಾದ "ನಡೆ" ನಮ್ಮನ್ನು ನಿರಾಯಾಸವಾಗಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.


ನಂಬಿಕೆ

ಕೆಲವೊಂದು ಸಲ ನಂಬಿಕೆ ದ್ರೋಹ ಆದಾಗ, ಮೋಸ ಹೋದಾಗ,
ಕ್ಷಣ ಕಾಲ ಎಲ್ಲದರ ಮೇಲೆಯೂ, ಎಲ್ಲರ ಮೇಲೆಯೂ ನಂಬಿಕೆ ಕಳೆದುಕೊ ಪರವಾಗಿಲ್ಲ, ಆದರೆ ನಿನ್ನನ್ನು ಹೊರತು ಪಡಿಸಿ.

ತಪ್ಪು - ಸರಿ

ಅಸಲಿಗೆ "ತಪ್ಪು - ಸರಿ" ಅನ್ನುವುದು ಕೇವಲ ಅವರವರ "ದೃಷ್ಟಿಕೋನ".
ಅದೇನೇ ಇರಲಿ, ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲವಂತೂ ಕಟ್ಟಿಟ್ಟ ಬುತ್ತಿ.

ನೆಪ ಮತ್ತು ನಾನು

ನೂರು ಜನರಿಗೆ ನೂರು ನೆಪ ಹೇಳಿ ತಪ್ಪಿಸಿಕೊಳ್ಳಬಹುದು,
ಆದರೆ ನನಗೆ ನಾನು ಒಂದೇ ಒಂದು ನೆಪ ಹೇಳಿಕೊಂಡರೂ (ನನ್ನಿಂದ) ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

Sunday, March 27, 2011

ವಿಶ್ವಕಪ್ ವಿಷಯ

ಇಡೀ ಜಗತ್ತಿಗೇ ಇವರ ಗೆಲುವಿನ ಬಗ್ಗೆ ಸಂದೇಹವಿದ್ದರೂ,
ಅದಾವುದಕ್ಕೂ ಗಮನ ಕೊಡದೆ ಪ್ರತಿ ಆಟವನ್ನೂ ಅಷ್ಟೇ ಉತ್ಸಾಹದಿಂದ,
ಅಷ್ಟೇ ಶ್ರದ್ದೆಯಿಂದ ಆಡಿದ್ದು ಕೆನಡ, ಕೀನ್ಯಾ, ನೆದರ್ಲ್ಯಾಂಡ್, ಐರ್ಲ್ಯಾನ್ಡ  ತಂಡಗಳು.
ಸೋಲು ಗೆಲುವು ತದನಂತರ, ಆಟ ಆಡುವುದು ಮೊದಲ ಕೆಲಸ.


Wednesday, March 9, 2011

ಹವ್ಯಾಸ

ಹವ್ಯಾಸಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಲೇ ಬೇಕು.
ಒಂದು ಹಂತದಲ್ಲಿ ಎಲ್ಲವೂ, ಎಲ್ಲರೂ ನಮ್ಮ ಕೈಬಿಟ್ಟು ಹೋದಾಗ,
ಹವ್ಯಾಸಗಳೇ ನಮ್ಮನ್ನ ಕೈಹಿಡಿದು ಮುಂದೆ ನಡೆಸಿ, ಒಬ್ಬಂಟಿತನವನ್ನ ಹೊಡೆದೋಡಿಸುತ್ತವೆ.


ಅಹಂಕಾರ

'ಅಹಂಕಾರ' ಎನ್ನುವುದನ್ನು  'ಆತ್ಮವಿಶ್ವಾಸ' ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬೇಕೆ    ವಿನಃ ಮತ್ತೊಬ್ಬರ ಮೇಲೆ 'ಹೂಂಕರಿಸಲು'  ಅಲ್ಲ!

ಮಾತು

ಸದಾ ಮಾತೇ ಮಾತಾಗದಿರಲಿ,
ಮಾತು ವಸಿ ಮೌನವಾಗಿದ್ದು,
"ಮಾಡಿದ ಕೆಲಸ" ಚೂರು ಮಾತಾಡುವಂತಾಗಲಿ.


Friday, February 25, 2011

ತಾಳ್ಮೆ

'ತಾಳ್ಮೆ' ಎನ್ನುವುದು  ಎಂದಿಗೂ, ಯಾವತ್ತಿಗೂ ಸೋಲನ್ನೇ ಕಾಣದ ಏಕೈಕ ' ಕ್ರಿಯಾಪದ'.

Wednesday, February 9, 2011

ಹೆಜ್ಜೆ ಹಾಕು

ನಿನ್ನ ಪಾಡಿಗೆ ನೀನು ಹೆಜ್ಜೆ ಹಾಕುತ್ತಾ ಹೋಗು.
ನಿನ್ನ ಐಸತ್ತು ಎಷ್ಟಿದೆಯೋ ಅಷ್ಟೇ ಹೆಜ್ಜೆ ಹಾಕುತ್ತಾ ಹೋಗು
ಜೊತೆಗಾರರಿದ್ದಾರೆಂದು ಓಡುವುದು ಬೇಡ
ಜೊತೆಗಾರು ಇಲ್ಲವೆಂದು ಹೆಜ್ಜೆ ಹಾಕದೆ ಕೂಡಬೇಡ.
ಹೆಜ್ಜೆ ಹಾಕುತ್ತಲೇ ಇರು...
ಕೊನೆಯವರೆಗೂ.... 

ಕಾರಣ

ದುಃಖ ಪಡುವುದಕ್ಕೆ  ಒಂದಾದರೂ ಕಾರಣವಿರಲಿ
ಸಂತೋಷ ಪಡುವುದಕ್ಕೆ ಯಾವ ಕಾರಣವೂ  ಬೇಕಾಗದಿರಲಿ.

Tuesday, February 1, 2011

ಪ್ರಕೃತಿ

ಪ್ರಕೃತಿಯನ್ನ ವಿಜ್ಞಾನಿಯಾಗಿ ನೋಡುವುದಕ್ಕಿಂತ
ವಿಧ್ಯಾರ್ಥಿಯಾಗಿ ನೋಡುವುದು ಲೇಸು.

Friday, January 14, 2011

ಗಡಿಯಾರದ ಮುಳ್ಳಾಗು

ಸುಮ್ಮನೆ ಗಡಿಯಾರದ ಮುಳ್ಳಾಗು
"ಯಾರು ಏನೇ ಅಂದರೂ, ಎಷ್ಟೇ ಬೈದರೂ
ನಾಚಿಕೆಯಿಲ್ಲದೆ ತನ್ನ ಪಾಡಿಗೆ ತಾನು ಮುಂದೆ
ಹೊಗ್ತಾನೆ ಇರುತ್ತೆ!"