Thursday, September 18, 2014

ಅಂಕಣ ೩೨ : Soft Frustrations

ಸಾಫ್ಟ್ ಲೋಕದಲ್ಲಿನ ಒಂದಿಷ್ಟು ಇರಿಟೆಶನ್ ಗಳನ್ನ ನೋಡೋಣ. ಆಫ್ ಕೋರ್ಸ್, ಪ್ರತಿಯೊಬ್ಬರೂ ಈ ಕೆಳಗೆ ಹೇಳಿದುದರಲ್ಲಿ  ಒಂದಲ್ಲ ಒಂದನ್ನ  ಫೆಸ್ ಮಾಡಿಯೇ ಇರುತ್ತೇವೆ.



೦೧. ಮೊದಲ ಸಲದ ಬೋನಸ್ ಅಮೌಂಟ್ ಕೇಳಿದಾಗ ಆಗುವ ಖುಷಿ ಮತ್ತು ಆ ಬೋನಸ್ ಟ್ಯಾಕ್ಸ್ ಕಟ್ ಆಗಿ ನಮ್ಮ ಕೈಗೆ ಸೇರಿದಾಗ ಆಗುವ ಹಾರ್ಟ್ ಅಟ್ಯಾಕ್.

೦೨. ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ನಿಮ್ಮ ಪ್ರೀತಿಯ ಮ್ಯಾನೇಜರ್ ನಿಂದ ನಿಮಗೊಂದು ಮನವಿ;
ಸ್ವಲ್ಪ ಆ ಕೆಲಸಾನೂ ಮುಗಿಸಿ ಬಿಡ್ತೀರಾ?

೦೩.ನೀವು ಅಷ್ಟು ದಿನ  ಕಂಪನಿಯ ಔಟಿಂಗ್ ಸಲುವಾಗಿ ಕಾಯುತ್ತ ಇರುತ್ತೀರಿ. ಆದರೆ ನಿಮ್ಮ ದುರ್ದೈವಕ್ಕೆ ಕಂಪನಿಯ ಔಟಿಂಗ್ ಹಿಂದಿನ ದಿನ  ನಿಮ್ಮ ಆರೋಗ್ಯ ಕೈ ಕೊಟ್ಟಾಗ!

೦೪. ನೀವು "ಅಷ್ಟೂ  ದೇವರ"  ಕೈ ಮುಗಿದರೂ ನಿಮ್ಮ ವೀಸಾ ರಿಜೆಕ್ಟ್  ಆದಾಗ.

೦೫. ವೀಕೆಂಡ್ ನಲ್ಲಿ ಆರಾಮಾಗಿ ಮನೇಲಿ ಇದ್ದಾಗ ನಿಮ್ಮ ಮೊಬೈಲಿಗೆ ಒಂದು ಫೋನ್ ಬರುತ್ತೆ :  "ನಿಮ್ಮ ಪ್ರೀತಿಯ ಮ್ಯಾನೇಜರ್" ನಿಂದ ಪುನಃ ನಿಮಗೊಂದು ಮನವಿ;
ನಿಮ್ಮ ಮನೆ ಹತ್ತಿರಾನೆ ಇದೆ, ಸ್ವಲ್ಪ ಆಫಿಸ್ ಗೆ ಬಂದು ಆ ಕೆಲಸ ಮುಗಿಸೋಕೆ ಆಗುತ್ತಾ?

೦೬. ಇವತ್ತು ಎಷ್ಟೊತ್ತಾದರೂ ಆಗಲಿ ಕೆಲಸ complete ಮಾಡಿಯೇ ಬಿಡೋಣ ಅಂತ ಶಪಥ ಮಾಡಿ office ಬಂದಾಗ, ಆ ದಿನವೇ ನಿಮ್ಮ ಮಷೀನ್ ಕ್ರಾಶ್ ಆದಾಗ... 

೦೭. ಮುಂದೆ ಏನು ಮಾಡ ಬೇಕು ಅಂತ ಗೊತ್ತಾಗದೆ ಫ್ರೆಶರ್ ನೊಬ್ಬ  ತನ್ನ Team Lead  ನ instruction ಗಾಗಿ  ಕಾಯುತ್ತಾ  ಕೂಡಬೇಕಾಗಿ ಬಂದಾಗ .... 

೦೮. ಮದುವೆ ಆದ ಮೇಲೆ ಹೆಂಡತಿಗೆ ನಿಮ್ಮ ನಿಜವಾದ ಸ್ಯಾಲರಿ ಗೊತ್ತಾದಾಗ!

೦೯. Planned SICK ಲೀವ್ ನಲ್ಲಿ ನಿಜವಾಗಲೂ ಜ್ವರ ಬಂದಾಗ!

೧೦. ಮೂವತ್ತು ನಿಮಿಷದ STAND UP ಮೀಟಿಂಗ ಗಳು , ಎರಡು ಗಂಟೆಯಾದರೂ ಮುಗಿಯದೆ ಇದ್ದಾಗ!

೧೧. Weekend ಮುಗಿಸಿಕೊಂಡು ಸೋಮವಾರ ಬೆಳಿಗ್ಗೆ ನೀವು 'ನಿಮ್ಮ ಊರಿನಿಂದ' ಬೆಂಗಳೂರಿಗೆ ಬಂದಾಗ ಮತ್ತು ಅವತ್ತೇ ಬೆಂಗಳೂರಿನಲ್ಲಿ ಒಂದು ಸ್ಟ್ರೈಕ್ ನಿಂದಾಗಿ    ಆಫಿಸ್ ಗೆ ರಜ ಅಂತ ಗೊತ್ತಾದಾಗ.

೧೨. ನಿಮ್ಮ ಮದುವೆ ಸಂಧರ್ಭದಲ್ಲೇ ಆಫಿಸ್ ನಲ್ಲಿ  ಪ್ರಾಜೆಕ್ಟ್  ರಿಲೀಸ್ ಡೇಟ್ ಹತ್ತಿರ ಬಂದಾಗ!

೧೩.  ಐದು ನಿಮಿಷ ಲೇಟಾಗಿ ನಿಮಗೆ ನಿಮ್ಮ ಆಫಿಸ್ ಬಸ್ ತಪ್ಪಿದಾಗ!


ವಾರದ ಬಿಲ್ಡ್ ಲೇಬಲ್ : ಇದ್ಯಾವುದು ಇನ್ನೂ  ನಿಮ್ಮ ಅನುಭವಕ್ಕೆ ಬಾರದೆ ಇದ್ದರೆ ನೀವೇ ಧನ್ಯರು!

No comments:

Post a Comment