ಸಾಫ್ಟ್ ವೇರ್ ಅನ್ನುವ ರಂಗ ತುಂಬ ಪ್ರಸಿದ್ದಿ ಪಡೆದಿರುವುದು ಎರಡು ಕಾರಣಕ್ಕಾಗಿ:
೧. ಪ್ಲಾನಿಂಗ್
೨. ಮೀಟಿಂಗ್ ಗಳು.
ಹಾಗೆ ಸುಮ್ಮನೆ,
ಪ್ರಶ್ನೆ ೧: " I have queries related to that component, before i start implementation i need to understand them"
ಉತ್ತರ ಬರುತ್ತದೆ : "then do one thing, let us call for a meeting, we will discuss in the meeting "
ಪ್ರಶ್ನೆ ೨ : " I need to talk to you "
ಉತ್ತರ ಬರುತ್ತದೆ : " Do one thing, see my calendar and send me a meeting request "
ಪ್ರಶ್ನೆ ೩ : " Its time for party, where shall we go? "
ಉತ್ತರ ಬರುತ್ತದೆ : " Let us call all project team members for a meeting"
ಸಾಫ್ಟ್ ಲೋಕ ಮೀಟಿಂಗ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಆಗಿ ಹೋಗಿದೆ .ಅದರಲ್ಲೂ ನೀವು ಸ್ವಲ್ಪ "higher level position " ಅಲ್ಲಿ ಇರೋರನ್ನ ಒಂಚೂರು observe ಮಾಡಿ. ದಿನ ಪೂರ್ತಿ ಲ್ಯಾಪ್ ಟಾಪ್ ಹಿಡಿದುಕೊಂಡು ಒಂದು ಮೀಟಿಂಗ್ ರೂಂ ನಿಂದ ಇನ್ನೊಂದು ಮೀಟಿಂಗ್ ರೂಂ ಗೆ ಓಡಾಡುತ್ತಲೇ ಇರುತ್ತಾರೆ. ಕೆಲವೊಬ್ಬರಿಗೆ ಮೀಟಿಂಗ್ ಗಳು ತುಂಬಾ ಇಷ್ಟ ಆದರೆ, ಕೆಲವೊಬ್ಬರಿಗೆ ( ಅವರು ಸಹ "higher level position " ಇದ್ದರೂ) ಮೀಟಿಂಗ್ ಅನ್ನೋದು ಅವರಿಗೆ ಶುಧ್ಧ time waste . "ಸುಮ್ನೆ ಹೋಗಿ ಕೂತ್ಕೋ ಬೇಕುರಿ, ಗಂಟೆ ಗಟ್ಟಲೆ. ನನಗಂತೂ ಮೀಟಿಂಗ್ ಅಂದ್ರೇನೆ ಇರಿಟೇಟ್ ಆಗಿ ಹೋಗಿದೆ " ಅಂತ ಹೇಳುತ್ತಾರೆ.
ಮೀಟಿಂಗ್ ಗಳಲ್ಲಿ ಸ್ವಲ್ಪ ವಿಶೇಷವಾದದ್ದು ನಮ್ಮ "project status " ಬಗ್ಗೆ ನಡೆಯುವ ಮೀಟಿಂಗ್ ಗಳು. ಪ್ರಾಜೆಕ್ಟ್ ಟೀಂ ನ ಎಲ್ಲ ಮೆಂಬರ್ಸ್ ಮೀಟಿಂಗ್ ರೂಂ ಗೆ ಬಂದು ಕುಳಿತಿರುತ್ತಾರೆ. ಪ್ರಾಜೆಕ್ಟ್ ಮ್ಯಾನೇಜರ್ " project status ನ Excel sheet ಮೂಲಕ ಟೀಂ ಗೆ explain ಮಾಡುತ್ತಾ ಇರುತ್ತಾರೆ. ಪ್ರತಿಯೊಬ್ಬನ ಕಣ್ಣಿಗೂ ಅಲ್ಲಿ ಕಾಣಿಸುವುದು " ಕೆಂಪು, ಹಳದಿ, ಹಸಿರು ಬಣ್ಣದಿಂದ ಕೂಡಿದ excel sheet! "
ಒಂದು ವೇಳೆ ಯಾರಾದರೂ ಮೀಟಿಂಗ್ ನಲ್ಲಿ ಕೆಲಸಕ್ಕೆ ಬಾರದ ಅಥವಾ ಅಲ್ಲಿರುವ topic ಗೆ related ಇಲ್ಲದ question ಕೇಳಿದಾಗ, “can we take it off line?“ ಅಂತ ಹೇಳಿ ಪುನಃ ತಮ್ಮ "ಮುದ್ದಾದ" excel sheet ಕಡೆಗೆ ಗಮನ ಹರಿಸಿರುತ್ತಾರೆ. ಇಂತಹ ಸಮಯದಲ್ಲಿ ಮ್ಯಾನೇಜರ್ ಗಳ ಸಮಯ ಪ್ರಜ್ಞೆ ಮೆಚ್ಚಲೇ ಬೇಕು!!
ಎಲ್ಲ ಸಮಯದ ಮೀಟಿಂಗ್ ಗಳಿಗಿಂತಲೂ ಈ ಮಧ್ಯಾನದ ಹೊತ್ತು ನಡೆಯುವ ಮೀಟಿಂಗ್ ನ್ನು attend ಮಾಡುವುದು ಕೊಂಚ ಕಷ್ಟ ದ ಕೆಲಸ . ಕೇವಲ ೧೫ ನಿಮಿಷ ಅಥವಾ ಅರ್ಧ ಗಂಟೆಯ ಮೀಟಿಂಗ್ ಗಳನ್ನೂ ಹೇಗೋ attend ಮಾಡಿಬಿಡಬಹುದು. ಆದರೆ ಗಂಟೆ ಗಟ್ಟಲೆ ನಡೆಯುವ requirement discussion ಮೀಟಿಂಗ್ ಮಾತ್ರ ಮಧ್ಯಾನದ ಹೊತ್ತು ಇದ್ರಂತೂ ಮುಗಿದೇ ಹೋಯ್ತು ಕಥೆ . ಅವಾಗ ತಾನೇ ಊಟ ವಾಗಿರುತ್ತೆ, ಎಲ್ಲರೂ ತಮ್ಮ ತಮ್ಮ ಕುರ್ಚಿಗಳಿಗೆ ಆರಾಮಾಗಿ ಆನಿಕೊಂಡು ಕೂತಿರುತ್ತಾರೆ, ಮೀಟಿಂಗ್ ರೂಂ ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತೆ, ಹೊರಗಡೆ ಮಧ್ಯಾನದ ಬಿಸಿಲು, ಒಳಗಡೆ ಎ ಸಿ ಯಿಂದ ಬರುತ್ತಿರುವ ತಣ್ಣನೆಯ ಗಾಳಿ, ಮಧ್ಯಾನದ ಹೊತ್ತು ಆಗಿರುವುದರಿಂದ ಯಾರ ಮೊಬೈಲ್ ಕೂಡ ಅಷ್ಟೊಂದು ಸದ್ದು ಮಾಡುತ್ತಿರುವುದಿಲ್ಲ , ಮೀಟಿಂಗ್ ರೂಂ ನಲ್ಲಿರುವ ಅಷ್ಟು ಜನರ ಮಧ್ಯೆ ಒಬ್ಬರು ಮಾತ್ರ requirement explain ಮಾಡುತ್ತಾ ಇರುತ್ತಾರೆ. ಕೂತಿರುವ ಕುರ್ಚಿಯಲ್ಲಿ ನಮಗೆ ಗೊತ್ತಿಲ್ಲ ದಂತೆಯೇ ನಮ್ಮ ಕಣ್ಣುಗಳು ಮುಚ್ಚಲು ಶುರು ಮಾಡುತ್ತವೆ.
ಆದರೆ ಮೀಟಿಂಗ್ ನಲ್ಲಿರೋರು ಬಿಡಬೇಕಲ್ಲ, "What do you think about this solution, Mr......" ಅಂತ ಕೇಳಿಯೇ ಬಿಡುತ್ತಾರೆ.
ನೀವು ನಿಧಾನವಾಗಿ ಸಾವರಿಸಿಕೊಂಡು ಜಾಗೃತರಾಗಿ , " actually........." ಅಂತ ಶುರು ಮಾಡುತ್ತೀರ.
ಹಾಗಂತ ಎಲ್ಲ ಮೀಟಿಂಗ್ ಗಳು ಬೋರ್ ಹೊಡೆಯುತ್ತವೆ ಅಂತ ಅಲ್ಲ. ಕೆಲವೊಂದು ಮೀಟಿಂಗ್ ಗಳು ಇಷ್ಟು ಬೇಗನೆ ಮುಗಿದು ಹೋಯ್ತಾ ಅಂತ ಅನಿಸಿಬಿಡುತ್ತೆ !
ಅದೇನೇ ಇರಲಿ, ಸಾಫ್ಟ್ ಲೋಕದಲ್ಲಿ ಮೀಟಿಂಗ್ ಗೆ ತನ್ನದೇ ಆದ ಒಂದು ಗಾಂಭೀರ್ಯತೆ ಇದೆ. ಹಲವಾರು ಉತ್ತಮ ನಿರ್ಧಾರಗಳು ಬರುವುದು ನಾಲ್ಕಾರು ಜನ ಸೇರಿ ಚರ್ಚೆ ಮಾಡಿದಾಗ ಮಾತ್ರ !
ವಾರದ ಬಿಲ್ಡ್ ಲೇಬಲ್ :
ಒಂದು ಸಲ ನೀವು ನಿಮ್ಮ "engineering days " ನೆನಪಿಸಿಕೊಳ್ಳಿ. ತುಂಬಾ ಕೊರೆಯುವ ಯಾವುದಾದರು ಒಬ್ಬರು "Lecturer " ನ ೪೦ ನಿಮಿಷದ ಒಂದು ಕ್ಲಾಸ್ ೪೦ ಗಂಟೆ ಯಷ್ಟು ದೊಡ್ಡದಾಗಿ ಕಾಣಿಸುತ್ತೆ. ಇನ್ನೇನು "period " ಮುಗಿಯಿತು ಅನ್ನೋವಷ್ಟರಲ್ಲಿ, ಮುಂದಿನ ಬೆಂಚ್ ನಲ್ಲಿ ಕೂತಿರುವ ಒಬ್ಬ ಪುಣ್ಯಾತ್ಮ ನೊಬ್ಬ ಆ "Lecturer" ಗೆ ಒಂದು "Question " ಕೇಳಿ ಬಿಡುತ್ತಾನೆ. ಅವಾಗ ಮತ್ತೆ ಅವರು ೧೫-೨೦ ನಿಮಿಷ ಏನೇನೊ ಹೇಳುತ್ತಾ ಹೋಗುತ್ತಾರೆ. ಆ ಸಮಯದಲ್ಲಿ ನೀವು ಹಿಂದಿ ನ ಬೆಂಚ್ ನಲ್ಲಿ ಕುಳಿತಿರುವ ವರನ್ನು ಒಂದು ಸಲ ನೋಡಬೇಕು ; " ಅವರ ಮೈಯೆಲ್ಲಾ ಉರಿದು ಹೋಗಿರುತ್ತೆ, " Lecturer class ಮುಗಿಸಿಕೊಂಡು ಹೊರಗಡೆ ಹೋದ ತಕ್ಷಣವೇ ಎಲ್ಲರೂ ಸೇರಿ ಅನಾಮತ್ತಾಗಿ "Question ಕೇಳಿದವನನ್ನು ಹಿಡಿದು ತದುಕಿ ಬಿಡುತ್ತಾರೆ”.
ಆದರೆ ಸಾಫ್ಟ್ ಲೋಕದ ಮೀಟಿಂಗ್ ರೂಂನಲ್ಲಿ ಯಾರೂ ಆ ಥರ ಕೊರೆಯೋ ದಿಲ್ಲ ಬಿಡಿ. ಒಂದು ವೇಳೆ ಕೊರೆದರೂ ನೀವು ಬಾಯಿ ಮುಚ್ಚಿಕೊಂಡು ಕೂತಿರಲೇಬೇಕು. ಬೇರೆ ದಾರಿನೇ ಇಲ್ಲ !
No comments:
Post a Comment