Tuesday, September 2, 2014

ಅಂಕಣ ೩೧: ಸಾಫ್ಟ್ ಲೋಕದಲ್ಲಿ ಫಿಲಂ ಕ್ರೇಜ್

ಸಾಫ್ಟ್ ಲೋಕ ಆದರೇನು, ಯಾವ ಲೋಕ ಆದರೇನು ? ಭಾರತದಲ್ಲಿ ಫಿಲಂ ಕ್ರೇಜ್ ಇಲ್ಲದೆ ಇರುತ್ತಾ? ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದವರಿಗೆ! ಇದಕ್ಕೆ ಸಾಫ್ಟ್ ಲೋಕ ಕೂಡ ಹೊರತಲ್ಲ. ಆದರೆ ನಾವು ವಿಭಿನ್ನ ಅಂತ ಮಾತ್ರ ಹೇಳಬಹುದು.ಬೇರೆ ಲೋಕದಲ್ಲಿ ಇರುವಂತೆ ನಮ್ಮ ಲೋಕದಲ್ಲಿಯೂ ಸಹ ನಟ ನಟಿಯರಿಗೆ ಅಭಿಮಾನಿಗಳು ಇದ್ದೆ ಇರುತ್ತಾರೆ.  ಅನಾಲಿಸಿಸ್ ಅನ್ನೋದು ನಮ್ಮ ವೃತ್ತಿಪರತೆಯ ಒಂದು ಭಾಗವಾಗಿದ್ದರಿಂದ, ಯಾವುದೇ ಸಾಫ್ಟ್ ಲೋಕದ ಮನುಷ್ಯ ತಾನು ಮೆಚ್ಚು ನಟ ಅಥವಾ ನಟಿಯ ಸಿನಿಮಾ ರಂಗ ಹೊರತು ಪಡಿಸಿ ಅವರ ಬೇರೆ ವಿಷಯಗಳನ್ನು ಸಹ ಅಳೆದು ತೂಗಿರುತ್ತಾನೆ. ತನ್ನ ನೆಚ್ಚಿನ ನಟ ಅಥವಾ ನಟಿಯ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿರುತ್ತಾನೆ. ತನ್ನ ನೆಚ್ಚಿನ ನಟ ಅಥವಾ ನಟಿ ಸಿನಿಮಾ ರಂಗ ಹೊರತು ಪಡಿಸಿ ಬೇರೆ ಯಾವ ವಿಷಯಗಳಲ್ಲಿ ಭಾಗಿಯಾಗಿದ್ದಾರೆ, ಸಮಾಜ ಮುಖ ಕಾರ್ಯಗಳಿಗೆ ಅವರ ಕೊಡುಗೆ ಏನು, ಅವರ ಸಿದ್ದಾಂತ ಅಥವಾ ತತ್ವ ಏನು ಅನ್ನೋದರ ಕೂಡಾನೂ ಸ್ವಲ್ಪ ಗಮನ ಹರಿಸಿರುತ್ತಾನೆ.


ಇನ್ನು ದಕ್ಷಿಣ ಭಾರತದ ವಿಷಯಕ್ಕೆ ಬಂದರೆ, ನಮ್ಮ ಜನ ಸ್ವಲ್ಪ ಭಾವನಾತ್ಮಕ ಜೀವೆಗಳು ಅನ್ನೋದು ಎಲ್ಲರಿಗೂ ಗೊತ್ತು . ವಿಶೇಷವಾಗಿ ಆಂಧ್ರ ಪ್ರದೇಶ ಹಾಗು ತಮಿಳುನಾಡು ಜನರಿಗೆ ನಟ ನಟಿಯರು ಅಂದರೆ  ಜೀವಾಳ ಹಾಗು ಅವರ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡಿರುತ್ತಾರೆ. ಕನ್ನಡಿಗರೂ ಸಹ ವೀಪರಿತ ಅಲ್ಲದಿದ್ದರೂ ಅಭಿಮಾನದ ವಿಷಯ ದಲ್ಲಿ ಹಿಂದೆ ಬಿದ್ದರವರಲ್ಲ  ಕೆಲವೊಂದು ಸಲ ನಟ ನಟಿಯರ ಪರ ವಿರೋಧ ಚರ್ಚೆಗಳು ಸ್ವಲ್ಪ ತಾರಕಕ್ಕೂ ಹೋಗುವುದುಂಟು.  ಕನ್ನಡದವರ ಮಟ್ಟಿಗೆ ಹೇಳುವುದಾದರೆ ನಮ್ಮ ಹೊಸ ತಲೆಮಾರಿನ ಎಲ್ಲ ಬಹುಪಾಲು ಸಾಫ್ಟ್ ಲೋಕದವರಿಗೆ ಶಂಕ್ರಣ್ಣ ಅಂದ್ರೆ ಎಲ್ಲಿಲ್ಲದ ಅಭಿಮಾನ .
ಬಹುಶ ಸಾಫ್ಟ್ ಲೋಕದ ಹೊಸ ತಲೆಮಾರಿನವರಿಗೆ ಹೊಸತನಗಳು ತುಂಬಾ ಇಷ್ಟ. ಶಂಕ್ರಣ್ಣ ಕೂಡ ೮೦ – ೯೦ ರ ದಶಕದಲ್ಲೇ ಎಲ್ಲ ರೀತಿಯ ಹೊಸತನಗಳಿಗೆ ಕೈ ಹಾಕಿ ಸೈ  ಎನಿಸಿಕೊಂಡವರು. ಅದಕ್ಕೆ ಸಾಫ್ಟ್ ಲೋಕದ ಕನ್ನಡಿಗರಿಗೆ ಇಷ್ಟ ಆಗೋದು.
ಅಲ್ಲಿಗೆ ನಮ್ಮ ಶಂಕ್ರಣ್ಣ   ಆಟೋ ರಾಜ ನಿಂದ ಸಾಫ್ಟ್ ಲೋಕದ ರಾಜ ನಾಗಿಯೂ ಪಟ್ಟವೇರಿದ್ದಾರೆ ಅಂದರೆ  ಅತೀಶಯೋಕ್ತಿವೇನಲ್ಲ .
ಶಂಕರನಾಗ್ ಅವರ ಕುರಿತಾಗಿ ಬೇರೆ ರಾಜ್ಯದವರು ಸಹ; “ Hey, he is the director of “MALGUDI DAYS” right? i love those ಸೀರಿಯಲ್ series. Often i see his photo in almost all auto in bangalore ಅಂತ ಹೇಳಿದಾಗ ನಮ್ಮವರು ಮನಸ್ಸಿನಲ್ಲೇ ಹಿರಿ ಹಿರಿ ಹಿಗ್ಗಿರುತ್ತಾರೆ.
ಇದಕ್ಕೆಲ್ಲ ಹೊರತಾಗಿ ಸಾಫ್ಟ್ ಲೋಕದಲ್ಲಿ ಇನ್ನೊಂದು ಗುಂಪು ಇದೆ. ಅವರು ಭಾರತೀಯ ಚಿತ್ರಗಳನ್ನ ನೋಡುವುದೇ ಕಡಿಮೆ. ಅವರದೇನಿದ್ದರೂ ಹಾಲಿವುಡ್ ಚಿತ್ರಗಳು. ಭಾಷೆ ಬದಲಾದರೆನಂತೆ? ಅವರೂ ಸಹ ನಮ್ಮ ಹಾಗೆಯೇ ತಮ್ಮ ತಮ್ಮ ನೆಚ್ಚಿನ ನಟ ನಟಿಯರ ಬಗೆಗಿನ ಮಾಹಿತಿಯನ್ನ ಕಲೆ ಹಾಕಿಕೊಂಡಿರುತ್ತಾರೆ . ಅವರ ಕುರಿತಾಗಿ ಅನೇಕ ವಿಷಯಗಳನ್ನು ತಿಳಿದುಕೊಂಡಿರುತ್ತಾರೆ.
ಈ ಮೇಲಿನ ಮೂರು ಗುಂಪನ್ನು ಹೊರತು ಪಡಿಸಿ ಸಾಫ್ಟ್ ಲೋಕದಲ್ಲಿ ಇನ್ನೊಂದು ಗುಂಪು ಇದೆ. ಅವರು ನಟ ನಟಿಯರನ್ನು ಹೆಚ್ಚು ಇಷ್ಟ ಪಡುವುದಕ್ಕಿಂತ, ಅವರು ಸಿನಿಮಾ ರಂಗದ ನಿರ್ದೇಶಕರಮೇಲೆ ಎಲ್ಲಿಲ್ಲದ ಒಲವು. ಹೀಗಾಗಿ ಅವರು ಯಾವುದೇ ಚಿತ್ರಕ್ಕೆ ಹೋಗಬೇಕಾದರೂ ನಿರ್ದೇಶಕ ಯಾರು? ಅನ್ನೋದು ಅವರ ಮೊದಲ ಪ್ರಶ್ನೆ ಸಹ.
ಸಾಫ್ಟ್ ಲೋಕದಲ್ಲಿ ಬರೀ ಮೂವಿ ಗಳನ್ನೂ ನೋಡುವವರು ಅಷ್ಟೇ ಅಲ್ಲ, ತಮ್ಮ ಬಿಡುವಿನ ವೇಳೆಯಲ್ಲಿ ಕ್ಯಾಮೆರಾ ವನ್ನು ಹೆಗಲಿಗೆ ಸಿಗಿಸಿಕೊಂಡು short movie ಗಳನ್ನ ಮಾಡಲು ಹೊರಟು  ಬಿಡುತ್ತಾರೆ. ಸಿನಿಮಾ ಹೊರತಾಗಿ ನಾಟಕಗಳನ್ನು ನೋಡುವ ಮತ್ತು ಪ್ರೀತಿಸುವ ಜನರು ಸಹ ಸಾಫ್ಟ್ ಲೋಕದಲ್ಲಿದ್ದಾರೆ.  ವೀಕೆಂಡ್ ನ ಯಾವುದಾದರೂ ಒಂದು ದಿನ ನೀವು ರಂಗ ಶಂಕರ ಕ್ಕೆ ಹೋಗಿ ನೋಡಿ, ಅಲ್ಲಿರುವ ಪ್ರೇಕ್ಷಕರ ಪೈಕಿ ಕನಿಷ್ಠ ಅರ್ಧದಷ್ಟು ಜನ ಸಾಫ್ಟ್ ಲೋಕದಿಂದ ಬಂದವರಿರುತ್ತಾರೆ.


ಈ ವಾರದ ಬಿಲ್ಡ್ ಲೇಬಲ್ : ಸಾಫ್ಟ್ ಲೋಕದ ಜನರ ಮನೆಯಲ್ಲಿ ಇರುವ ‘hard disk ನಲ್ಲಿ ೯೦% occupy ಆಗಿರುವುದು ಒಂದು ಮೂವಿಸ್ ಇನ್ನೊಂದು ಸಾಫ್ಟ್ ವೇರ್ಸ್.

No comments:

Post a Comment