ಭಾಷೆ ಬಲಗೊಳ್ಳಬೆಕಾದರೆ, ಭಾಷೆ ಆರ್ಥಿಕ ಸದೃಡ ವಾಗಬೇಕು ಅನ್ನೋದನ್ನ ಕಳೆದ ವಾರದ ಅಂಕಣದಲ್ಲಿ ನೋಡಿದೆವು. ಆದರೆ ಹಾಗಾಗಬೇಕಂದರೆ ನಾವೇನು ಬೆಟ್ಟ ಕುಟ್ಟಿ ಪುಡಿ ಮಾಡಬೇಕಾಗಿಲ್ಲ. ನಮ್ಮ ದಿನ ಜೀವನದಲ್ಲಿ ಒಂದಿಷ್ಟು ಬದಲಾವಣೆ ತಂದರೆ ಸಾಕು. ಅಂತಹ ಬದಲಾವಣೆಗಳು ಯಾವವು ಅನ್ನೋದನ್ನ ಈ ಅಂಕಣದಲ್ಲಿ ನೋಡೋಣ:
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧ : ಭಾಷೆ ಬಲಗೊಳ್ಳಬೆಕಾದರೆ ಅದರಿಂದ “ಅನ್ನ” ಹುಟ್ಟಬೇಕು.“ಅನ್ನ” ಹುಟ್ಟಬೇಕಾದರೆ ಭಾಷೆ ಆರ್ಥಿಕವಾಗಿ ಬಳಕೆಯಲ್ಲಿರಬೇಕು.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧ : ಭಾಷೆ ಬಲಗೊಳ್ಳಬೆಕಾದರೆ ಅದರಿಂದ “ಅನ್ನ” ಹುಟ್ಟಬೇಕು.“ಅನ್ನ” ಹುಟ್ಟಬೇಕಾದರೆ ಭಾಷೆ ಆರ್ಥಿಕವಾಗಿ ಬಳಕೆಯಲ್ಲಿರಬೇಕು.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೨ :ನೀವು ಬೆಂಗಳೂರಿನಲ್ಲಿದೀರಿ ಅಂದರೆ ದಿನಕ್ಕೆ ಕನಿಷ್ಠ ಪಕ್ಷ ಎರಡಾದರೂ " ಜಾಹಿರಾತಿನ ಕರೆಗಳು" ನಿಮ್ಮ ಮೊಬೈಲ್ ಗೆ ಬರುತ್ತವೆ. ಅವುಗಳಿಗೆ ಉತ್ತರಿಸಿ. " ನನಗೆ ಇಂಗ್ಲಿಷ್ ಬರುವುದಿಲ್ಲ, ದಯವಿಟ್ಟು ನನ್ನ ಜೊತೆ ಕನ್ನಡ ದಲ್ಲಿ ಮಾತಾಡ್ತೀರ ಅಂತ ಕೇಳಿ". ನಿಮ್ಮ ಈ ಮಾತಿನಿಂದ ಆ ಕಂಪನಿಯ ಕಾಲ್ ಸೆಂಟರ್ ನಲ್ಲಿ ಒಬ್ಬ ಕನ್ನಡಿಗ ನಿಗೆ ಕೆಲಸ ದೊರೆಯುತ್ತದೆ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೩ : ನೀವು ಓದುತ್ತೀರೋ - ಬಿಡುತ್ತೀರೋ, ನೀವು ಪ್ರಯಾಣ ಮಾಡುವಾಗ ಕನ್ನಡ ಒಂದು ಪುಸ್ತಕ ( ಕಥೆ - ಕಾದಂಬರಿ) , ಅಥವಾ ಕನಿಷ್ಠ ಪಕ್ಷ ಕನ್ನಡ ದಿನಪತ್ರಿಕೆ ನಿಮ್ಮ ಕೈಯಲ್ಲಿರಲಿ. ನಾಚಿಕೆ ಬೇಡ. ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡೋಕೆ ಯಾರ ದಾರಿಯು ಕಾಯಬೇಕಾಗಿಲ್ಲ. ನಾವೇ ಶುರು ಮಾಡಬಹುದು.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೪: ಕನ್ನಡ ಭಾಷೆ ಗೊತ್ತಿಲ್ಲ ದಿರುವವರು, ಕನ್ನಡ ದಲ್ಲಿ ಮಾತಾನಾಡಲು ಪ್ರಯತ್ನ ಪಟ್ಟಾಗ ಅವರನ್ನ ನೋಡಿ ನಗುವುದು ಬೇಡ. ಅವರನ್ನ ಪ್ರೋತ್ಸಾಹಿಸಿ. ಚಿಕ್ಕ ಮಗುವಾಗಿದ್ದಾಗ ನೀವು ಸಹ ಮೊದಲನೆಯ ಸಲವೇ ಎಲ್ಲವನ್ನು ಸರಿಯಾಗಿ ಮಾತಾಡಿರಲಿಲ್ಲ. ನೆನಪಿರಲಿ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೭ : ಬೆಂಗಳೂರಿನಲ್ಲಿ ಆದಷ್ಟು ನಿಮ್ಮ ಮಾತು "ಕನ್ನಡ ದಲ್ಲಿರಲಿ" ( ಬೇರೆ ಭಾಷೆ ಬರುತ್ತಿದ್ದರೂ) ಇದರಿಂದ ವಲಸಿಗರೂ ಕನ್ನಡ ಕಲಿಯುತ್ತಾರೆ.ನಾವು ಕನ್ನಡ ದಲ್ಲಿ ಮಾತಾಡದೆ ಹೋದರೆ, ಕನ್ನಡ ಭಾಷೆ ಕಲಿಯಲು ಇಷ್ಟ ಪಡುವವರಿಗೆ ನೀವು ವಂಚಿಸಿ ದಂತಾಗುತ್ತದೆ . ಭಾಷೆಯನ್ನೇ ನಮ್ಮಲ್ಲೇ ಹಿಡಿದಿಟ್ಟು ಸ್ವಾರ್ಥಿಗಳಾಗೊದು ಬೇಡ. ಬೇರೆಯವರೂ ಕಲಿಯಲಿ. ನಾಲ್ಕಾರು ಜನ ಕಲಿಯಲಿ. ಹರಿಯಲು ಬಿಡಿ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೫: ಕನ್ನಡ ಕಟ್ಟುವ ಕೆಲಸದಲ್ಲಿ ನಮ್ಮ ಅನೇಕ ಹಿರಿಯರ ಕೊಡುಗೆ ಅವಿಸ್ಮರಣೀಯ ಆದರೆ ಇವತ್ತು ನಾವು ಕೇಳಿಕೊಳ್ಳಬೇಕಾದ ಬಹು ಮುಖ್ಯ ಪ್ರಶ್ನೆ : ನಾವು ಬರೀ ನಮ್ಮ ಹಿರಿಯರ ನ್ನು ಸ್ಮರಿಸುತ್ತ ಕುಳಿತು ಬಿಟ್ಟಿದ್ದೆವಾ ಅಥವಾ ಇವತ್ತು ಕನ್ನಡ ಕಟ್ಟುವ ಕೆಲಸ ದಲ್ಲಿ ನಾವೂ ನಮ್ಮ ಪಾಲಿನ ಕೆಲಸ ಮಾಡ್ತಾ ಇದ್ದೀವಾ? ಅನ್ನೋದು.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೬: "ಅಭಿಮಾನ"ಕ್ಕಿಂತ "ಅನ್ನ" ದೊಡ್ಡದು. ಅಭಿಮಾನ ಮನಸ್ಸಿನಲ್ಲಿರಲಿ, ಆದರೆ ಕನ್ನಡ ದಿಂದ "ಅನ್ನ" ಹುಟ್ಟು ಹಾಕುವುದು ಹೇಗೆ? ಅನ್ನುವ ಪ್ರಶ್ನೆಗೆ ಉತ್ತರ ನಮ್ಮ ತಲೆ ಸದಾ ಆಲೋಚಿಸುತ್ತಿರಲಿ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೮ : ಮಾಲ್ ಇರಲಿ,ಏರ್ಪೋರ್ಟ್ ಇರಲಿ, ಬಸ್ ಸ್ಟಾಂಡ್ ಇರಲಿ, ಮಲ್ಟಿಪ್ಲೆಕ್ಸ್ ಥೇಟರ್ ಇರಲಿ... ಕನ್ನಡ ದಲ್ಲಿ ಮಾತಾಡ್ತಾ ಹೋಗಿ, ಮಾತಾಡೋದಕ್ಕೆ ಹಿಂಜರಿಕೆ ಅಥವಾ ಕೀಳರಿಮೆ ಬೇಡ.
"ನನ್ನೊಬ್ಬನಿಂದ ಮಾತ್ರ ಕನ್ನಡ ಕಟ್ಟುವ ಕೆಲಸ ಹೇಗೆ ಸಾಧ್ಯ?" ಅನ್ನೋ ಮಾತು ಬೇಡ. ಒಂದು ಸಲ ಕೆಳಗಿನ ಪುಸ್ತಕ ಗಳನ್ನು ಓದಿ, ಒಬ್ಬರೇ ಕನ್ನಡ ಕಟ್ಟುವ ಕೆಲಸವನ್ನು ಹೇಗೆ ಮಾಡಿದ್ದಾರೆ ಅಂತ ಗೊತ್ತಾಗುತ್ತೆ.
೦೧. ಸರ್. ಎಂ. ವಿಶ್ವೇಶ್ವರಯ್ಯ ನವರ " ನನ್ನ ವೃತ್ತಿ ಜೀವನದ ನೆನಪುಗಳು ( ಅನುವಾದಿತ ಕೃತಿ )"
೦೨. ಚಿತ್ರ ನಟ ಅನಂತನಾಗ್ ಅವರು ಬರೆದ "ನನ್ನ ತಮ್ಮ ಶಂಕರ "
೦೩. ಶಿವರಾಮ ಕಾರಂತಜ್ಜರ " ಹುಚ್ಚು ಮನಸಿನ ಹತ್ತು ಮುಖಗಳು "
೦೪. ಎಲ್ಲದಕ್ಕಿಂತ ಹೆಚ್ಚಾಗಿ ಆಲೂರು ವೆಂಕಟರಾಯರ " ನನ್ನ ಜೀವನದ ಸ್ಮೃತಿಗಳು" . ಮೊದಲು ನಿಮ್ಮೆರಡು ಕೈಗಳು ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಲಿ, ನಂತರ ಹಲವಾರು ಕೈಗಳು ನಿಮ್ಮ ಜೊತೆ ಸೇರುತ್ತವೆ.
ಅಂದಹಾಗೆ " ಮಾಲ್ಗುಡಿಯ ಮಹಾನ್ ನಿರ್ದೇಶಕ : ಶಂಕ್ರಣ್ಣ ನಿಗೆ ಹುಟ್ಟು ಹಬ್ಬದ ಶುಭಾಶಯಗಳು".
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧೦: ಕನ್ನಡ "ಅನ್ನ" ದ ಭಾಷೆ ಯಾಗಬೇಕಾದರೆ ಪ್ರತಿ ವರ್ಷ " ಸಾಹಿತ್ಯ ಸಮ್ಮೇಳನಗಳು" ನಡೆದಂತೆ, " ಉದ್ಯೋಗ ಸಮ್ಮೇಳನ" ಗಳು ನಡೆಯಬೇಕು. ಇದರಲ್ಲಿ ಜಗತ್ತಿನ ಎಲ್ಲ ಕಡೆಗಿರುವ " ಕನ್ನಡ ಉದ್ಯಮಿಗಳನ್ನು" ಆಹ್ವಾನಿಸಬೇಕು. ಭಾಷೆಯಿಂದ "ಅನ್ನ" ಹುಟ್ಟು ಹಾಕುವ ಬಗ್ಗೆ ಚರ್ಚೆಗಳಾಗಬೇಕು.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧೧: ನೀವು ಪಕ್ಕದ ರಾಜ್ಯಕ್ಕೆ ಹೋದಾಗ, ಬಸ್ ಸ್ಟಾಂಡ್ ನಲ್ಲಿ , ರೈಲ್ವೆ ಸ್ಟೇಷನ್ ನಲ್ಲಿ ಕನ್ನಡ ಪತ್ರಿಕೆ ಸಿಗುತ್ತವೆಯೋ ಅಂತ ಕೇಳಿ ನೋಡಿ. ಇವತ್ತು ಸಿಗದೇ ಇರಬಹುದು, ಹತ್ತು ಜನ ಪ್ರತಿ ಸಲ ಕೇಳಲು ಶುರು ಮಾಡಿದಾಗ, ಬೇಡಿಕೆ ಹೆಚ್ಚಾದಂತೆ ಅಲ್ಲಿಯೂ ಕನ್ನಡ ಪತ್ರಿಕೆ ಗಳು ಸಿಗುವಂತಾಗುತ್ತವೆ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧೨: ಒಂದು ಕನ್ನಡ ಸಿನಿಮಾ ನೋಡಿದೀರಾ? ಇಷ್ಟವಾಯಿತಾ ?. ನಾಲ್ಕು ಜನಕ್ಕೆ ತಿಳಿಸಿ. ಫೇಸ್ ಬುಕ್ ನಲ್ಲಿ ಬರೆಯಿರಿ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ. ಇಷ್ಟವಾಗಲಿಲ್ಲವಾ? ಸುಮ್ಮನಿದ್ದುಬಿಡಿ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧೩: ಪ್ರವಾಸಕ್ಕೆ ಬೇರೆ ಊರುಗಳಿಗೆ ಹೋಗುವುದಕ್ಕಿಂತ ನಮ್ಮ ರಾಜ್ಯ ಮೊದಲು ನಮಗೆಷ್ಟು ಗೊತ್ತು ಅಂತ ಪ್ರಶ್ನೆ ಹಾಕಿ ಕೊಳ್ಳುವುದು ಉಚಿತ.
ನಮ್ಮಲ್ಲಿ ಎಷ್ಟು ಜನ, ಮೈಸೂರಿನವರು ಬಾಗಲಕೋಟೆಗೆ, ಚಾಮರಾಜ ನಗರದವರು ಗುಲ್ಬರ್ಗಾಕ್ಕೆ, ಬೀದರಿನವರು ಕೊಡಗಿಗೆ, ಬೆಂಗಳೂರಿನವರು ರಾಯಚೂರಿಗೆ, ಕೊಪ್ಪಳ ದವರು ಮಂಗಳೂರಿಗೆ ಹೋಗಿದ್ದೇವೆ?. ಮೊದಲು ನಮ್ಮ ಮನೆ ಯನ್ನ ನಾವು ಸರಿಯಾಗಿ ತಿಳಿದು ಕೊಳ್ಳುವುದು ಉಚಿತ ಅನಿಸುತ್ತೆ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧೪:ನೀವು ಕರ್ನಾಟಕದಿಂದ ಆಚೆ ಇದ್ದೀರಾ ಅಂದರೆ ನಿಮ್ಮ ಮನೆಯ ಭಾಷೆ ಕನ್ನಡ ವಾಗಿರಲಿ.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧೫:ನೀವು ಬೇರೆ ರಾಜ್ಯದಲ್ಲಿ ಇರುತ್ತಿದ್ದೀರಿ ಅಂದರೆ ನಿಮ್ಮ ಮಕ್ಕಳಿಗೆ ಕನ್ನಡ ಓದು ಮತ್ತು ಬರಹ ಹೇಳಿ ಕೊಡಬಹುದು.
ಕನ್ನಡ ಕಟ್ಟುವ ಸಣ್ಣ ಪುಟ್ಟ ಕೆಲಸ ೧೬: ಕನ್ನಡ ಪರ ಹೋರಾಟ ಗಾರರನ್ನು ಗೌರವಿಸಿ. ಅವರಿಗೂ ಮನೆ ಮಟ ಎಲ್ಲ ಇರುತ್ತದೆ. ಅವರ ಪ್ರತಿಭಟನೆಗಳನ್ನ ಮನೆಯಲ್ಲಿ ಆರಾಮಾಗಿ ಟಿ ವಿ ಮುಂದೆ ಕುಳಿತು ನೋಡಿ, ಹೀಯಾಳಿಸುವುದು ಬೇಡ.
ವಾರದ ಬಿಲ್ಡ್ ಲೇಬಲ್ : ಮೇಲೆ ಹೇಳಿದುದರಲ್ಲಿ ಕನಿಷ್ಠ ಒಂದನ್ನಾದರೂ ನಾವು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಅದಕ್ಕಿಂತ ದೊಡ್ಡ ಕನ್ನಡದ ಕೆಲಸ ಬೇರೊಂದಿಲ್ಲ.
No comments:
Post a Comment