Thursday, December 11, 2014

ಅಂಕಣ ೪೧ : Soft Weekend

ವೀಕೆಂಡ್ ಶುರು ಆಗೋದು ಶನಿವಾರ ಬೆಳಿಗ್ಗೆ ಆದರೂ ನೀವೊಂದು ಸಲ ಯಾವುದಾದರೂ ಸಾಫ್ಟ್ ವೇರ್ ಆಫೀಸ್ ಗೆ ಶುಕ್ರವಾರ ಮಧ್ಯಾನ ಭೇಟಿ ಕೊಟ್ಟು ನೋಡಿ. ಸ್ಕೂಲ್ ನಲ್ಲಿ ನಾಳೆ ರಜ ಅಂತ ಗೊತ್ತಾದಾಗ ಮಕ್ಕಳೆಲ್ಲ ಹೇಗೆ ಇರ್ತಾರೋ ಹಾಗೇನೆ ಸಾಫ್ಟ್ ಲೋಕದ ಜನರು ಶುಕ್ರವಾರ ಮಧ್ಯಾನವೇ ವೀಕೆಂಡ್ ಮೂಡ್ ಗೆ ಬಂದು ಬಿಟ್ಟಿರುತ್ತಾರೆ. ಅದೇನೋ ಗೊತ್ತಿಲ್ಲ, ಸಾಫ್ಟ್ ಲೋಕದ ಜನರಿಗೆ ನಾಳೆ ಶನಿವಾರ ಅಂತ ಗೊತ್ತಾದಾಗ ಆಗುವ ಖುಷಿ ಇದೆಯಲ್ಲ, ಅದೊಂಥರ .. ಹೇಳಲು ಬರುವುದೇ ಇಲ್ಲ!! ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕು ಅಂದರೆ ಶುಕ್ರವಾರ ಬೆಳಿಗ್ಗೆ ಹಾಸಿಗೆ ಯಿಂದ  ಎದ್ದೆಳುವಾಗಲೇ, " ಅಬ್ಬ, ನಾಳೆ ಶನಿವಾರ, ಚೆನ್ನಾಗಿ ಚೆನ್ನಾಗಿ ನಿದ್ದೆ ಮಾಡಬಹುದು" ಅನ್ನೋ ಲೆಕ್ಕಾಚಾರ ದಿಂದಲೇ ದಿನಚರಿ ಶುರು ಆಗುತ್ತೆ. ಬಹಳಷ್ಟು ಸಾಫ್ಟ್ ಲೋಕದ ಜನ ಶನಿವಾರ ಮತ್ತು ಭಾನುವಾರ ತುಂಬಾ ಇಷ್ಟ ಪಟ್ಟು ಮಾಡುವ ಮೊದಲ ಮೂರು ಕೆಲಸವೆಂದರೆ ನಿದ್ದೆ, ನಿದ್ದೆ, ನಿದ್ದೆ !!
ಹಾಗಾದರೆ ವೀಕೆಂಡ್ ನ್ನು ಸಾಫ್ಟ್ ಲೋಕದ ಬೇರೆ ಬೇರೆ ಕೆಟಗರಿಯ ಜನ ಹೇಗೆ ಕಳೆಯುತ್ತಾರೆ ಅನ್ನೋದನ್ನ ಸ್ವಲ್ಪ ನೋಡೋಣ ಬನ್ನಿ.





ಬ್ಯಾಚುಲರ್ ಆಗಿದ್ದರೆ :
ಮೇಲೆ ಹೇಳಿದ ಹಾಗೆ ಸಾಫ್ಟ್ ಲೋಕದಲ್ಲಿ ಶನಿವಾರ ಅಂದ್ರೇನೆ ಸಾಕು ಡೀಫಾಲ್ಟ್ ಆಗಿ ಒಂದೆರಡು ತಾಸು ಎಕ್ಸ್ಟ್ರಾ ನಿದ್ದೆಗೆ ಸಿಕ್ತು ಅಂತ. ಗುಂಪಿನ ಜನ ಎದ್ದೆಳುವಷ್ಟು ಹೊತ್ತಿಗೆ ಆಲ್ಮೋಸ್ಟ್ ಬೆಳಿಗ್ಗೆ ಮತ್ತು ಮಧ್ಯಾನ ಎರಡೂ ಸಂಧಿಸುವ ಕಾಲ ಬಂದಿರುತ್ತೆ. ನನ್ನ ಗೆಳೆಯನೊಬ್ಬ ಹೇಳುತ್ತಿದ್ದ, " ವೀಕೆಂಡ್ ಬಂದ್ರೆ ಸಾಕು ನನಗೆ ಬ್ರೇಕ್ ಫಾಸ್ಟ್ ದುಡ್ಡು ಉಳಿಯುತ್ತೆ"  ಅಂತ
"ಅದು ಹೇಗೆ?" ಅಂತ ನಾನು ಕೇಳಿದೆ
ಹಾಸಿಗೆ ಬಿಟ್ಟು ಎದ್ದೇಳೋ ಟೈಮ್ ಗೆ ಆಲ್ಮೋಸ್ಟ್ ೧೧ ಗಂಟೆ ಆಗಿರುತ್ತೆ, ಮುಖ ತೊಳೆದು, ಪೇಪರ್ ಓದಿ, ಫೇಸ್ಬುಕ್ ನೋಡಿ, ಮೊಬೈಲ್ ಮೆಸೇಜ್ ಗಳನ್ನ ಚೆಕ್ ಮಾಡಿ, ಬಟ್ಟೆ ಒಗೆದು, ಸ್ನಾನ ಮಾಡಿ ಹೊರಗಡೆ ಬರೋವಷ್ಟರಲ್ಲಿ ಮಧ್ಯಾನ ಆಗಿರುತ್ತೆ. "ತಿಂಡಿ, ಊಟ ಎರಡನ್ನು ಒಟ್ಟಿಗೆ ಊಟದಲ್ಲೇ ಮುಗಿಸಿಬಿಡ್ತೀನಿ" ಅನ್ನೋದು ಅವನ ಲಾಜಿಕ್. ಕ್ಲೀನಿಂಗ್ ಕೆಲಸಗಳನ್ನೆಲ್ಲ ಬ್ಯಾಚುಲರ್ ಗಳು ವೀಕೆಂಡ್ ಗೆ ತಳ್ಳಿ ಬಿಟ್ಟಿರುತ್ತಾರೆ . ಅದು ಬಟ್ಟೆ ಒಗೆಯುವುದು ಇರಬಹುದು, ಅಥವಾ ತಮ್ಮ ತಮ್ಮ ಕಪಾಟುಗಳನ್ನು ಕ್ಲೀನ್ ಮಾಡೋದು ಇರಬಹುದು. ಇಲ್ಲಿ ಒಂದು ವಿಚಾರ ಮಾತ್ರ ಕಾಮನ್, ವೀಕೆಂಡ್ ನಲ್ಲಿ ಬ್ಯಾಚುಲರ್ ಗಳ ಕ್ಲೀನಿಂಗ್ ಕೆಲಸ ನಡೆಯುತ್ತಿರಬೇಕಾದರೆ ಬ್ಯಾಚುಲರ್ ಗಳ ರೂಂ / ಪಿ. ಜಿ / ಮನೆ ನಲ್ಲಿ ಅವರ ಸಿಸ್ಟಮ್ ಸಾಂಗ್ ಗಳು ಮಾತ್ರ ನಾನ್ - ಸ್ಟಾಪ್ ಆಗಿ ಓಡುತ್ತಲೇ ಇರುತ್ತವೆ
ಮದುವೆಯಾದವರು :
ಬಂಧು ಬಳಗದವರ ಸಭೆ ಸಮಾರಂಭಗಳು ಇವರ ಬಹಳಷ್ಟು ವೀಕೆಂಡ್ ಗಳನ್ನೂ ತಿಂದು ಹಾಕುತ್ತವೆ ಒಂದು ವೇಳೆ ಯಾವುದೇ ಸಭೆ ಸಮಾರಂಭಗಳು ಇಲ್ಲದಿದ್ದರೆ ಗಂಡಸರು ವೀಕೆಂಡ್ ನಲ್ಲಿ ನ್ಯೂಸ್ ಚಾನೆಲ್ ಗಳನ್ನ ಬಿಟ್ಟು ದೂರ ಸರಿಯುವುದಿಲ್ಲ ( ಹೆಂಡತಿ ಮತ್ತು ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗುತ್ತೇನೆ ಅನ್ನೋ ಕಂಡೀಶನ್ ಮೇರೆಗೆ ಅವರ ಕೈಗೆ ಟಿವಿ ರಿಮೋಟ್ ಸಿಕ್ಕಿರುತ್ತದೆ). ಅದೇ ತರಹ ಸಂಜೆ ಆಗುತ್ತಿದ್ದಂತೆಯೇ ಒಂದು ರೌಂಡ್ ಹೊರಗಡೆ ತಿರುಗಾಡಿ, ಡಿಸ್ಕೌಂಟ್ ಹಾಕಿರುವ ಸೇಲ್ಸ್ ಗಳ ಎಕ್ಸಿಬಿಷನ್ ನನ್ನು ಕಣ್ತುಂಬ ನೋಡಿಕೊಂಡು, ಹೋಟೆಲಿನಲ್ಲಿ ಊಟ ಮಾಡಿಕೊಂಡು ಮನೆಗೆ ಬಂದು ಬಿಡುತ್ತಾರೆ. ಅಲ್ಲಿಗೆ ಅವರ ವೀಕೆಂಡ್ ಮುಕ್ತಾಯವಾಗುತ್ತದೆ.
ಆಗಷ್ಟೇ ಮದುವೆಯಾದವರು :
ಇವರದು ಇನ್ನೊಂದು ಕಥೆ. ಕನಿಷ್ಠ ಐದರಿಂದ ಆರು ವೀಕೆಂಡ್ ಇವರು ಹೋಗಬೇಕಾದ ಎಲ್ಲ ಊರುಗಳಿಗೆ ಟಿಕೆಟ್ ಗಳು ಬುಕ್ ಆಗಿ ಬಿಟ್ಟಿರುತ್ತವೆ. ಊಟಿಗೋ, ಉತ್ತರ ಭಾರತಕ್ಕೋ, ಮನಾಲಿ ಗೋ, ಪಕ್ಕದ ತಮಿಳು ನಾಡಿಗೋ, ಯಾವುದು ಇಲ್ಲವೆಂದರೆ ಅತ್ತೆ ಮಾವನ ಮನೆಯಲ್ಲಿ ನಡೆಯುವ ಸತ್ಯನಾರಾಯಣ ಪೂಜೆಗೋ ಹೀಗೆ ಇವರ ವೀಕೆಂಡ್ ಮಾತ್ರ ಪೂರ್ತಿ ಬ್ಯುಸಿ.
ಊರಿಗೆ ಹೋದವರು :
ಮೈಸೂರು, ತುಮಕೂರು, ಮಂಡ್ಯ, ಹಾಸನ ಹೀಗೆ ಊರಿಗೆ ಹೋದವರು ತಮ್ಮ ಭಾರವಾದ ಬಟ್ಟೆ ಬ್ಯಾಗನ್ನು ಅಮ್ಮನಿಗೆ ಕೊಟ್ಟು ಎರಡು ದಿವಸ ಆರಾಮಾಗಿ ಟಿ ವಿ ನೋಡಿಕೊಂಡು ಇದ್ದುಬಿಡುತ್ತಾರೆ. ಅದೇ ಊರಿನ ತಮ್ಮ ಬ್ಯಾಚ್ ಮೆಟ್ ಗಳು ಏನಾದರೂ ಸಿಕ್ಕಿದರೆ ಒಂದಿಷ್ಟು ಅವರ ಜೊತೆ ಹರಟೆ ಹೊಡೆಯುತ್ತಾರೆ. ಇಲ್ಲಾಂದ್ರೆ ಮನೆಯಲ್ಲಿ ಮಾಡಿದ ತಿಂಡಿಯನ್ನು ತಿಂದು ಕೊಂಡು ಆರಾಮಾಗಿ ಕಾಲ ಕಳೆದು ಭಾನುವಾರ ಸಂಜೆ ಪುನಃ ತಮ್ಮ ಒಗೆದ (ತೊಳೆದ) ಬಟ್ಟೆ ಬ್ಯಾಗಿನ ಜೊತೆ ಬೆಂಗಳೂರಿನ ಕಡೆ ಮುಖ ಮಾಡಿ ನಿಂತು ಬಿಡುತ್ತಾರೆ. ವಿಶೇಷವಾಗಿ ನಿಮಗೆ ಭಾನುವಾರ ಸಂಜೆ  ಬೆಂಗಳೂರಿಗೆ ಬರುವ ಬಸ್ಸುಗಳ ಸಂಖ್ಯೆ ಬಹಳ ದೊಡ್ಡದು. ಒಂದು ಸಲ ನೀವು ಬಿಡುವು ಮಾಡಿಕೊಂಡು ಭಾನುವಾರ ಸಂಜೆ ಮೈಸೂರು, ತುಮಕೂರು ಬಸ್ ಸ್ಟಾಂಡ್ ಗಳನ್ನ ನೋಡಬೇಕು. ಅವಾಗ ನಿಮಗೆ ಗೊತ್ತಾಗುತ್ತದೆ ಬೆಂಗಳೂರಿಗೆ ಹೊರಡುವವರ ಸಂಖ್ಯೆ.

ಭಿನ್ನರು :
ಇವರು ಪಕ್ಕ ಸಾಫ್ಟ್ ಲೋಕದವರು. ವೀಕೆಂಡ್ ನಲ್ಲೂ ಸಹ ಕಂಪನಿಯ ಕೆಲಸ ವನ್ನು ಮನೆಗೆ ತಂದು ಮಾಡುತ್ತಾ ಕುಳಿತು ಬಿಡುತ್ತಾರೆ. ಕೊನೆಗೆ ಇವರ ಮನೆಯಲ್ಲಿ ಅಪ್ಪ / ಅಮ್ಮ / ಹೆಂಡತಿ / ಮಕ್ಕಳು ಯಾರಾದರೂ ಒಬ್ಬರು ಚೆನ್ನಾಗಿ ರೇಗಿದಾಗ ಲ್ಯಾಪ್ಟಾಪ್ ಮುಚ್ಚಿಟ್ಟು ಭಾರಾವಾದ ನಿಟ್ಟುಸಿರು ಬಿಡುತ್ತಾರೆ. ಇವರಿಗೆ ತಮಗೆ ಸಿಗುವ ವೀಕೆಂಡ್ ಗಿಂತ ಕ್ಲೈಂಟ್ ಶಾಂತಿ ಪಡಿಸುವುದೇ ಒಂದು ದೊಡ್ಡ ಕೆಲಸ.
ವಾರದ ಬಿಲ್ಡ್ ಲೇಬಲ್ : ಮೇಲೆ ಹೇಳಿದ ಎಲ್ಲರಲ್ಲೂ ಒಂದು ಕಾಮನ್ ಅಂಶ ವೆಂದರೆ : ಇವರೆಲ್ಲರಿಗೂ ಒಟ್ಟಿಗೆ ಹಾರ್ಟ್ ಅಟ್ಯಾಕ್ ಆಗುವುದು, ಭಾನುವಾರ ರಾತ್ರಿ ಮಲಗಬೇಕಾದರೆ "ನಾಳೆ ಬೆಳಿಗ್ಗೆ ಸೋಮವಾರ" ಅಂತ ಗೊತ್ತಾದಾಗ!

No comments:

Post a Comment