ಬೆಳಿಗ್ಗೆ ಎದ್ದು,
ಒಂದೆರಡು ರೌಂಡ್ ಓಡಿ/
ಜಿಮ್ ಗೆ ಹೋಗಿ /
ಯೋಗ –ಗೀಗ ಮಾಡಿ /
ಇದ್ಯಾವುದು ಮಾಡದೆ ಫ್ರೆಶ್ ಆಗಿ ಅವರವರ ಕಂಪನಿ ಬಸ್ ಬರೋ ಕಡೆ ಹೆಗಲಿಗೊಂದು ಬ್ಯಾಗ್ ಹಾಕಿ ಕೊಂಡು ನಿಂತುಬಿಡುವುದು. ಹಾಗೆ ಹೋಗ್ತಾ, ದಾರೀಲಿ ಬರುವ ಯಾವುದಾದರು ಒಂದು ಹೋಟೆಲಿನಲ್ಲಿ
ಇಡ್ಲಿ ನೊ,
ದೋಸೆ ನೊ ತಿಂದು,
ಒಂದು ಕಪ್ ಕಾಫಿ ಕುಡಿದು,
ಅದರ ಜೊತೆಗೆ ಒಂದು ದಂ ಎಳೆದು,
ಹ್ಯಾಂಡ್ ಫ್ರೀ ನ ಕಿವಿಗೆ ಸಿಗಿಸಿಕೊಂಡು,
ಕಂಪನಿಯ ಬಸ್ಸು ಬರುವ ಹಾದಿಯನ್ನೇ ನೋಡುತ್ತಾ ನಿಂತುಬಿಡುವುದು. ನನ್ನ ಥರ, ನಮ್ಮ ಕಂಪನಿಯಲ್ಲಿ ಕೆಲಸ ಮಾಡುವವರು ಸಹ ಅದೇ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಾರೆ. ಅವರೆಲ್ಲರಿಗೊಂದಿಷ್ಟು ಹಾಯ್, ಮಾಡುವಷ್ಟರಲ್ಲಿ ನಮ್ಮ ಬಸ್ ಬಂದು ಬಿಟ್ಟಿರುತ್ತದೆ.
ಒಂದೆರಡು ರೌಂಡ್ ಓಡಿ/
ಜಿಮ್ ಗೆ ಹೋಗಿ /
ಯೋಗ –ಗೀಗ ಮಾಡಿ /
ಇದ್ಯಾವುದು ಮಾಡದೆ ಫ್ರೆಶ್ ಆಗಿ ಅವರವರ ಕಂಪನಿ ಬಸ್ ಬರೋ ಕಡೆ ಹೆಗಲಿಗೊಂದು ಬ್ಯಾಗ್ ಹಾಕಿ ಕೊಂಡು ನಿಂತುಬಿಡುವುದು. ಹಾಗೆ ಹೋಗ್ತಾ, ದಾರೀಲಿ ಬರುವ ಯಾವುದಾದರು ಒಂದು ಹೋಟೆಲಿನಲ್ಲಿ
ಇಡ್ಲಿ ನೊ,
ದೋಸೆ ನೊ ತಿಂದು,
ಒಂದು ಕಪ್ ಕಾಫಿ ಕುಡಿದು,
ಅದರ ಜೊತೆಗೆ ಒಂದು ದಂ ಎಳೆದು,
ಹ್ಯಾಂಡ್ ಫ್ರೀ ನ ಕಿವಿಗೆ ಸಿಗಿಸಿಕೊಂಡು,
ಕಂಪನಿಯ ಬಸ್ಸು ಬರುವ ಹಾದಿಯನ್ನೇ ನೋಡುತ್ತಾ ನಿಂತುಬಿಡುವುದು. ನನ್ನ ಥರ, ನಮ್ಮ ಕಂಪನಿಯಲ್ಲಿ ಕೆಲಸ ಮಾಡುವವರು ಸಹ ಅದೇ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಾರೆ. ಅವರೆಲ್ಲರಿಗೊಂದಿಷ್ಟು ಹಾಯ್, ಮಾಡುವಷ್ಟರಲ್ಲಿ ನಮ್ಮ ಬಸ್ ಬಂದು ಬಿಟ್ಟಿರುತ್ತದೆ.
ಬಸ್ ಏರಿದ ತಕ್ಷಣ ಕಿಟಕಿಯ ಪಕ್ಕದ ಸೀಟ್ ನ್ನ ಹುಡುಕಿಕೊಂಡು ಕೂತು, ಆಗ ತಾನೇ ತಗೊಂಡಿರುವ “Times“ ಪೇಪರ್ ಮೇಲೆ ಒಂದು ಸಲ ಕಣ್ಣಾಡಿಸುತ್ತಾ ಕೂತೆವೆಂದರೆ ಸಾಕು ನಮ್ಮ ಕಣ್ಣುಗಳು ನಮಗೆ ಗೊತ್ತಿಲ್ಲದ ಹಾಗೆ ಮುಚ್ಚಿಕೊಂಡು ಬಿಟ್ಟಿರುತ್ತವೆ. ನಿದ್ದೆಗೆ ಜಾರಿಕೊಂಡು ಬಿಟ್ಟಿರುತ್ತವೆ. ಈ ಸಾಫ್ಟ್ ಕಂಪನಿಗಳ “Transport“ ಗಳನ್ನು ನೀವೊಂದು ಸಲ ನೋಡಬೇಕು. ಬನಶಂಕರಿಯಿಂದ ಬಿ.ಟಿ. ಎಮ್ ತನಕ ಎಲ್ಲ ಕಂಪನಿಗಳ ಬಸ್ ಗಳು , ಕ್ಯಾಬ್ ಗಳು ಬೆಳಗಿನ ಹೊತ್ತು ಆರ್ಭಟಿಸುತ್ತಾ ಬರುತ್ತವೆ. ಆದರೆ ಒಂದು ಸಲ “BTM“ ಕ್ರಾಸ್ ಆಯಿತೆಂದರೆ ಸಾಕು, ಈ ಎಲ್ಲ ವೆಹಿಕಲ್ ಗಳ ಘರ್ಜನೆ ತನ್ನಷ್ಟಕ್ಕೆ ತಾನೇ ಕಡಿಮೆಯಾಗಿ, ಒಂದರ ಹಿಂದೆ ಮತ್ತೊಂದು ಅನ್ನೋ ರೀತಿಯಲ್ಲಿ ಬಾಯಿ ಮುಚ್ಚಿಕೊಂಡು ನಿಧಾನಗತಿಯಲ್ಲಿ ತವೆಳುತ್ತಾ ಸಾಗುತ್ತವೆ – ಅದೂ ಸಿಲ್ಕ್ ಬೋರ್ಡ್ ಕ್ರಾಸ್ ಮಾಡುವ ವರೆಗೆ ಮಾತ್ರ! ತದ ನಂತರ ಯಥಾ ಪ್ರಕಾರ ಅವುಗಳ ಘರ್ಜನೆ ಮತ್ತೆ ಶುರು ಆಗುತ್ತದೆ.
ಒಂದು ಸಲ ಈ ಬಸ್ ಗಳು ಅವರವರ ಕಂಪನಿ ಗಳಿಗೆ ತಲುಪಿದಾಗ, ಒಳಗಡೆ ಕಣ್ಮುಚ್ಚಿ ಮಲಗಿರುವ ಸಾಫ್ಟ್ ಲೋಕದ ಜನರು ನಿಧಾನವಾಗಿ ಕಣ್ ತೆಗೆದು ತಮ್ಮ ಕಂಪನಿಯ ಐ ಡಿ ಕಾರ್ಡ್ ಗಳನ್ನ ತಮ್ಮ ಕೊರಳಿಗೆ ಹಾಕಿಕೊಂಡು ಒಂದು ಕೈಯಲ್ಲಿ ಬ್ಯಾಗ್ ಮತ್ತೊಂದು ಕೈಯಲ್ಲಿ ಲಂಚ್ ಬಾಕ್ಸ್ ಹಿಡಿದುಕೊಂಡು ಕಂಪನಿಯ ಒಳಗೆ "ಬಲಗಾಲಿಟ್ಟು" ಪ್ರವೇಶ ಮಾಡುತ್ತಾರೆ.
ಅಲ್ಲಿಗೆ ಸೀನ್ ಒಂದು ಮುಗಿಯಿತು.
ಅಲ್ಲಿಗೆ ಸೀನ್ ಒಂದು ಮುಗಿಯಿತು.
ಕ್ಯೂಬಿಕ್ ಗೆ ಹೋಗಿ ಮಷೀನ್ ಅನ್ಲಾಕ್ ಮಾಡಿ, ಮೊದಲಿಗೆ ಡಬಲ್ ಕ್ಲಿಕ್ ಮಾಡುವುದೇ “Out Look“ ಮೇಲೆ. ಇಲ್ಲಿ ಒಂಥರಾ ತಮಾಷೆ ಇದೆ.
೧. ನೀವು ಮ್ಯಾನೇಜರ್ ಆಗಿದ್ದರೆ “Outlook“ ನಲ್ಲಿ ಮೊದಲು ನೋಡುವುದು ಆ ದಿನದ ಕ್ಯಾಲೆಂಡರ್ ನ್ನ ಹಾಗೆ ಮೀಟಿಂಗ್ ರಿಕ್ವೆಸ್ಟ್ ಗಳನ್ನ.
೨. ನೀವು ಡೆವೆಲಪರ್ ಆಗಿದ್ದರೆ, “ ಹಿಂದಿನ ದಿನ ಮನೆಗೆ ಹೊರಡುವಾಗ ಹಾಗೆ ಬಿಟ್ಟು ಹೋಗಿರುವ ಡಿಬಗ್ ಮೋಡ್ ನಲ್ಲಿರುವ ಕೋಡನ್ನ !”
೩. ನೀವು ಟೆಸ್ಟರ್ ಗಳು ಆಗಿದ್ದರೆ ಒಂದು ಸಲ ಅವತ್ತಿನ ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿ ( ಆನ್ ಲೈನ್ ನಲ್ಲಿ ) ತದ ನಂತರ ಔಟ್ ಲುಕ್ ಓಪನ್ ಮಾಡಿ ಮೇಲ್ ನೋಡುತ್ತಾರೆ.
೪. ನೀವು ಆಫೀಸ್ ಗೆ ಬಂದ ತಕ್ಷಣವೇ ನಿಮ್ಮನ್ನ ಯಾರಾದರೂ ಮೀಟಿಂಗ್ ರೂಂ ಗೆ ಕರೆದರೆ, ಕ್ಲೈಂಟ್ ಲೋಕೇಶನ್ ನಲ್ಲಿ ಏನೋ ಭರ್ಜರಿ ಯಡವಟ್ಟು ಆಗಿದೆ ಅಂತ ಅರ್ಥ.
ನಮ್ಮ ಸಾಫ್ಟ್ ಲೋಕದ ಆಫೀಸ್ ದಿನಚರಿ ಮೊದಲಿಗೆ ಶುರು ಆಗುವುದು “Stand up“ ಮೀಟಿಂಗ್ ಗಳಿಂದ. ನೀವು ನಿಮ್ಮ “Stand up” ಮುಗಿಸಿ ಕುಳಿತು ಕೊಳ್ಳುವಷ್ಟರಲ್ಲಿಯೇ ಕನಿಷ್ಠ ಪಕ್ಷ ಅರ್ಧ ಗಂಟೆ ಆಗಿ ಹೋಗಿರುತ್ತದೆ. ಆಮೇಲೆ ನೀವು ನಿಮ್ಮ ಪ್ರಾಜೆಕ್ಟ್ ಕೆಲಸ ದಲ್ಲಿ ಬ್ಯುಸಿ ಆಗಿರುತ್ತೀರಿ. ಸ್ವಲ್ಪ ಹೊತ್ತಿನ ನಂತರ ಪ್ರಾಜೆಕ್ಟ್ ರಿಲೇಟೆಡ್ ಸಂದೇಹಗಳನ್ನ ನೀವಾರಿಸಿಕೊಳ್ಳಲು ನಿಮ್ಮನ್ನು ಹುಡುಕಿಕೊಂಡು ಯಾರಾದರೊಬ್ಬರು ಬರುತ್ತಾರೆ. ಬಂದವರಿಗೆ ಎಲ್ಲವನ್ನು explain ಮಾಡುವಷ್ಟರಲ್ಲಿ ಮಧ್ಯಾನದ ಊಟದ ಸಮಯ ಆಗಿ ಹೋಗಿ, ನಿಮ್ಮ ಗೆಳೆಯರು ನಿಮ್ಮ communicator ಗೆ lunch? ಅಂತ ಪಿಂಗ್ ಮಾಡಲು ಶುರು ಮಾಡಿರುತ್ತಾರೆ.
ಮಧ್ಯಾನದ ಊಟ ಮುಗಿಸಿಕೊಂಡು ನಿಮ್ಮ ಕ್ಯೂಬಿಕ್ ಗೆ ಬಂದು ಕೂಡು ವಷ್ಟರಲ್ಲಿ ಸಮಯ ಕೂಡ ಮಧ್ಯಾನ ೨ ಗಂಟೆ ಆಗಿರುತ್ತದೆ.
ಅದೇಕೋ ಗೊತ್ತಿಲ್ಲ ಬೆಳಿಗ್ಗೆ ಹೊತ್ತು ಅಷ್ಟೊಂದು ಚಟುವಟಿಕೆಯಲ್ಲಿರುವ ನಮ್ಮ ಮೈಂಡ್ ಮಧ್ಯಾನ ಮಾತ್ರ slow motion ನಲ್ಲಿ ಕೆಲಸ ಮಾಡಲು ಶುರು ಮಾಡಿಬಿಡುತ್ತದೆ. ನಿದ್ದೆ ಯಿಂದ ಆಚೆ ಬರಲು ಒಂದಿಷ್ಟು ಜನ ೩ ಗಂಟೆಯ ಹೊತ್ತಿಗೆ ಕಾಫಿ ಅಥವಾ ಟೀ ಅಥವಾ ಸ್ಮೋಕ್ ಗೆ ಶರಣು ಹೋಗುತ್ತಾರೆ. ಇದೆಲ್ಲವೂ ಒಬ್ಬ ಸಾಮಾನ್ಯ ಸಾಫ್ಟ್ ಲೋಕದವನ ಕಥೆ ಆದರೆ, ನಮ್ಮ ಮ್ಯಾನೇಜರ್ ಹುದ್ದೆಯಲ್ಲಿರುವವರು ಮಾತ್ರ ತಮ್ಮ ಲ್ಯಾಪ್ಟಾಪ್ ಹಿಡಿದುಕೊಂಡು ಬೆಳಿಗ್ಗೆ ಯಿಂದ ಸಂಜೆಯವರಗೆ ಒಂದು ಮೀಟಿಂಗ್ ರೂಂ ನಿಂದ ಇನ್ನೊಂದು ಮೀಟಿಂಗ್ ಗೆ ಹೋಗುತ್ತಲೇ ಇರುತ್ತಾರೆ.
ಸಂಜೆ ನಾಲ್ಕು ಗಂಟೆ ಆದಮೇಲೆ ತಥ ಪ್ರಕಾರ ನಮ್ಮ ಮೈಂಡ್ ಮೊದಲಿನ ಹಾಗೆ ಚಟುವಟಿಕೆಗೆ ಬರುತ್ತದೆ. ಸಾಧಾರಣ ವಾಗಿ ಕ್ಲೈಂಟ್ ಗಳ ಜೊತೆಗಿನ ಮೀಟಿಂಗ್ ಗಳು ಅವರ ಸಮಯಕ್ಕೆ ಹೊಂದಿಕೊಂಡು ಇರುವುದರಿಂದ, ನಮ್ಮ ಭಾರತೀಯ ಕಾಲಮಾನದ ಪ್ರಕಾರ ಹೆಚ್ಚು ಕಡಿಮೆ ಎಲ್ಲ ಕ್ಲೈಂಟ್ ಮೀಟಿಂಗ್ ಸಂಜೆ ೫ ಅಥವಾ ಆರು ಗಂಟೆಯ ಮೇಲೆ ಇರುತ್ತವೆ.
ಕ್ಲೈಂಟ್ ಮೀಟಿಂಗ್ ಗಳನ್ನೂ ಮುಗಿಸಿಕೊಂಡು ಟೈಮ್ ನೋಡಿಕೊಂಡರೆ ೭ ರ ಸುಮಾರು ಆಗಿರುತ್ತದೆ. ಯಥಾ ಪ್ರಕಾರ ನಮ್ಮ ಬಸ್ ಗಳು ಸಹ ನಮ್ಮನ್ನ ಪುನಃ ಮನೆಗೆ ತಲುಪಿಸಲು ರೆಡಿ ಆಗಿ ನಿಂತಿರುತ್ತವೆ . ಬಸ್ ನಲ್ಲಿ ಹತ್ತಿ ದ ತಕ್ಷಣವೇ, “ಬೆಳಿಗ್ಗೆ ಯಿಂದ ಕಂಪ್ಯೂಟರ್ ನ್ನು ನೋಡಿದ ಕಣ್ಣುಗಳು ತಮ್ಮಷ್ಟಕ್ಕೆ ತಾವೇ ಮುಚ್ಚಿ ಕೊಂಡು ಬಿಡುತ್ತವೆ. ಒಂಬತ್ತು ಗಂಟೆಯ ಸುಮಾರಿಗೆ ಮನೆ ತಲುಪಿದ ನಂತರ ಊಟ ಮಾಡಿ, ಹೆಂಡತಿಯ ಜೊತೆ ಒಂದಿಷ್ಟು ಹರಟೆ ಹೊಡೆದು, ಮಕ್ಕಳ ಜೊತೆ ಒಂದ್ನಾಕು ಮಾತಾಡಿ ದಿಂಬಿಗೆ ತಲೆ ಕೊಡುವುದೊಂದೇ ಬಾಕಿ.
ವಾರದ ಬಿಲ್ಡ್ ಲೇಬಲ್ : ಪುನಃ ಮರುದಿನ ಹೇಗಿರುತ್ತದೆ ಅನ್ನೋದಕ್ಕೆ ಇದೇ ಅಂಕಣವನ್ನ ಮತ್ತೆ ಮೊದಲಿನಿಂದಲೂ ಓದಿ.
No comments:
Post a Comment