Thursday, September 25, 2014

ಅಂಕಣ ೩೩: On Bench

ಇದೊಂದು ತರಹದ ಯಾತನೆ ಮಾತ್ರ ಸಾಫ್ಟ್ ಲೋಕದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ಅನುಭವಿಸಿರುತ್ತೇವೆ. ಅಂಕಣದಲ್ಲಿನ ಪೋಸ್ಟರ್ ನಲ್ಲಿ ತೋರಿಸಿದ ಹಾಗೆ "ಆನ್ ಬೆಂಚ್" ಅಂದ್ರೆ ಸಾಫ್ಟ್ ಲೋಕದ ಸಾಫ್ಟ್ ಜನರು " ಬೆಂಚ್" ಮೇಲೆ ಕೂತಿರುವುದಿಲ್ಲ ಆದರೆ, ಮಾನಸಿಕವಾಗಿ ಒಂಥರಾ ಹಾಗೆ ಇರುತ್ತದೆ. "ಆನ್ ಬೆಂಚ್" ಅಂದ್ರೆ ಸಾಫ್ಟ್ ಲೋಕದಲ್ಲಿ ಸದ್ಯಕ್ಕೆ ಕೆಲಸ ಇಲ್ಲ, ಸ್ವಲ್ಪ ಹಾಗೆ ಕುತ್ಕೊಂಡಿರು ಕೆಲಸ ಬಂದಾಗ ಮತ್ತೆ ಕರಿತೀವಿ  ಅಂತ ಅರ್ಥ. ಇದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ, ಇದನ್ನ ಅನುಭವಿಸಿದವರಿಗೆ ಗೊತ್ತು " ಬೆಂಚ್ ಮೇಲೆ ಕೂಡೋದು ಎಷ್ಟು ಕಷ್ಟದ ಕೆಲಸ ಅಂತ". ಯಾಕಂದರೆ ಸ್ಕೂಲ್ ನಲ್ಲಿ ಬೆಂಚ್ ಮೇಲೆ ನಿಲ್ಲೋದು ಮತ್ತು ಸಾಫ್ಟ್ ಲೋಕದಲ್ಲಿ ಬೆಂಚ್ ಮೇಲೆ ಕೂಡೋದು ಎರಡು ಒಂದೇ. ಕನಿಷ್ಠ ಪಕ್ಷ ಸ್ಕೂಲ್ ನಲ್ಲಿ ಬೆಂಚ್ ಮೇಲೆ ನಿಲ್ಲೋದು ಒಂದು ಪಿರಿಯಡ್ ಗೆ ಮಾತ್ರ. ಆದ್ರೆ ಇಲ್ಲಿ? ಯಾವನಿಗ್ಗೊತ್ತು?



ಪ್ರಶ್ನೆ ಬೆಂಚ್ ಮೇಲೆ ಕೂಡೋದು ಅಲ್ಲ, ಪ್ರಶ್ನೆ ಅಲ್ಲಿ ಕೂತು ಏನು ಮಾಡಬೇಕು? . ಮನುಷ್ಯನಿಗೆ ಯಾವುದಾದರು ಒಂದು ಕೆಲಸ ವಿರಲೇಬೇಕು. ಇಲ್ಲಾಂದ್ರೆ ತಲೆ ಅನ್ನೋದು ನೂರಾರು ಡೈರೆಕ್ಷನ್ ಕಡೆ ಆಲೋಚನೆ ಮಾಡಲು ಶುರು ಮಾಡುತ್ತೆ.  ಆನ್ ಬೆಂಚ್ ಮೊದಲೆರಡು ದಿನ ಸರಿ ಅನಿಸಬಹುದು. ಆದರೆ ಬರು ಬರುತ್ತಾ ಬೋರು ಹೊಡೆಯೋಕೆ ಶುರು ಆಗಿ ಬಿಡುತ್ತೆ. ಏನು ಕೆಲಸವಿಲ್ಲದೇ ಸುಮ್ಮನೆ ಕಂಪ್ಯೂಟರ್ ಮುಂದೆ ಕೂಡಬೇಕು ಅಂದ್ರೆ ಹೇಗೆ ಆಗುತ್ತೆ ನೀವೇ ಹೇಳಿ?


ಅಲ್ಲಿವರೆಗೆ ನಿಮಗೆ ತಿರುಗಿ ನೋಡದಷ್ಟು ಟೈಮ್ ಇಲ್ಲದ ಹಾಗೆ ರಾಶಿ  ಕೆಲಸ ಇರುತ್ತೆ ಅಂತ ತಿಳ್ಕೋಳ್ಳಿ. ಒಂದು ದಿನ ನೀವು  ಮಾಡ್ತಾ ಇರೋ ಪ್ರಾಜೆಕ್ಟ್ ಕೊನೆಯ ಹಂತಕ್ಕೆ ಬಂದು ತಲುಪುತ್ತೆ. ಅದಾದ ಮೇಲೆ ನಿಮಗೆ ಒಂದು ವಾರವೋ, ಹದಿನೈದು ದಿವಸವೋ ಒಂದೊಂದು ಸಲ ಒಂದು ತಿಂಗಳು ಪೂರ್ತಿ ಕೈಯಲ್ಲಿ ಕೆಲಸವೇ ಇರುವುದಿಲ್ಲ ಅಂತಾದರೆ  ಅಲ್ಲಿವರೆಗೂ ಬ್ಯುಸಿ ಆಗಿದ್ದ ಮೈಂಡ್ ತಕ್ಷಣಕ್ಕೆ ಬ್ಲಾಂಕ್ ಅದಾಗ ಹೇಗಾಗ ಬೇಡ? . ಒಂದೆರಡು ದಿನ ಸರಿ ಇರ್ತೀವಿ, ತದ  ನಂತರ ನಿಧಾನವಾಗಿ irritation ಶುರು ಆಗುತ್ತೆ. ಏನು ಮಾಡಬೇಕು ಅಂತ ಗೊತ್ತಾಗದೆ ಕಾಫಿ / ಟೀ ನೆಪ ಹೇಳಿ ದಿನಕ್ಕೆ ಒಂದೈದು ಸಲ ಪ್ಯಾಂಟ್ರಿ ದರ್ಶನ ಮಾಡುತ್ತೇವೆ. ಇಂಟರ್ನೆಟ್ ಆಯ್ತು, ಬ್ರೌಸಿಂಗ್ ಆಯ್ತು, ಚಾಟಿಂಗ್ ಆಯ್ತು , ನ್ಯೂಸ್ ಪೇಪರ್ ಓದಿದ್ದು ಆಯ್ತು, ಒಂದಿಷ್ಟು ಜನರ ಜೊತೆ ಫೋನ್ ನಲ್ಲಿ ಮಾತಾಡಿದ್ದು ಆಯ್ತು, ಇಂಟರ್ನೆಟ್ ನಲ್ಲಿ How to become best father, mother, husband ಅನ್ನುವ ಎಲ್ಲ series ಗಳನ್ನು  ಓದಿದ್ದೂ  ಆಯ್ತು, windows ನಲ್ಲಿ ರನ್ ಗೆ ಹೋಗಿ calc ಓಪನ್ ಮಾಡಿ ನಮ್ಮ ಸಂಬಳ  ಮತ್ತು ಎಲ್ಲ ಸಾಲ ಸೋಲಗಳ ಲೆಕ್ಕ ಹಾಕಿದ್ದು ಆಯ್ತು, ಪಿ ಎಫ್ ನಿಂದ ಹಿಡಿದು ಗ್ರಾಚುಟಿ ವರೆಗಿನ ಎಲ್ಲ ಲೆಕ್ಕಾಚಾರಗಳು ಮುಗಿಯೀತು".

ಮುಂದೆ ? ಎಷ್ಟು ದಿನ ಅಂತ ಹೀಗೆ ಮಾಡೋದು?

ಅವಾಗಲೇ ಅನಿಸುತ್ತೆ, " ಛೆ ಒಂದಿಷ್ಟು ಕೆಲಸ ವಿರಬಾರದಾ ಅಂತ". ಅದಕ್ಕೆ ಸಾಫ್ಟ್ ಲೋಕದಲ್ಲಿ ಇಂತಹ ಟೈಮ್ ಪಿರಿಯಡ್ ಗಳಲ್ಲಿ ಟ್ರೇನಿಂಗ ಗಳನ್ನ ಅಟೆಂಡ್ ಮಾಡು ಅಂತ ಕಳಿಸುತ್ತಾರೆ ಅಥವಾ ಮೊದಲಿಗೆ ಪ್ಲಾನ್ ಮಾಡಿ ಬಿಟ್ಟಿರುತ್ತಾರೆ.


ನನ್ನ ಸ್ನೇಹಿತನೊಬ್ಬ " ಸಾಫ್ಟ್ ಲೋಕದಲ್ಲಿದಲ್ಲಿ ಖಾಲಿ" ಎನ್ನುವ ಹೆಡ್ಡಿಂಗ್ ನಡಿ, ಕೆಲಸವಿಲ್ಲದಿರುವಾಗ ನಾವು ಏನೇನು ಮಾಡಬಹುದು ಅಂತ ಒಂದೈದು ಪಾಯಿಂಟ್ ಗಳನ್ನ ಲಿಸ್ಟ್ ಮಾಡಿದ್ದಾನೆ. ಮತ್ತು ಅದನ್ನ ನನಗೆ ಕಳಿಸಿ ಕೊಟ್ಟಿದ್ದಾನೆ. ನಾನು ಯಥಾವತ್ತಾಗಿ ನಿಮಗೆ ಅದನ್ನ ತಲುಪಿಸುತ್ತಿದ್ದೇನೆ. ಓದಿ, ಎಂಜಾಯ್ ಮಾಡಿ.
01. If you dont have much work, walk fast and look worried.
02. Save your project application as wall paper.
03. Create one detective agency in office and find out who is leaving the organization.
04. Visit all the floors of the company.
05. Prepare coffee in pantry and give it to all your friends.
06. Read all philosophical books.
07. Spread some rumor.

ವಾರದ ಬಿಲ್ಡ್ ಲೇಬಲ್ : ಮೇಲಿನ ಪಾಯಿಂಟ್ ಗಳನ್ನ ಕೆಲಸವಿಲ್ಲದಿರುವಾಗ ನೀವು ಮಾಡುತ್ತೀರೋ ಬಿಡುತ್ತೀರೋ ಅನ್ನೋದು ಮಾತ್ರ ನಿಮ್ಮ ವಿವೇಚನೆಗೆ ಬಿಟ್ಟದ್ದು!

No comments:

Post a Comment