Monday, October 17, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೩೦

ಇಲ್ಲಿಯವರೆಗೆ ನಾನು ಸಂಗ್ರಹ ಮಾಡಿದ್ದ ಉತ್ತರ ಕರ್ನಾಟಕ ಪದಗಳ ಕೋಶಕ್ಕೆ ಇವತ್ತಿನ ತರಗತಿ ಕೊನೆಯದು.
ಸರಿ ಸುಮಾರು ನೂರ ಇಪ್ಪತ್ತು ಪದಗಳನ್ನ ಇಲ್ಲಿಯವರೆಗೆ ಹಾಕಿದ್ದೇನೆ.  ಇನ್ನು ಬೇಕಾದಷ್ಟು ಪದಗಳು ನನ್ನ ಗಮನಕ್ಕೆ ಬರದೆ ಹೋಗಿವೆ. ನೆನಪಿಗೆ ಬಂದಾಗ ಮತ್ತೆ ಈ ಕೋಶಕ್ಕೆ ಸೇರಿಸುತ್ತೇನೆ.
 
ಬೆನ್ನು ತಟ್ಟಿದ ನಿಮ್ಮೆಲ್ಲರಿಗೂ ಆತ್ಮೀಯ ಧನ್ಯವಾದಗಳು

ಪದಗಳು - ಅರ್ಥ

೧) ಕಾಯಿಪಲ್ಲೆ - ತರಕಾರಿ
೨) ಕೊಸುಗಡ್ಡಿ - ಗಡ್ಡೆ ಕೋಸು
೩) ಉಳ್ಳಾ ಗಡ್ಡಿ - ಈರುಳ್ಳಿ
೪) ಶೇಂಗಾ - ನೆಲಗಡಲೆ

Thursday, October 13, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೯

ಪದಗಳು - ಅರ್ಥ

೧) ಹರಕತ್ - ಅವಶ್ಯಕತೆ 
೨) ಕಾಟು - ಅಳಿಸಿಹಾಕು
೩)  ಸೂಲಿ - ನೋವು ( ಉದಾ: ತಲೆಸೂಲಿ)
೪) ಉಲುವು  - ಗದ್ದಲ, ಉತ್ಸಾಹದಿಂದ ಕೂಡಿದ ವಾತಾವರಣ

Wednesday, October 12, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೮

ಪದಗಳು - ಅರ್ಥ

೧) ಮಾರಿ - ಮುಖ
೨) ಮಜಬೂತ್ - ಉತ್ತಮ ಗುಣಮಟ್ಟದ್ದು
೩) ಧಾವತಿ - ಜಾಸ್ತಿ ಕೆಲಸ, ಆಯಾಸ ( ಉದಾ: ಎಲ್ಲ ಕೆಲಸಾನು ನಿನ್ ತಲಿಮೇಲೆ ಹಾಕ್ಕೊಂಡು ಧಾವತಿ ಮಾಡ್ಕೋಬೇಡ )
೪) ಥೋಡೆ  - ಕಡಿಮೆ

Tuesday, October 11, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೭

ಪದಗಳು - ಅರ್ಥ
೧) ಇರಕಟ್ಟ- ವಿಶಾಲವಲ್ಲದ, ಕಡಿಮೆ ಜಾಗ ( ಉದಾ: ಅಲ್ಲಿ ನಿಲ್ಲಲಿಕ್ಕೂ ಜಾಗಾನೆ ಇಲ್ಲ, ಭಾಳ ಇರಕಟ್ಟ ಅದ)
೨) ಹತ್ಯಿ  - ಬಿಗಿ ಯಾಗುವುದು ( ಉದಾ: ಆ ಅಂಗಿ ನನಗ ಸರಿ ಹೊಂದುದಿಲ್ಲ, ಹತ್ಯಿ ಆಗ್ತದ)
೩) ಭಿಡೆ - ಸಂಕೋಚ
೪) ಹೀಂಗ  - ಹೀಗೆ  

Monday, October 3, 2011

ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೬

ಪದಗಳು - ಅರ್ಥ
 
೧) ವಸ್ತಿ - ತಂಗುವುದು, ಅಲ್ಲೇ ಉಳಿದುಕೊಳ್ಳುವುದು ( ಉದಾ : ಇವತ್ತೊಂದಿನ ಇಲ್ಲೇ ವಸ್ತಿ ಮಾಡಿ ನಾಳೆ ಮುಂದಕ್ಕೆ ಹೋಗೋಣ)
೨) ತುಟ್ಟಿ - ದುಬಾರಿ
೩) ಒಡಗತ್ತು - ಒಗಟು
೪) ಇಬ್ಳರು ( ದಾವಣಗೆರೆ ಭಾಗದಲ್ಲಿ ಹೆಚ್ಚು ಬಳಸುವ ಪದ) - ಇಬ್ಬರು
 

Sunday, October 2, 2011

ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೫

ಪದಗಳು - ಅರ್ಥ

೧) ಸೊಸ್ಲಾ ( ಬಿಜಾಪುರ), ಮಂಡಕ್ಕಿ ( ಬಳ್ಳಾರಿ, ಚಿತ್ರದುರ್ಗ), ಮಂಡಾಳು ( ರಾಯಚೂರು, ಗುಲಬರ್ಗಾ) - ಪುರಿ 
೨)  ಶರಬತ್ - ನಿಂಬೆ ಹಣ್ಣಿನ ಪಾನಕ
೩) ಹಿಂಗ್ಯಾಕಾತು  - ಹೀಗೆಕಾಯ್ತು
೪) ಹಂಗ್ಯಾಕಾತು - ಹಾಗೆಕಾಯ್ತು