Wednesday, August 20, 2014

ಅಂಕಣ ೨೯ : ONSITE ಗೆ ಹೋದ ಮೇಲೆ!

ಕಳೆದ ಅಂಕಣದಲ್ಲಿ ಆನ್ ಸೈಟ್ ಬಗ್ಗೆ ನೋಡಿದೆವು ಅಂಕಣದಲ್ಲಿ ಅದರ ಮುಂದಿನ ಭಾಗವನ್ನ ಒಂಚೂರು ನೋಡೋಣ.
ಆ ದಿನ ಬಂದೆ ಬಿಟ್ಟಿರುತ್ತದೆ. ತನ್ನ ದೇಶದಿಂದ ಬೇರೊಂದು ದೇಶಕ್ಕೆ ಹೋಗುವ ದಿನ. ಅದೊಂತರ ಪುಳಕ ಮೈಯಲ್ಲಿ.
ಆ ದೇಶಕ್ಕೆ ಮುಟ್ಟಿ ಏರ್ಪೋರ್ಟ್ ನಿಂದ ಹೊರಗಡೆ ಬಂದು ಆ ದೇಶದ ನೆಲಕ್ಕೆ ಕಾಲಿಡುತ್ತಿದ್ದಂತೆಯೇ ಪ್ರತಿಯೊಬ್ಬ ಸಾಫ್ಟಿ ಮಾಡುವ ಮೊದಲ ಕೆಲಸವೆಂದರೆ , ತನ್ನ ಮೊಬೈಲ್ ನಲ್ಲಿರುವ ಕ್ಯಾಮೆರಾ ವನ್ನು ತನ್ನ ಮುಖದ ಕಡೆಗೆ ತಿರುಗಿಸಿ ಒಂದು ಫೋಟೋ ಕ್ಲಿಕ್ಕಿಸಿ ಫೇಸ್ –ಬುಕ್ ಗೆ ಅಪ್ ಲೋಡ್ ಮಾಡುವುದು . ತದ ನಂತರ ಆ ದೇಶದಲ್ಲಿ ಅವನ ಪ್ರಯಾಣ ಮುಂದು ವರಿಯುತ್ತದೆ .


ಆನ್ –ಸೈಟ್ ಗೆ ಹೋದ ಮೇಲೆ ನಮಗೆ ಎರಡು ವಿಷಯ ಗಳು ತುಂಬಾ ಪ್ರಮುಖ ವಾಗುತ್ತವೆ : ಒಂದು ಅಲ್ಲಿನ ವಾತಾವರಣಕ್ಕೆ, ಆಹಾರ ಪದ್ದತಿಗೆ ನಮ್ಮನ್ನ ನಾವು ಒಗ್ಗಿಸಿಕೊಳ್ಳಬೇಕು. ಎರಡು, ನಾವು ಕೆಲಸ ಮಾಡುವ ಸಂಸ್ಥೆ ಒಂದೇ ಆಗಿದ್ದರೂ ನಮ್ಮ ದೇಶದಲ್ಲಿನ working environment ಮತ್ತು ನಾವು ಹೋಗಿರುವ ದೇಶದಲ್ಲಿನ working environment ಬೇರೆ ಬೇರೆ ಆಗಿರುತ್ತವೆ. ಯಾಕಂದರೆ ಸಂಸ್ಥೆ ಒಂದೇ ಆಗಿದ್ದರೂ ದೇಶಗಳ ಸಂಸ್ಕೃತಿ  ಗಳು ಬೇರೆ ಬೇರೆ ಆಗಿರುವುದರಿಂದ ವಾತಾವರಣ ಬೇರೆ ಬೇರೆ ಆಗಿರುತ್ತದೆ . ಅಲ್ಲಿನ ಕೆಲಸದ ವಾತಾವರಣಕ್ಕೆ ತಕ್ಕಂತೆ ನಾವು ಅಡ್ಜಸ್ಟ್ ಆಗಬೇಕು.
ಇನ್ನು ಆನ್-ಸೈಟ್ ಹೋದವರಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಇರುತ್ತವೆ :
೧. ಒಬ್ಬರೇ ಹೋದರೆ ತುಂಬಾ ಬೇಜಾರು ರಿ. ಅದರಲ್ಲೂ ವರ್ಷಗಟ್ಟಲೆ ಒಬ್ಬರೇ ಹೋಗಿಬಿಟ್ಟರೆ, ಒಂದಿಷ್ಟು ತಿಂಗಳ ನಂತರ  ಸಾಕು ಅನಿಸಿಬಿಡುತ್ತೆ . ಜೊತೆಗೆ ಯಾರಾದ್ರು ಒಬ್ರು ಇರ್ಬೇಕು. ನಮ್ಮ ದೇಶದವರೇ ಆದರೆ ಇನ್ನು ಒಳ್ಳೇದು. ನಮ್ಮ ರಾಜ್ಯದವರು ಆದರಂತೂ ಕೇಳೋದೇ ಬೇಡ . ಇಲ್ಲಾಂದ್ರೆ ಸ್ವಲ್ಪ ಕಷ್ಟ !
೨. ಹಾಗೇನೂ ಇಲ್ಲಾ ರಿ . ಒಬ್ಬರೇ ಇದ್ರೂನೂ ಎಂಜಾಯ್ ಮಾಡಬಹುದು .
೩. ಆನ್-ಸೈಟ್ ಒಳ್ಳೇದು . ಆದರೆ ಕೆಲವೊಂದು ದೇಶಗಳಲ್ಲಿ ನಮಗೆ ಊಟದ ವಿಷಯದಲ್ಲಿ ತುಂಬಾ ಪ್ರಾಬ್ಲೆಮ್ ಆಗುತ್ತೆ . ನಾನ್ ವೆಜ್ ನವರಿಗೆ ಅಷ್ಟೊಂದು ಸಮಸ್ಯೆ ಇಲ್ಲ. ಆದರೆ ವೆಜ್ ನವರಿಗೆ ಸಮಸ್ಯೆ ಕೇಳೋದೇ ಬೇಡ
ಹೀಗೆ ನಾನಾ ನಮೂನೆಯ ಮಾತುಗಳು ಕೇಳಿ ಬರುತ್ತವೆ. ಆದರೆ ಇವೆಲ್ಲವನ್ನೂ ಮೀರಿದ್ದು ಒಂದು ಹೊಸ ದೇಶವನ್ನು ನೋಡುವ ಅವಕಾಶ . ಅಲ್ಲಿನ ಹಲವಾರು ವಿಷಯಗಳನ್ನು ಕಲಿತುಕೊಳ್ಳುವ ಅನುಭವ . ಇದೆಲ್ಲದರ ಮುಂದೆ ಬೇರೆಲ್ಲ ವಿಷಯಗಳು ತಮ್ಮಷ್ಟಕ್ಕೆ ತಾವೇ ಸೈಡ್ ಗೆ ಸರಿದು ಬಿಡುತ್ತವೆ. ಆದರೂ ಎಲ್ಲೊ ಒಂದು ಕಡೆ ತುಂಬಾ ದಿನ ಆದ ನಂತರ ನಮ್ಮ ಊರ ಕಡೆಗೆ ಮನಸು ಎಳೆಯುವುದು ಮಾತ್ರ ಸುಳ್ಳಲ್ಲ !
ಇನ್ನು ಒಂದು ಗುಂಪು ಇದೆ. ಅವರು ಹೇಳುವ ಪ್ರಕಾರ, ಒಂದು ಸಲ ಬೇರೆ ದೇಶಕ್ಕೆ ಹೋಗಿಬಿಟ್ಟರೆ ವಾಪಾಸು ಬರುವವರ ಸಂಖ್ಯೆ ಕಡಿಮೆ ರಿ ಅಂತ. ಈ ಮಾತನ್ನ ಒಂದೈದು ವರ್ಷಗಳ ಮುಂಚೆ ಒಪ್ಪಿಕೊಳ್ಳ ಬಹುದಿತ್ತೇನೋ , ಆದರೆ ಈಗ ಇದನ್ನ ಒಪ್ಪುವುದು ಕಷ್ಟ. ಇದಕ್ಕೆ ಕಾರಣ ನಮ್ಮ ದೇಶದಲ್ಲಾಗುತ್ತಿರುವ ಒಂದಿಷ್ಟು ಬದಲಾವಣೆ. ಭಾರತ ಅಭಿವೃದ್ದಿ ಆಗುತ್ತಿದೆ ಅನ್ನೋದು ಮಾತ್ರ ಈ ದೇಶದ ಹಲವಾರು  ಸಮಸ್ಯೆಗಳ ಮಧ್ಯೆಯೂ ಸಹ ಒಪ್ಪಿಕೊಳ್ಳಲೇ ಬೇಕು.
ಈ ವಾರದ ಬಿಲ್ಡ್ ಲೇಬಲ್ :
ಒಂದಿಷ್ಟು ವರ್ಷಗಳ ಹಿಂದೆ, ಬೇರೆ ದೇಶಕ್ಕೆ ಹೋಗಿದ್ದ  ನನ್ನ ಪರಿಚಿತರೊಬ್ಬರು ಅಲ್ಲಿನ ಜೆರಾಕ್ಸ್  ನಲ್ಲಿ  ಕೆಲಸಮಾಡು ತ್ತಿದ್ದರು.ಒಂದು ಸಲ ಅವರು ತಮ್ಮ ಹಳ್ಳಿಗೆ  ಬಂದಾಗ, ಯಾರೋ ಕೇಳಿದರಂತೆ : ಎಲ್ಲಪ್ಪ ಕೆಲಸ ಮಾಡೋದು ?
ಇವರು ಹೇಳಿದರು ; ಜೆರಾಕ್ಸ್ ನಲ್ಲಿ . ಅದಕ್ಕೆ ಅವರು ಹೇಳಿದ್ದು ; “ಜೆರಾಕ್ಸ್  ಅಂಗಡಿನಲ್ಲಿ ಕೆಲಸ ಮಾಡೋಕೆ ಅಷ್ಟು ದೂರ ಹೋಗಬೇಕಾ ? ನಮ್ಮ ಹುಡುಗ ಇದೆ ಊರ್ನಲ್ಲೇ ಒಂದು ಜೆರಾಕ್ಸ್  ಅಂಗಡಿ ಹಾಕಿದಾನೆ. ನೀನು ಬೇಕಿದ್ರೆ ಇಲ್ಲೇ ಕೆಲಸಕ್ಕೆ ಬಾ.

No comments:

Post a Comment