Thursday, August 7, 2014

ಅಂಕಣ ೨೮ : ಸಾಫ್ಟ್ ಲೋಕ ಮತ್ತು ONSITE

ಸಾಫ್ಟ್ ಲೋಕದಲ್ಲಿರುವ ಪ್ರತಿಯೊಂದು ಬಡಜೀವವೂ ತಲ್ಲಣಿಸುವ, ತವಕಿಸುವ, ತಡಕಾಡುವ ಏಕೈಕ ಶಬ್ದ ಇದು.
ಬರೀ ಶಬ್ದ ಅಲ್ಲ, ಇದೊಂದು ಪ್ರತಿಷ್ಠೆ ಸಹ. ಬರೀ ಪ್ರತಿಷ್ಠೆ ಅಲ್ಲ, ಪ್ರತಿಯೊಬ್ಬರ ಕೆರಿಯರ್ ನಲ್ಲೂ ಇದೊಂದು ಛಾಪು.  ಚಾಪಿನ ಜೊತೆ ಜೊತೆಗೆ ಆನ್ ಸೈಟ್ ಗೆ ಹೋಗಿ ಬಂದ ಪ್ರತಿಯೊಬ್ಬ ಹುಡುಗ / ಹುಡುಗಿ ತಲೆಯಲ್ಲಿ ಒಂದು ಗರಿ. ಅವರಿಗಷ್ಟೇ ಅಲ್ಲ, ಅವರ ತಂದೆ- ತಾಯಿಗೂ ಸಹ ನಮ್ಮ ಹುಡುಗ ಇಂತಹ ಕಂಪನಿ ಯಲ್ಲಿ ಕೆಲಸ ಮಾಡ್ತಾ ಇದಾನೆ. ಮೊನ್ನೆ ತಾನೇ ನಮ್ಮ ಹುಡುಗಾನೂ  ಅಮೆರಿಕಾ ಕ್ಕೆ  ಹೋಗಿ ಬಂದ ಎನ್ನುವ ಮಾತಿಗೆ ಒಂದು ಸಾಕ್ಷಿ ಅದು.  ಒಂದು ಐಡಿಯಾ ನಿಮ್ಮ ಜಗತ್ತನ್ನೇ ಬದಲಾಯಿಸಬಹುದು ಆದರೆ ಒಂದು ಆನ್ ಸೈಟ್ ನಿಮ್ಮ ಜೀವನವನ್ನೇ ಬದಲಾಯಿಸಬಹುದು!!


onsite ನಲ್ಲಿ ಕೆಲಸ ಮಾಡಲು ಯಾರನ್ನ ಸೆಲೆಕ್ಟ್ ಮಾಡಬೇಕು ಅನ್ನುವ ನಿರ್ಧಾರವನ್ನ   Project Team ನಲ್ಲಿ ಮಾಡಿದ ತಕ್ಷಣವೇ ಸೆಲೆಕ್ಟ್  ಮಾಡಿದ ಹುಡುಗ/ ಹುಡುಗಿ ಯ ಆನ್ ಸೈಟ್ ಪ್ರೆಪರಶನ್ ಶುರು ಆಗುತ್ತದೆ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಿಂದ ಹಿಡಿದು ಗಾಂಧೀ ಬಜಾರ್ ವರೆಗೂ ಅವರ ಶಾಪಿಂಗ್ ನಡೆಯುತ್ತದೆ. ಒಂದು ಥರದ Excitement. ಜೊತೆಗೆ ಸಹೋದ್ಯೋಗಿಗಳ , ಒಳ್ಳೆ ಅವಕಾಶ. ಅದು ನಿನಗೆ ಈ ಚಿಕ್ಕ ವಯಸ್ಸಿಗೆ ನೆ ಸಿಕ್ಕಿದೆ. .  ಅಂತ ಹೇಳಿದಾಗ ಕೇಳಬೇಕೆ?  ( ಆದರೆ ನಿಜ ಸ್ಥಿತಿಯಲ್ಲಿ ಟೀಂ ನಲ್ಲಿ ಒಬ್ಬರು ಆನ್-ಸೈಟ್ ಗೆ ಹೋದರೆ, ಉಳಿದವರಿಗೆ ಸ್ವಲ್ಪ ಹೊಟ್ಟೆಯಲ್ಲಿ ಬೆಂಕಿ ಬೀಳುತ್ತದೆ ಅನ್ನುವ ಮಾತು ಬೇರೆ )
ನನ್ನ ಸ್ನೇಹಿತನೊಬ್ಬ ಪಕ್ಕ ಫಿಲ್ಮಿ ಶೈಲಿಯಲ್ಲಿ ಹೇಳುತ್ತಿದ್ದ. ಈ ಆನ್ ಸೈಟ್ ಅನ್ನೋದು ಪಕ್ಕ ೪೨೦. ನೀವು ಅದರ ಬಗ್ಗೆ ಆಸೆ ಇಟ್ಟುಕೊಂಡು ಕಾದು  ಕೂತಷ್ಟು, ಅದು ನಿಮ್ಮನ್ನ ಕಾಯಿಸುತ್ತಲೇ ಇರುತ್ತದೆ. ಅದರ ಕಡೆಗೆ ಲಕ್ಷ್ಯ ಕೊಡದೆ, ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಾ ಹೋದಂತೆ ಅದು ತಾನಾಗಿಯೇ ನಮ್ಮ ಹತ್ತಿರಕ್ಕೆ ಬಂದು ಬಿದ್ದಿರುತ್ತದೆ. ಅವನ ಮಾತು ನಿಜ ಸಹ.
ಆದರೆ ಆನ್ ಸೈಟ್ ಅನ್ನುವ ಅವಕಾಶ ಪ್ರತಿಯೊಬ್ಬರಿಗೂ ಸಿಗುತ್ತದೆ ಅಂತ ಹೇಳುವುದು ಕಷ್ಟ. ಅದು ನಾವು ಮಾಡುವ ಪ್ರಾಜೆಕ್ಟ್ ಮೇಲೆ depend ಆಗಿರುತ್ತದೆ. ಸಾಫ್ಟ್ ಲೋಕಕ್ಕೆ ಸೇರಿದವರೆಲ್ಲ ಆನ್ ಸೈಟ್ ಗೆ ಹೋಗುತ್ತಾರೆ ಅಂತ ಹೇಳಿದರೆ ನಂಬಲು ತುಸು ಅಸಾಧ್ಯವೇ.
ಆನ್-ಸೈಟ್ ಹೊರಡುವ ಮುನ್ನ ತಯಾರಿಗಳು ಬಲು ಜೋರು. ಹಾ ಇಲ್ಲಿ ಇನ್ನೊಂದು ವಿಷಯ, ಆನ್ ಸೈಟ್ ಅಂದ್ರೆ ವರ್ಷಾನು ಗಟ್ಟಳೆ  ಬೇರೆ ದೇಶಕ್ಕೆ ಹೋಗಬೇಕು ಅಂತ ರೂಲೇನು ಇಲ್ಲ. ಕೇವಲ ಒಂದು ತಿಂಗಳಿಗೆ, ಅಷ್ಟೇ ಏಕೆ ಒಂದು ವಾರಕ್ಕೂ ಸಹ ಹೋಗಿ ಬಂದವರಿದ್ದಾರೆ. ಮೊಟ್ಟ ಮೊದಲನೆಯದಾಗಿ ನಮ್ಮ ಸಾಫ್ಟ್ ಕೆರಿಯರ್  ಆರಂಭದಲ್ಲೇ ಆನ್ –ಸೈಟ್ ಹೋಗಿ ಬಂದರೆ ಒಂದು ಒಳ್ಳೆ reputation ಇರುತ್ತದೆ. ಯಾಕಂದರೆ ನಿಮ್ಮ ಪ್ರಾಜೆಕ್ಟ್ ಅನ್ನು ನೀವು ಕ್ಲೈಂಟ್ ಲೊಕೇಶನ್ ನಲ್ಲಿ ರೆಪ್ರೆಸೆಂಟ್ ಮಾಡುತ್ತಿರುತ್ತಿರಿ. ಇನ್ನೊಂದು ವಿಷಯವೆಂದರೆ ಇಲ್ಲಿಗಿಂತಲೂ ಕ್ಲೈಂಟ್ ಲೊಕೇಶನ್ ನಲ್ಲಿ ಸ್ವಲ್ಪ ಜಾಸ್ತಿ ದುಡಿಬಹುದು . ಒಂದಿಷ್ಟು ರೊಕ್ಕ – ಗಿಕ್ಕ ಕೂಡಿಡಬಹುದು. ಇದರ ಜೊತೆಗೆ ಮದುವೆಗೆ ಮುಂಚೆಯೇ ನೀವು ಆನ್ ಸೈಟ್ ಗೆ ಹೋಗಿ ಬಂದು ಬಿಟ್ಟರೆ  ನಿಮ್ಮ ಭಾವಿ ಹೆಂಡತಿ / ಗಂಡ ನ ಮುಂದೆ ಮಾತಾಡುವಾಗ ಒಂದು ರೀತಿಯ ಗರಿ ನಿಮ್ಮ ತಲೆಯ ಮೇಲೆ ಇರುತ್ತದೆ.  ಈ ಎಲ್ಲ ಕಾರಣಗಳಿಂದ  ಆನ್ ಸೈಟ್ ಅನ್ನೋದು ತುಂಬಾ ಮುಖ್ಯ ಆಗುತ್ತದೆ.
ಹಾಗಂತ ಸಾಫ್ಟ್ ಲೋಕದಲ್ಲಿ ಎಲ್ಲರೂ ಆನ್-ಸೈಟ್ ಗೆ ಬಾಯಿ ಬಿಟ್ಟು ಕೊಂಡು  ಕೂತಿರುತ್ತಾರೆ ಅಂತ ಅನ್ಕೊಳ್ಳೋದು ಶುದ್ದ ತಪ್ಪು . ಕೆಲವರು ಪ್ರಸ್ತುತ ತಮಗಿರುವ ಕಮಿಟ್ಮೆಂಟ್ ಗಳಿಂದಾಗಿ ಬಂದಿರುವ ಅವಕಾಶವನ್ನೇ ತಿರಸ್ಕರಿಸಿರುತ್ತಾರೆ. ಒಂದಿಷ್ಟು ಜನಕ್ಕೆ ಕಾರಣವಿರದಿದ್ದರೂ ಆನ್ – ಸೈಟ್ ಗೋ ಹೋಗಲು ಬಿಲ್ ಕುಲ್ ಇಷ್ಟ ವಿರುವುದಿಲ್ಲ . ಸುಮ್ನೆ ಏನೋ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತ್ತಿರುತ್ತಾರೆ. ಕೆಲವೊಬ್ಬರಿಗೆ ಕ್ಲೈಂಟ್ ಲೊಕೇಶನ್ ನಲ್ಲಿ ಕೆಲಸ ಮಾಡುವುದು slave ತರಹ ಅನ್ನೋದು ಅವರ ವಾದ. ಅದೇನೇ ಇರಲಿ, ಪ್ರತಿಯೋಬ್ಬರಿಗೆ ಅವರವರದೇ ಆದ ವಯಕ್ತಿಕ ಅಭಿಪ್ರಾಯ, ಸಿದ್ಧಾಂತ,ನಂಬಿಕೆ ಇರುವುದರಿಂದ ಇದು ಸರಿ, ಇದು ತಪ್ಪು ಅಂತ ನಿರ್ಧರಿಸಿ ಬಿಡುವುದು ಸಹ ತಪ್ಪಾಗುತ್ತದೆ.
ಇದಿಷ್ಟು ಆನ್-ಸೈಟ್ ಬಗ್ಗೆ ಆಯಿತು . ಇನ್ನು ಅಲ್ಲಿಗೆ ಹೋದ ಮೇಲೆ ಹೇಗಿರುತ್ತೆ ? ಅನ್ನೋದನ್ನ ಮುಂದಿನ ವಾರದ ಅಂಕಣ ದಲ್ಲಿ ನೋಡೋಣ .
ಈ ವಾರದ ಬಿಲ್ಡ್ ಲೇಬಲ್ : ಆನ್-ಸೈಟ್ ಅಂದ್ರೆ  ಕ್ಲೈಂಟ್ ಲೋಕೇಶನ್ ಅಂತ ಅರ್ಥ. ಆನ್-ಸೈಟ್ ಅಂದ ತಕ್ಷಣ ಬರೀ ಅಮೆರಿಕಾದ ಕನಸು ಕಾಣುವ ಅಗತ್ಯ ಇಲ್ಲ. ಸಾಫ್ಟ್ ಲೋಕದಲ್ಲಿ ಕೆಲಸದ ನಿಮ್ಮಿತ್ತವಾಗಿ ನೀವು ಪಾಕಿಸ್ತಾನ ಕ್ಕೆ ಹೋದರೂ ಅದನ್ನೂ ಆನ್-ಸೈಟ್ ಅನ್ನುತ್ತಾರೆ. ಹುಷಾರು!

No comments:

Post a Comment