Sunday, December 14, 2014

ಅಂಕಣ ೪೨: “ಸಾಫ್ಟ್ ಡೈರಿ” ಮುಗಿಸುವ ಮುನ್ನ


ಇಂಥದ್ದೊಂದು Subject ನನಗೆ ಹೊಳೆದದ್ದು ವಿಚಿತ್ರ ರೀತಿಯಲ್ಲಿ. ಪ್ರತಿ ಸಲವೂ ನಾನು ಊರಿಗೆ ಹೋದಾಗ ನನ್ನ ನೌಕರಿಯ ಬಗ್ಗೆ ನನ್ನ ಅಕ್ಕ ಪಕ್ಕದ ಮನೆಯವರಿಗೆ, ನನ್ನ ಬಂದು ಬಳಗದವರಿಗೆ ನನ್ನ ಕೆಲಸ ದ ಬಗ್ಗೆ ಗೊತ್ತಿದ್ದುದ್ದು ಒಂದೇ ಮಾತು : "ಕಂಪ್ಯೂಟರ್ ಕೆಲಸ" ಅಂತ ಮಾತ್ರ.




ನನ್ನ ಮೊದಲ ಅಂಕಣದಲ್ಲಿ ಬರೆದ ಹಾಗೆ ಇವತ್ತಿಗೂ ಸಹ ನಮ್ಮಲ್ಲಿ ಅನೇಕ ಜನ ತಂದೆ - ತಾಯಿಂದರಿಗೂ ಸಹ ನಾವು ಸಾಫ್ಟ್ ಲೋಕದಲ್ಲಿ ಏನು ಕೆಲಸ ಮಾಡ್ತಿವಿ? ನಮ್ಮ ಕೆಲಸದ ರೀತಿ ರಿವಾಜು ಗಳು ಹೇಗಿರುತ್ತವೆ? ಅನ್ನೋದು ಗೊತ್ತೇ ಇರುವುದಿಲ್ಲ .
ಇದನ್ನೇ ಕುರಿತು ಒಂದೆರಡು ಅಂಕಣ ಬರೆದರೆ ಹೇಗೆ ಅನಿಸ್ತು. ಒಂದೆರಡು ಅಂಕಣ ಗಳಿಗಾಗುವಷ್ಟು ತಯಾರಿನೂ ಮಾಡಿಕೊಂಡೆ. ಶುರು ಮಾಡಬೇಕಾದರೆ ಒಂಚೂರು ಗೊಂದಲ ವಿತ್ತು. ಈ ಸಾಫ್ಟ್ ಲೋಕದ ಅಂಕಣಗಳನ್ನ ಸೀರಿಯಸ್ ಆಗಿ ಪ್ರಸ್ತಾಪ ಮಾಡುತ್ತಾ ಹೋಗಬೇಕಾ? ಅಥವಾ ಸ್ವಲ್ಪ ತಮಾಷೆಯಾಗಿ ಬರೆಯುತ್ತಾ ಹೋಗಬೇಕಾ ? ಅಂತ !

ಸ್ವಲ್ಪ ತಮಾಷೆಯಾಗಿ ಬರೆದರೆನೆ ಓದುವವರಿಗೂ ಒಂಥರಾ ಖುಷಿ ಸಿಗುತ್ತೆ ಅಂತ ಎರಡನೆಯದನ್ನು ಆಯ್ಕೆ ಮಾಡಿಕೊಂಡೆ.
ಇದು ಮೊದಲನೆಯ ಭಾಗ ಆಯ್ತು. ಎರಡೆನೆಯದು, ಬರೆದ ಮೇಲೆ ಇದನ್ನು ಎಲ್ಲರಿಗು ಯಾವಾಗ ಕಳಿಸಬೇಕು? ನಮ್ಮೆಲ್ಲರಿಗೂ ಗೊತ್ತಿರುವ ಮಟ್ಟಿಗೆ ಸಾಫ್ಟ್ ಲೋಕದ ಜನ ಸ್ವಲ್ಪ relax ಆಗಿರುವುದು ಶುಕ್ರವಾರದ ದಿನ. ಸರಿ ಪ್ರತಿ ಶುಕ್ರವಾರವೇ ಕಳಿಸಿದರಾಯ್ತು ಅನ್ನುವ ಮುಹೂರ್ಥ ಫಿಕ್ಸ್ ಆಯಿತು:) ಒಂದು ವೇಳೆ ಶುಕ್ರವಾರ ಓದೋದಕ್ಕೆ ಟೈಮ್ ಇಲ್ದೆ ಇರೋರು ಶನಿವಾರ ಅಥವಾ ಭಾನುವಾರ ಕುತ್ಕೊಂಡು ಓದ್ತಾರೆ ಅನ್ನೋ ನನ್ನ ಲಾಜಿಕ್ ಸ್ವಲ್ಪ ಮಟ್ಟಿಗೆ ವರ್ಕ್ ಔಟ್ ಆಯ್ತು ಕೂಡ.  ಮೊದಲ ಅಂಕಣ ಬ್ಲಾಗ್ ನಲ್ಲಿ ಹಾಕಿದ್ದು ೨೦೧೪ ಜನವರಿ ಮೊದಲನೆಯ ಶುಕ್ರವಾರ. ಕಳಿಸಿದ ನಂತರ ಒಳ್ಳೆ ಪ್ರತಿಕ್ರಿಯೆ ನು ಬಂತು.
ಒಂದಿಷ್ಟು ಜನ ಪರವಾಗಿಲ್ಲರಿ ಏನೋ ಡಿಫರೆಂಟ್ ಆಗಿದೆ ಅಂದರೆ, ಇನ್ನೊಂದಿಷ್ಟು ಜನ " ಆಲ್ ದಿ ಬೆಸ್ಟ್ " ಹೇಳಿದರು.
ಕೆಲವರು "ತಮಾಷೆ ಮಾಡೋಕೆ ಒಳ್ಳೆ ಟಾಪಿಕ್'" ಅಂತಾನು ಹೇಳಿದರು. ಸಾಫ್ಟ್ ಲೋಕ ಬರೆಯಬೇಕಾದರೆ ನನಗೆ ಇಷ್ಟವಾದ ಒಂದು ವಿಷಯವೆಂದರೆ "ಇದರಲ್ಲಿ ಬಂದಿರುವ ಹಲವಾರು ಟಾಪಿಕ್ ಗಳನ್ನು suggest ಮಾಡಿದವರು ಓದುಗರು. "ಈ ಟಾಪಿಕ್ ಮೇಲೆ ಬರೀರಿ ಚೆನ್ನಾಗಿರುತ್ತೆ" ಅಂತ ಹೇಳಿದರು. ನಾನು ಬರೆಯುತ್ತಾ ಹೋದೆ. ನಾನು ಕೆಲಸ ಮಾಡುವ ಕಂಪನಿಯಲ್ಲಿ ಕೆಲವರಂತೂ ಬರೀ ಟಾಪಿಕ್ ಅಷ್ಟೇ ಅಲ್ಲ ಅದರ ಜೊತೆಗೆ ಟಾಪಿಕ್ ಗೆ relate ಆಗಿರುವ ವಿಷಯಗಳನ್ನು ಕೊಟ್ಟರು. ಒಂದಿಷ್ಟು ಜನ ಅವಾಗಾವಾಗ ಪಿಂಗ್ ಮಾಡಿ : "ಇವತ್ತು ಹೀಗಾಯ್ತು, ತಮಾಷೆಯಾಗಿ ಇದೆ. ನೋಡಿ ಬೇಕಿದ್ರೆ ನಿಮ್ಮ ಅಂಕಣ ಕ್ಕೆ ಸೇರಿಸಿಕೊಳ್ಳಿ" ಅಂತಾನೂ ಹೇಳಿದರು. ಹೀಗಾಗಿ ನನ್ನ ಸಾಫ್ಟ್ ಲೋಕದ ವಿಷಯಗಳಿಗೆ ಬರವೇ ಬರಲಿಲ್ಲ
ಈ ಕೆಳಗಿನ ವಿಷಯಗಳನ್ನು ಮಾತ್ರ "ಮುಗಿಸುವ ಮುನ್ನ" ಹೇಳಲೇ ಬೇಕು. ಪ್ರತಿ ವಾರ ನಾನು ಸಾಫ್ಟ್ ಲೋಕದ ಅಂಕಣಗಳನ್ನು ಕಳಿಸಿದಾಗ:
೧ ) ಈ ಅಂಕಣ ನಾನು ಓದುವುದಲ್ಲದೆ ನನ್ನ ಮನೆಯಲ್ಲಿ ನನ್ನ ಹೆಂಡತಿ ಮತ್ತು ಅಮ್ಮನಿಗೂ ಓದಿ ಹೇಳುತ್ತೇನೆ. ಸಾಫ್ಟ್ ಲೋಕದ ಬಗ್ಗೆ ಅವರಿಗೂ ಈಗ ಒಂದಿಷ್ಟು ಮಾಹಿತಿ ಇದೆ. ನಿಮ್ಮ ಓದುಗರ ಲಿಸ್ಟ್ ನಲ್ಲಿ ನನ್ನ ಜೊತೆಗೆ ಇನ್ನಿಬ್ಬರನ್ನು ಸೇರಿಸಿಕೊಂಡು ಬಿಡಿ, ಅಂತ ಹೇಳಿ ಕಣ್ಣು ಮಿಟುಕಿಸಿದ್ದಾರೆ.
೨) ಕೆಲವರು ಪ್ರತಿ ವಾರ ಅಂಕಣ ಓದಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಪ್ರತಿವಾರ ಪೋಸ್ಟರ್ ಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
೩) ಒಬ್ಬರ ಫೀಡ್ ಬ್ಯಾಕ್ ಇನ್ನು ನೆನಪಿದೆ : " ರಾಘವೇಂದ್ರ, ಶುಕ್ರವಾರ ಆಫೀಸ್ ನಿಂದ ಎಲ್ಲರು ಕಾಲ್ಕಿತ್ತ ಬಳಿಕ ಒಬ್ಬನೇ ಆರಾಮಾಗಿ ಕುಳಿತು ನಿಮ್ಮ ಅಂಕಣ ಓದುತ್ತೇನೆ.ಒಂಥರಾ ರಿಲೀಫ್ ಆಗುತ್ತೆ.
೪) ಬ್ಲಾಗ್ , ಇಂಟರ್ ನೆಟ್ ಗೊತ್ತಿಲ್ಲದವರಿಗೆ, ಇದು ಪುಸ್ತಕ ರೂಪದಲ್ಲಿ ಬಂದರೆ ಉತ್ತಮ ಅಂತಾನೂ ಸಲಹಾ ಕೊಟ್ಟೋರು ಸಹ ಇದಾರೆ.
ಇದೆಲ್ಲವನ್ನು ನಾನು ಇಲ್ಲಿ ಪ್ರಸ್ತಾಪ ಮಾಡಿದ್ದು ನನ್ನ ಅಂಕಣದ ಹೆಗ್ಗಳಿಕೆಯನ್ನ ಹೇಳಿಕೊಳ್ಳಲು ಅಲ್ಲ. ಬದಲಿಗೆ ಇವರೆಲ್ಲರಿಗೂ ಒಂದು ವಿನಮ್ರತೆಯ ಧನ್ಯವಾದಗಳನ್ನು ಅರ್ಪಿಸಲು.
ಒಂದು ತಮಾಷೆಯ ವಿಷಯ ಅಂದರೆ, ಪ್ರತಿ ವಾರ ಒಂದೊಂದು ಸಾಫ್ಟ್ ಲೋಕದ ವಿಷಯ ದ ಬಗ್ಗೆ ಬರೆಯುತ್ತಿದ್ದಾಗ, ನನ್ನ ಒಂದಿಬ್ಬರು ಮಿತ್ರರು, " ಗುರುವೇ, ಮ್ಯಾನೇಜರ್ ಬಗ್ಗೆ ಒಂದು ಅಂಕಣ ಬರೀತಾ ಇದ್ದೀಯ ತಾನೇ? ಸ್ವಲ್ಪ ಚೆನ್ನಾಗಿ ಬರಿ ಅದನ್ನ!" ಅಂತ ತಾಕೀತು ಮಾಡಿದ್ದರು. ಪಾಪ ಅವರಿಗೆ ಮ್ಯಾನೇಜರ್ ಮೇಲೆ ಅದ್ಯಾವ ಸಿಟ್ಟು ಇತ್ತೋ?
ಅದೇನೇ ಇರಲಿ, ಹೊಸತನವನ್ನ ಸ್ವೀಕರಿಸುವ ಎಲ್ಲ ಓದುಗರ  ಓಪನ್ ಮೈಂಡೆಡ್ ನೆಸ್ ಗೆ ನನ್ನ ಧನ್ಯವಾದಗಳು. ಪ್ರತಿ ವಾರ ಅಂಕಣಕ್ಕೆ ತಕ್ಕಂತೆ ಪೋಸ್ಟರ್ ಗಳನ್ನು ಡಿಸೈನ್ ಮಾಡಿಕೊಟ್ಟ ಮತ್ತು ಅದರ ಮೇಲೆ ಎಷ್ಟೇ changes ಗಳನ್ನು ಹೇಳಿದರೂ ಸ್ವಲ್ಪ ವೂ ಬೇಸರಿಸಿಕೊಳ್ಳದೆ ಅಷ್ಟೇ ಪೋಸ್ಟರ್ ಗಳನ್ನೂ ಖುಷಿಯಾಗಿ ತಯಾರಿಸಿ ಕೊಟ್ಟ "ಶ್ರೀಮತಿ ವಿದ್ಯಾ ಭರತ್" ಅವರಿಗೆ ಹಾಗು " ಕಾರ್ತಿಕ್" ಅವರಿಗೆ ಧನ್ಯವಾದಗಳು. ಒಂದಿಷ್ಟು ವಿಷಯದ ಮೇಲೆ ಬರೆಯುವಾಗ ( ಸಾಫ್ಟ್ ಪಡ್ಡೆಗಳು, ಸಾಫ್ಟ್ Developers) ತಮಗೆ ಗೊತ್ತಿರುವ ವಿಷಯಗಳನ್ನ ನನಗೆ ಕರೆದು ಹೇಳಿದ ಜನರಿಗೆ ಧನ್ಯವಾದಗಳು.  ಸಾಫ್ಟ್ ಡೈರಿ ಮೇಲ್ ಬರುತ್ತಿದಂತೆಯೇ ಅದನ್ನ ತಮ್ಮ ಟೀಂ ನವರಿಗೆಲ್ಲರಿಗೂ ಕಳಿಸಿದ ವರಿಗೂ ಧನ್ಯವಾದಗಳು. ಫೇಸ್ಬುಕ್ ನಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ ಎಲ್ಲರಿಗೂ ಧನ್ಯವಾದಗಳು. "ಇಷ್ಟ ಆಯ್ತು ಮತ್ತು ಈ ವಾರ ಅಷ್ಟೊಂದು ಪಂಚ್ ಇರಲಿಲ್ಲ" ಅಂತ ಪ್ರತಿ ವಾರವೂ ತಮ್ಮ ನೆರವಾದ ಅನಿಸಿಕ ಕೊಟ್ಟ ನನ್ನ ಆತ್ಮೀಯ ಸ್ನೇಹಿತರಿಗೆಲ್ಲರಿಗೂ ಧನ್ಯವಾದಗಳು. ಇದಲ್ಲದೇ ಅಂಕಣ ದಲ್ಲಿ ಬರುವ ಅನೇಕ ತಪ್ಪುಗಳನ್ನು, spelling mistake ಗಳನ್ನ ಓದಿದ ತಕ್ಷಣವೇ ಹೇಳಿ ನನಗೆ ಅಂಕಣ ತಿದ್ದಲು ಅವಕಾಶ ಮಾಡಿರುವ ಎಲ್ಲರಿಗು ಧನ್ಯವಾದಗಳು.

ವರ್ಷದ ಕೊನೆಯ ಬಿಲ್ಡ್ ಲೇಬಲ್ :
ಅದೇನೋ ಗೊತ್ತಿಲ್ಲ ಸಾಫ್ಟ್ ಲೋಕದ ಜನ ಮಾತ್ರ ತಮ್ಮ ಮಕ್ಕಳು "ಸಾಫ್ಟ್ ಲೋಕಕ್ಕೆ ಬರಲಿ" ಅಂತ ಮಾತ್ರ ಬಯಸುವುದಿಲ್ಲ.

ಎಲ್ಲರಿಗು ಹೊಸ ವರ್ಷದ ಶುಭಾಶಯಗಳು !

No comments:

Post a Comment