Thursday, June 12, 2014

ಅಂಕಣ ೨೧ : ಸಾಫ್ಟ್ ವೇರ್ ಇಂಜಿನೀಯರ್ ಗಳ ಬಗ್ಗೆ ನಿಮಗೆ ಗೊತ್ತಿರದ ಮೂವತ್ತು ವಿಷಯಗಳು - ಭಾಗ ೧

ನಾವು ಇರುವುದು ಹಾಗೆಯೇ. ನಮ್ಮ ಕೆಲಸ, ಕೆಲಸದ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಿರುತ್ತೇವೆ. ಈ ಕೆಳಗೆ ಪಟ್ಟಿ ಮಾಡಿರುವ ಅಂಶಗಳಲ್ಲಿ ನಾವು ಒಂದಲ್ಲ ಒಂದನ್ನ ಮಾಡಿರುತ್ತೇವೆ ಅಥವಾ ಇನ್ನು ಮಾಡುತ್ತಲೇ ಇರುತ್ತೇವೆ.
ಸಾಫ್ಟ್ ಲೋಕದ ಲ್ಲಿ ನಡೆಯುವ ನಿತ್ಯದ ಕೂತುಹಲಕಾರಿಯಾಗಿರುವ ಒಂದಿಷ್ಟು ಅಂಶಗಳನ್ನ ಇಲ್ಲಿ ಪಟ್ಟಿ ಮಾಡಿದ್ದೇನೆ. ಸುಮ್ಮನೆ ಓದುತ್ತಾ ಹೋಗಿ. ನಗು ತಂತಾನೇ ಬರುತ್ತದೆ.




೧. ಫ್ರೆಶರ್ ಆಗಿದ್ದರೆ ತಿಂಗಳ ಮೂರನೇ ವಾರದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಎಲ್ಲ ಖಾಲಿ ಆಗಿ, ನಾಲ್ಕನೇ ವಾರದ ಕೊನೆಯ ದಿನಕ್ಕೋಸ್ಕರ ಕಾದು  ಕೂತಿರುತ್ತಾನೆ.


೨. ಐದು ವರ್ಷಕ್ಕಿಂತ ಜಾಸ್ತಿ ಅನುಭವವಿರೊರು ಸಂಬಳ ಬಂದ ತಕ್ಷಣ ಕ್ಯಾಲ್ಕುಲೇಟರ್ ಓಪನ್ ಮಾಡ್ಕೊಂಡು ಪ್ರತಿ ಸಲದಂತೆ ತಮ್ಮ “EMI” ಲೆಕ್ಕ ಹಾಕ್ತಾ ಕೂಡುತ್ತಾರೆ.


೩.  ಕೆಲಸ ಇಲ್ಲದೆ ಖಾಲಿ ಇರುವಾಗ ಮದುವೆ  ಆದವರು ಮತ್ತು ಆಗದೆ ಇರುವ ಹೆಂಗಸರು ಬ್ರೌಸ್ ಮಾಡುವುದು -
“ಆನ್ ಲೈನ್ ಶಾಪಿಂಗ್ ನಲ್ಲಿ ಬಟ್ಟೆ  ಮತ್ತು  ಆಭರಣಗಳ ಬಗ್ಗೆ”. ಹಾಗಂತ ನೋಡಿದ್ದೆಲ್ಲವನ್ನು ಕೊಂಡುಕೊಳ್ಳುತ್ತಾರೆ ಅಂದುಕೋಬೇಡಿ.


೪. ಪ್ರತಿಯೊಬ್ಬ ಸಾಫ್ಟ್ ವೇರ್ ಎಂಜಿನೀರ್ ನ ಪರ್ಸ್  ಅಥವಾ ವಾಲೆಟ್ ತೆಗೆದು ನೋಡಿ, ಅದರಲ್ಲಿ ದುಡ್ಡಿಗಿಂತ ಕಾರ್ಡ್ ಗಳೇ ಜಾಸ್ತಿ ಇರುತ್ತವೆ (credit card, debit card, discount card, offer card, amex card, .. etc ). ಅದರಲ್ಲಿ ಅರ್ಧದಷ್ಟು ಕಾರ್ಡ್ ಗಳ ವ್ಯಾಲಿಡಿಟಿ ಮುಗಿದು ಹೋಗಿದ್ದರೂ ಸಹ, ಪರ್ಸ ನಲ್ಲಿ ಅವು ಭದ್ರವಾಗಿ ಇರುತ್ತವೆ!


೫. ಪ್ರತಿಯೊಬ್ಬ ಸಾಫ್ಟ್ ವೇರ್ ಎಂಜಿನೀರ್ ಕನಿಷ್ಠ ಪಕ್ಷ ಎರಡು ಗಂಟೆಗೆ ಒಂದು ಸಲವಾದರೂ ತನ್ನ ಮೊಬೈಲ್ ಫೋನ್ ನಲ್ಲಿ ಮಾತಾಡುತ್ತಾನೆ/ಳೆ. ಪ್ರತಿ ಅರ್ಧ ಗಂಟೆಗೆ ಒಂದು ಸಲ ವಾದರೂ ಫೋನ್ ನ ಅನ್ಲಾಕ್ ಮಾಡಿ ಚೆಕ್ ಮಾಡುವ ಅಭ್ಯಾಸ ವಿರುತ್ತದೆ.


೬. ಸಾಫ್ಟ್ ವೇರ್ ಎಂಜಿನೀರ್ ಮನೆಯಲ್ಲಿ ಯಾವಾಗಲು ರಾರಾಜಿಸುತ್ತಿರುವುದು ಒಂದು ಒಳ್ಳೆ ಕ್ವಾಲಿಟಿ  “ ಸೌಂಡ್ ಸಿಸ್ಟಂ” ಹಾಗೇನೆ ಲ್ಯಾಪ್ ಟಾಪ್ / ಪಿ.ಸಿ.


೭. ಸಾಫ್ಟ್ ವೇರ್ ಎಂಜಿನೀರ್  ಬ್ಯಾಗ ನಲ್ಲಿ ಯಾವಾಗಲು ಹ್ಯಾಂಡ್ ಫ್ರೀ ಇದ್ದೆ ಇರುತ್ತದೆ.


೮.  ಸಾಫ್ಟ್ ವೇರ್ ಎಂಜಿನೀರ್  ತಿಂಗಳ ಕೊನೆಯ ಬ್ಯಾಂಕ್ ಬ್ಯಾಲೆನ್ಸ್ ಒಂದೊಂದು ಸಲ ೧೮, ೪೫, ೩೮ ರೂಪಾಯಿ ಸಹ ಆಗಿರುತ್ತದೆ.


೯. ಸಾಫ್ಟ್ ಲೋಕದ ಹುಡುಗಿಯರು ತಾವಾಗಿಯೇ ಹೊರಗಡೆ (Treat)ಊಟಕ್ಕೆ ಹೋಗುವುದಿಲ್ಲ. ಯಾರಾದರೂ invite ಮಾಡಿದರೆ ಮಾತ್ರ ತಪ್ಪಿಸಿಕೊಳ್ಳುವುದಿಲ್ಲ !


೧೦. ಬಹಳಷ್ಟು ಸಾಫ್ಟ್ ವೇರ್ ಎಂಜಿನೀರ್ ಪರ್ಸ್ ತೆಗೆದು ನೋಡಿ ಅದರಲ್ಲಿ ೩೦೦/- ಕ್ಕಿಂದ ಜಾಸ್ತಿ ದುಡ್ಡು ಇರುವುದಿಲ್ಲ .


೧೧. ಸಾಫ್ಟ್ ವೇರ್ ಎಂಜಿನೀರ್  ಪ್ರತಿದಿನವೂ ಆಫಿಸಿಗೆ ಹೊತ್ತೊಯ್ಯುವ ಬ್ಯಾಗ್  ಹಾಲು ಮೂಳು ಸೇರಿ ಒಂದೈದಾರು ಕೆಜಿ ಆಗಿರುತ್ತದೆ. ಆದರೂ ಅವರಿಗೆ ತಮ್ಮ ಬ್ಯಾಗ್ ಕ್ಲೀನ್ ಮಾಡಿಕೊಳ್ಳಲು ಸಮಯ ಇರುವುದಿಲ್ಲ.


೧೨. ಸಾಫ್ಟ್ ಲೋಕದಲ್ಲಿ ತುಂಬಾ experience ಇದ್ದವರನ್ನ ನೋಡಿ, ಅವರು ಯಾವುದಾದರೂ ಒಂದು habit ನ್ನ ಪ್ರತಿ ದಿನ ಅದೇ ಸಮಯಕ್ಕೆ ಮಾಡ್ತಾ ಇರ್ತಾರೆ.  ಮಧ್ಯಾನದ ಊಟವಿರಬಹುದು, ಅಥವಾ ಊಟವಾದ ಮೇಲೆ ಮಾಡುವ ಒಂದು ವಾಕ್ ಇರಬಹುದು, ದಿನಕ್ಕೆರಡು ಸಲ  ಟೀ ಕುಡಿಯೋ ಸಮಯ ಇರಬಹುದು…


೧೩. ಇಬ್ಬರು ಮದುವೆ  ಆಗಿರೋ ಸಾಫ್ಟ್ ಲೋಕದ ಮಹಿಳೆಯರು ತಮ್ಮ ಬ್ರೇಕ್ ಟೈಮ್ ನಲ್ಲಿ ಮಾತಾಡೋ ವಿಷಯ ಒಂದು ಅವರವರ ಅತ್ತೆಯ ಬಗ್ಗೆ, ಇಲ್ಲ ಅವರವರ ಮಕ್ಕಳ ಬಗ್ಗೆ.


೧೪. ಇಬ್ಬರು ಮದುವೆಯಾದ ಸಾಫ್ಟ್ ಲೋಕದ ಗಂಡಸರು ತಮ್ಮ ಬ್ರೇಕ್ ಟೈಮ್ ನಲ್ಲಿ " ಹೆಂಡತಿ ಮತ್ತು ಮಕ್ಕಳು" ಇವರಿಬ್ಬರನ್ನು ಬಿಟ್ಟು ಬೇರೆ ಎಲ್ಲ ವಿಷಯವನ್ನು ಮಾತಾಡುತ್ತಾರೆ.


೧೫. ಸಾಫ್ಟ್ ಲೋಕದ ಜನರ ಶರ್ಟ್ ಪಾಕೆಟ್ ನಲ್ಲಿ ಯಾವತ್ತೂ ಪೆನ್ ಇರುವುದಿಲ್ಲ, ಅವರು ಬ್ಯಾಂಕ್ ಗೆ ಹೋದರು ಪಕ್ಕದಲ್ಲಿರುವವರನ್ನು ಪೆನ್ ಕೇಳಿ ಚೆಕ್ ಗೆ ಸಹಿ ಮಾಡುತ್ತಾರೆ.

ಈ ವಾರದ ಬಿಲ್ಡ್ ಲೇಬಲ್: ಏನಿದು ೩೦ ವಿಷಯಗಳು ಅಂತ ಹೇಳಿ ಬರೀ ಹದಿನೈದೇ ಇದೆ ಅನ್ಕೋಬೇಡಿ. ಇದು PART 1 ಅಷ್ಟೇ, ಉಳಿದ ಭಾಗ  PART 2 ಮುಂದಿನ ವಾರ ಬರುತ್ತೆ.

No comments:

Post a Comment