Thursday, June 26, 2014

ಅಂಕಣ ೨೩ : ಸಾಫ್ಟ್ ಪಾಲಿಟಿಕ್ಸ್

ಇದಕ್ಕೂ ಮುಂಚೆ, ಸಾಫ್ಟ್ ಲೋಕ ಹೇಗೆ ಬೇರೆ ಲೋಕಗಳಿಗಿಂತ ಭಿನ್ನವಾಗಿದೆ ಅನ್ನುವುದರ ಬಗ್ಗೆ ಹಿಂದಿನದೊಂದು ಅಂಕಣದಲ್ಲಿ ಸಾಫ್ಟ್ ಲೋಕದ ಧನಾತ್ಮಕ ಅಂಶಗಳ ಬಗ್ಗೆ ಓದಿದ್ದೀರಿ. ಈಗ ಅದರ ಇನ್ನೊಂದು ಮುಖದ ಬಗ್ಗೆ ಯೂ ತಿಳಿದುಕೊಳ್ಳೋಣ.

ಇಲ್ಲಿ ಪ್ರತಿ ಭಟನೆಗಳು ಇರುವುದಿಲ್ಲ, “ಬೀದಿಗಿಳಿದು ಹೋರಾಟ ಮಾಡ್ತೇನೆ” ಎನ್ನುವ ಮಾತುಗಳು ಇರುವುದಿಲ್ಲ, "ರಾಜ್ಯದಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇನೆ” ಅನ್ನುವಂತೆ ಕಂಪನಿ ಯಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇನೆ ಅಂತ ಯಾರೂ ಹೇಳುವುದಿಲ್ಲ. ಚಳುವಳಿ ಗಳ ಮಾತೆ ಇಲ್ಲಿಲ್ಲ. ಆದರೂ ಸಾಫ್ಟ್ ಲೋಕದಲ್ಲಿ ತನ್ನದೇ ರೀತಿಯಾದ ರಾಜಕೀಯ ಇದೆ. ಸಾಫ್ಟ್ ಲೋಕದಲ್ಲೇ ಏನು ಬಂತು,  ಎಲ್ಲೆಲ್ಲಿ ಜನರು ಇದ್ದಾರೋ ಅಲ್ಲೆಲ್ಲ ರಾಜಕೀಯ ಅನ್ನುವುದು ಇದ್ದೆ ಇರುತ್ತದೆ ಅನ್ನುವುದು ನಮ್ಮೆಲ್ಲರಿಗೂ ಗೊತ್ತಿದ್ದದ್ದೇ ಬಿಡಿ.



ಆದರೆ ಸಾಫ್ಟ್ ಲೋಕದ ಪೊಲಿಟಿಕ್ಸ್ ತುಂಬಾ ಸಾಫ್ಟ್ ಆಗಿ ಇರುತ್ತದೆ. ಹೊಗೆಯಾಡಬೇಕಾದರೆ ಬೆಂಕಿ ಇರಲೇ ಬೇಕು ಎನ್ನುವ ಒಂದು ನಿಯಮವಿದೆ ಆದರೆ ಸಾಫ್ಟ್ ಲೋಕದಲ್ಲಿ  "ಬೆಂಕಿ ಚಿಕ್ಕದಾಗಿ ಹತ್ತಿ, ಉರಿದು ಹೊಗೆಯಾಡುವ ಮೊದಲೇ ಅನಾಮತ್ತಾಗಿ ಬೆಂಕಿಯನ್ನೇ ಕಂಪನಿ ಯ ಕಂಪೌಂಡಿನ ಆಚೆ ಎಸೆದು ಬಿಟ್ಟಿರುತ್ತಾರೆ". ಇದು ಸಾಫ್ಟ್ ಲೋಕದ ರಾಜಕೀಯ.

ಇಲ್ಲಿ ಬಹಿರಂಗ ಸವಾಲುಗಳು ಇರುವುದಿಲ್ಲ, ಬದಲಿಗೆ ಮನಸಿನಲ್ಲಿ ಹಲವಾರು ಲೆಕ್ಕಾಚಾರ ಗಳು ನಡೆಯುತ್ತಿರುತ್ತವೆ. ಪರಸ್ಪರ ಆಗದ ಮುಖಗಳು ಎದುರು - ಬದರು ಬಂದರೆ ಮುಖ ಉರಿ ಉರಿ ಆಗಿರುವುದಿಲ್ಲ, ಬದಲಿಗೆ ಮುಖದ ತುಂಬಾ ಅರಳಿದ ಸಂತಸವಾದ ನಗು ಇರುತ್ತದೆ. ಹತ್ತಾರು ಸಾವಿರ ಆನೆ, ಒಂಟೆ, ಕುದುರೆ ಗಳ ಜೊತೆಗೆ ಬಯಲಿನಲ್ಲಿ ಯುದ್ಧವಿರುವುದಿಲ್ಲ, ಗೆರಿಲ್ಲಾ ಯುದ್ಧದ ತರಹ  ಯಾವ ಟಾರ್ಗೆಟ್ ಗೆ  ಬಾಣ  ಮುಟ್ಟ ಬೇಕೋ  ಅದು ಮುಟ್ಟಿರುತ್ತದೆ.  ಸ್ಟ್ರೈಕ್ ಗಳು ಇರುವುದಿಲ್ಲ, ಮೌನದಲ್ಲಿಯೇ ಇನ್ನೊಬ್ಬರನ್ನು ಮಣಿಸುವ ಶಕ್ತಿ ಇಲ್ಲಿನ ರಾಜಕೀಯಕ್ಕೆ ಮೂಲ. ಹಿಂದೊಮ್ಮೆ ಹೇಳಿದಂತೆ ಸಾಫ್ಟ್ ಲೋಕದ "ಎ.ಸಿ" ರೂಂ ನಲ್ಲಿರುವವರಿಗೆ ಮಾತ್ರ ಗೊತ್ತು ಅದರ ಬಿಸಿ ಎಂಥದು ಅಂತ!
ಶೀತಲ ಸಮರ, ಮುಸುಕಿನ ಗುದ್ದಾಟ, ಮೌನದಲ್ಲಿಯೇ ಇದ್ದು ಎಲ್ಲವನ್ನು ಮುನ್ನಡೆಸುವ ಚಾಣಾಕ್ಷತೆ ಇಲ್ಲಿ ಕಾಣಬಹುದು. ತಲೆ ಕೆಟ್ಟವನು ಕೂಗುತ್ತಾನೆ, ಬುದ್ದಿ ಇದ್ದವನು ಮೌನವಾಗಿದ್ದು ಕೊಂಡೆ ತನ್ನ ಕೆಲಸ ಗೆಲ್ಲಿಸಿಕೊಳ್ಳುತ್ತಾನೆ ಎನ್ನುವುದು ಇಲ್ಲಿನ ಮೂಲ  ಮಂತ್ರ. ನಿಷ್ಟುರತೆ ಇಲ್ಲಿ ಅಷ್ಟೊಂದು   ಬರುವುದಿಲ್ಲ, ಇಲ್ಲೇನಿದ್ದರೂ "ಸಾಫ್ಟ್" ಪೊಲಿಟಿಕ್ಸ್.
ಸಾಮಾನ್ಯವಾಗಿ ಹೊಸತಾಗಿ ಕೆಲಸಕ್ಕೆ ಸೇರಿದ ಹುಡುಗ ಹುಡುಗಿಯರಿಗೆ ಇದು ಅಷ್ಟೊಂದು ಗೊತ್ತಾಗುವುದಿಲ್ಲ, ಆದರೆ ಒಂದೇ ಕಂಪನಿ ಯಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡುತ್ತಾ ಹೋದರೆ ಎಲ್ಲವೂ ನಮ್ಮ ಮುಂದೆ ಎಲೆ ಎಲೆ ಯಾಗಿ ಕಾಣಿಸುತ್ತ ಹೋಗುತ್ತದೆ. ಸಾಫ್ಟ್ ಲೋಕ.... ಸಾಫ್ಟ್?
ಸುಮ್ಮನೆ ಹಾಗೆ ವಿಚಾರ ಮಾಡಿ: ಒಂದು ರಾಜಕೀಯಪಕ್ಷದ ಒಬ್ಬ ಪ್ರಭಾವಿ ವ್ಯಕ್ತಿ ಇನ್ನೊಂದು ರಾಜಕೀಯ ಪಕ್ಷಕ್ಕೆ ಜಂಪ್ ಮಾಡಿದರೆ, ಅವನು ಒಬ್ಬನೇ ಹೋಗುವುದಿಲ್ಲ ಅವನ ಜೊತೆಗೆ ಅವನ ಬೆಂಬಲಿಗರೂ ಹೋಗುತ್ತಾರೆ, ಅಂತೆಯೇ ಸಾಫ್ಟ್ ಲೋಕದಲ್ಲಿಯೂ ಸಹ, ಉನ್ನತ ಹುದ್ದೆಯಲ್ಲಿರುವವರು ಒಂದು ಕಂಪನಿ ಯಿಂದ ಇನ್ನೊಂದು  ಕಂಪನಿ ಗೆ ಹೋದರೆ, ಆರು  ತಿಂಗಳಿನಲ್ಲಿಯೇ ತಮ್ಮ ಹಿಂದಿನ ಕಂಪನಿಯ  ತಮ್ಮ ಆಪ್ತರನ್ನು ತಾವಿರುವ ಕಡೆಗೆ ಎಳೆದುಕೊಂಡು ಬಿಡುತ್ತಾರೆ. ಅದಕ್ಕೆ ಸಾಫ್ಟ್ ಲೋಕದಲ್ಲಿ ಹೇಳೋದು : " ಏನಾದರೂ ಆಗು ಮೊದಲು ಬಾಸ್ ಗೆ ಹತ್ತಿರವಾಗು ಅಂತ !"
ಹಾಗಂತ ಎಲ್ಲ ಕಂಪನಿ ಯಲ್ಲೂ ಈ ಮುಸಿಕಿನ ಗುದ್ದಾಟ ಇರುತ್ತದೆ,ಎಲ್ಲ ಕಾಲದಲ್ಲೂ, ಯಾವಾಗಲೂ ರಾಜಕೀಯ ಇರುತ್ತದೆ ಅಂತ ಹೇಳಲು ಆಗುವುದಿಲ್ಲ. ಆದರೂ ಗುದ್ದಾಟವಿರದೆ ಇರುವ ವಾತಾವರಣ ಸ್ವಲ್ಪ ಕಡಿಮೆ. ಉನ್ನತ ಮಟ್ಟದ ಹುದ್ದೆಯೊಂದು ಖಾಲಿ ಇರುವಾಗ, ನಮಗೆ ಬೇಕಾದವರಿಗೆ ಕಂಪನಿಯಲ್ಲಿ ಒಂದಿಷ್ಟು ಒಳ್ಳೆಯ ಸ್ಥಾನಗಳು ಸಿಗಬೇಕೆಂದಾಗ, ಒಂದಿಷ್ಟು ರಾಜಕೀಯ ಲೆಕ್ಕಾಚಾರಗಳು ನಡೆದಿರುತ್ತವೆ.  Higher management ಎದುರಿಗೆ ತಮ್ಮನ್ನ ತಾವು project ಮಾಡಿಕೊಳ್ಳುವಾಗ ಒಂದಿಷ್ಟು ರಾಜಕೀಯ ಇದ್ದೆ ಇರುತ್ತದೆ. ಇದೊಂಥರ High command ಕಿವಿಗೆ ತಮ್ಮ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳು ತಲುಪಲಿ ಎನ್ನುವ ಎಲ್ಲ ರಾಜಕೀಯ ನಾಯಕರ ತರಹ…. ಹಾಗಂತ ಸಾಫ್ಟ್ ಲೋಕದಲ್ಲಿ ಇರೋರೆಲ್ಲರನ್ನು ಈ ಕೆಟಗರಿಗೆ ಸೇರಿಸಲು ಆಗೋದಿಲ್ಲ ಬಿಡಿ.

ವಾರದ ಬಿಲ್ಡ್ ಲೇಬಲ್ : ಏನ್ರಿ ಹಾಗೆ ಇನ್ನು ಕಣ್ಣರಳಿಸಿ ಕೊಂಡು  ಓದ್ತೀರಾ? ಗಾದೆ ಕೇಳಿಲ್ವಾ.. “ಎಲ್ರು  ಮನೆ ದೋಸೇನೂ ತೂತೆ”

Thursday, June 19, 2014

ಅಂಕಣ ೨೨: ಸಾಫ್ಟ್ ವೇರ್ ಇಂಜಿನೀಯರ್ ಗಳ ಬಗ್ಗೆ ನಿಮಗೆ ಗೊತ್ತಿರದ ಮೂವತ್ತು ವಿಷಯಗಳು - ಭಾಗ ೨

ಉಳಿದ ಭಾಗ ಇಲ್ಲಿದೆ. ಓದುತ್ತಾ ಹೋಗಿ. ….



೧೬. ಸಾಫ್ಟ್ ವೇರ್ ಎಂಜಿನೀಯರ್ಸ್ ಸಿಸ್ಟಂ ನಲ್ಲಿ ಅವರ ಜೀವನಕ್ಕೆ ಸಂಭಂದಿಸಿದ ಪ್ಲಾನ್ ಬಗ್ಗೆ ಕನಿಷ್ಠ ಪಕ್ಷ ಒಂದು "ಎಕ್ಸೆಲ್" ಶೀಟ್ ಆದರೂ ಇದ್ದೆ ಇರುತ್ತದೆ.


೧೭. ಸಾಫ್ಟ್ ವೇರ್ ಎಂಜಿನೀಯರ್ಸ್  ಶನಿವಾರ ಮತ್ತು ಭಾನುವಾರ ಅತಿ ಇಷ್ಟ ಪಟ್ಟು ಮಾಡುವ ಏಕೈಕ ಕೆಲಸವೆಂದರೆ : ನಿದ್ದೆ ,ನಿದ್ದೆ, ನಿದ್ದೆ.

೧೮. ಸಾಫ್ಟ್ ವೇರ್ ಎಂಜಿನೀಯರ್ಸ್ ತಮಿಳುನವರಾದರೆ ಕನಿಷ್ಠ ಪಕ್ಷ ತಿಂಗಳಿಗೆ ಒಂದಾದರು ತಮಿಳು ಚಿತ್ರ ನೋಡ್ತಾರೆ,ಆಂಧ್ರ ದವರಾದರೆ ವಾರಕ್ಕೊಂದು ತೆಲುಗು ಸಿನೆಮ ನೋಡ್ತಾರೆ, ಉತ್ತರ ಭಾರತ ದವರಾದರೆ ದೊಡ್ಡ ಸ್ಟಾರ್ ಗಳ ಚಿತ್ರವನ್ನು ಮುಂಗಡವಾಗಿ ಟಿಕೆಟ್ ಬುಕ್ ಮಾಡಿ ನೋಡುತ್ತಾರೆ, ಇನ್ನು ಕನ್ನಡ ದವರಾದರೆ ತಮ್ಮ ಭಾಷೆ ಚಿತ್ರ ಒಂದು ಬಿಟ್ಟು ಬೇರೆ ಎಲ್ಲ ಭಾಷೆಯ ಚಿತ್ರದ ಮಾಹಿತಿ ಇಟ್ಟುಕೊಂಡಿರುತ್ತಾರೆ.


೧೯. ಸಾಫ್ಟ್ ವೇರ್ ಎಂಜಿನೀಯರ್ಸ್ ಆನ್ ಸೈಟ್ ಹೋದ ತಕ್ಷಣ ಮಾಡುವ ಮೊಟ್ಟ  ಮೊದಲ ಕೆಲಸವೆಂದರೆ, ಫೆಸ್ ಬುಕ್ ನಲ್ಲಿ ತಮ್ಮ ಪ್ರೊಫೈಲ್ ಫೋಟೋ ಬದಲಾಯಿಸುತ್ತಾರೆ, ಅದು ಅವರು ಆನ್ ಸೈಟ್ ಹೋಗಿದ್ದಾರೆ ಎನ್ನುವ ಖುಷಿಗಿಂತಲೂ ನಾನು ಆನ್ ಸೈಟ್ ಗೆ ಹೋದದ್ದು ನಾಲ್ಕು ಮಂದಿಗೆ ತಿಳಿಯಲಿ ಎನ್ನುವ ಭಾವಜಾಸ್ತಿ ಇರುತ್ತದೆ.


೨೦. ಹೊಸತಾಗಿ ಕೆಲಸಕ್ಕೆ ಸೇರಿದ ಸಾಫ್ಟ್ ವೇರ್ ಎಂಜಿನೀಯರ್  Week Day  ನಲ್ಲಿ ಇದ್ದಕ್ಕಿದ್ದಹಾಗೆ ಕೆಲಸಕ್ಕೆ ರಜೆ ಹಾಕಿದರೆ ಅವರು ಬೇರೆ ಕಡೆಗೆ ಇಂಟರ್ವ್ಯೂ ಗೆ ಹೋಗಿದಾರೆ ಅಂತ ಅರ್ಥ.


೨೧. ಸಾಫ್ಟ್ ವೇರ್ ಎಂಜಿನೀಯರ್ ಗಳಿಗೆ ಟೀ ಮತ್ತು ಸಿಗರೇಟಿನ ಅಭ್ಯಾಸ ಸ್ವಲ್ಪ ಜಾಸ್ತಿ. ಇವೆರಡು ಬೇಜಾರಾದಾಗ ಸ್ವಲ್ಪ ಎಣ್ಣೆಯನ್ನೂ ಹಾಕುತ್ತಾರೆ.


೨೨. ಪ್ರತಿಯೊಬ್ಬ ಸಾಫ್ಟ್ ವೇರ್ ಎಂಜಿನೀಯರ್ ಇಷ್ಟಪಡದ ಒಂದು ವಿಷಯ ಅಂದ್ರೆ : "ಸೋಮವಾರ ಬೆಳಿಗ್ಗೆ ಆಫಿಸಿಗೆ ಬರುವುದು" !


೨೩. ಸಾಫ್ಟ್ ವೇರ್ ಎಂಜಿನೀಯರ್ಸ್ ಗೆ ತುಂಬಾ ಇರಿಟೇಟ್  ಆಗುವುದು, ಫೈಲ್ ನ ಸೇವ್ ಮಾಡುವಾಗ ಅದು ,
"you have read only access!" ಅಂತ message display ಮಾಡಿದಾಗ.


೨೪. ಪ್ರತಿ ತಿಂಗಳು Eslip ಮೇಲ್ ಬಂದಾಗ ಸಾಫ್ಟ್ ವೇರ್ ಎಂಜಿನೀಯರ್  ಮೊದಲು ಮಾಡುವ ಕೆಲಸ ವೆಂದರೆ "ಅದರ ಒಂದಿ ಕಾಪಿ ಯನ್ನ ಪ್ರಿಂಟ್ ತಗೊಂಡು ಅದನ್ನ ತನ್ನ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವುದು"


೨೫. ಮುಂದಿನ ವಾರ ವೀಕೆಂಡ್ ಸೇರಿಸಿ ಮೂರುದಿನ ರಜೆ ಸಿಗುತ್ತೆ  (ಲಾಂಗ್ ವೀಕೆಂಡ್ ) ಅಂದ್ರೆ ಸಾಫ್ಟ್ ವೇರ್ ಎಂಜಿನೀಯರ್ ಗಳು ಇವತ್ತಿನಿಂದಲೇ ಮುಂದಿನ  ವಾರದ ಲೆಕ್ಕಾಚಾರಗಳನ್ನ ಹಾಕಲು ಶುರು ಮಾಡಿ ಬಿಟ್ಟಿರುತ್ತಾರೆ.


೨೬. ಪ್ರತಿ ಸಾಫ್ಟ್ ವೇರ್ ಎಂಜಿನೀಯರ್ ಕನಿಷ್ಠ ಪಕ್ಷ ಎರಡು ತಿಂಗಳಿಗೆ ಒಂದು ಸಲ ವಾದರೂ " ಪಿಜ್ಜಾ / ಬರ್ಗರ್ / ಟ್ಯಾಕೋ/ ತಿನ್ನುತ್ತಾನೆ.


೨೭. ಸಾಫ್ಟ್ ವೇರ್ ಎಂಜಿನೀಯರ್ ಬುಕ್ ಶಾಪ್ ಗಿಂತ accessory shop ಜೀನ್ ವಿಸಿಟ್ ಮಾಡುವುದು ಜಾಸ್ತಿ.


೨೮. ಲೀಡ್ ಅಥವಾ ಮ್ಯಾನೇಜರ್ ಪೊಸಿಶನ್ ನಲ್ಲಿರೋ ಮದುವೆಯಾದ ಸಾಫ್ಟ್ ಲೋಕದ ಹೆಂಗಸರು ವೀಕೆಂಡ್ ನಲ್ಲಿ ತಮ್ಮ ತಮ್ಮ ಗಂಡಂದಿರ ಕೆಲಸವನ್ನು ಸಹ ಎಕ್ಸೆಲ್ ಶೀಟ್ ನಲ್ಲಿ ಪ್ಲಾನ್ ಮಾಡಿ ಇಟ್ಟು  ಬಿಟ್ಟಿರುತ್ತಾರೆ.


೨೯. ಸಾಫ್ಟ್ ಲೋಕದಲ್ಲಿ ಈಗೀಗ ಬರುತ್ತಿರುವ ಹೊಸ ಕ್ರೇಜ್ : organic food, healthy diet .. etc


೩೦. ಸಾಫ್ಟ್ ಲೋಕದ ಜನರಿಗೆ ಸಿಟ್ಟು ಬರುವುದು ಅವರು ಬ್ರೌಸ್ ಮಾಡುತ್ತಿರುವ ವೆಬ್ ಸೈಟ್ ಏಕಾ-ಏಕಿ craash ಅದಾಗ, ಭಯಂಕರ ಸಿಟ್ಟು ಬರುವುದು " ಬ್ರೌಸ್ ಮಾಡಿದ application ನಿಂದಾಗಿ enitre system ಕೆಲ   ಕಾಲ  hang ಆದಾಗ!".

ಈ ವಾರದ ಬಿಲ್ಡ್ ಲೇಬಲ್ :  ಈ ಮೇಲಿನ ಎಲ್ಲ ಪಾಯಿಂಟ್ ಗಳನ್ನೂ ಓದಿ ನೀವು ನಗುತ್ತಾ ಇದ್ದಾರೆ ನೀವು ಇನ್ನು ಸಾಫ್ಟ್ ಲೋಕದಲ್ಲಿ higher level position occupy ಮಾಡಿಲ್ಲ ಅಂತ ಅರ್ಥ , ಇಷ್ಟೆಲ್ಲಾ ಓದಿನೂ ನೀವು ನಗದೆ ಇದ್ದರೆ ನೀವು ಈಗಾಗಲೇ ಸಾಫ್ಟ್ ಲೋಕದಲ್ಲಿ ತುಂಬಾ higher level position occupy ಮಾಡಿದೀರಾ ಅಂತ ಅರ್ಥ!

Thursday, June 12, 2014

ಅಂಕಣ ೨೧ : ಸಾಫ್ಟ್ ವೇರ್ ಇಂಜಿನೀಯರ್ ಗಳ ಬಗ್ಗೆ ನಿಮಗೆ ಗೊತ್ತಿರದ ಮೂವತ್ತು ವಿಷಯಗಳು - ಭಾಗ ೧

ನಾವು ಇರುವುದು ಹಾಗೆಯೇ. ನಮ್ಮ ಕೆಲಸ, ಕೆಲಸದ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಿರುತ್ತೇವೆ. ಈ ಕೆಳಗೆ ಪಟ್ಟಿ ಮಾಡಿರುವ ಅಂಶಗಳಲ್ಲಿ ನಾವು ಒಂದಲ್ಲ ಒಂದನ್ನ ಮಾಡಿರುತ್ತೇವೆ ಅಥವಾ ಇನ್ನು ಮಾಡುತ್ತಲೇ ಇರುತ್ತೇವೆ.
ಸಾಫ್ಟ್ ಲೋಕದ ಲ್ಲಿ ನಡೆಯುವ ನಿತ್ಯದ ಕೂತುಹಲಕಾರಿಯಾಗಿರುವ ಒಂದಿಷ್ಟು ಅಂಶಗಳನ್ನ ಇಲ್ಲಿ ಪಟ್ಟಿ ಮಾಡಿದ್ದೇನೆ. ಸುಮ್ಮನೆ ಓದುತ್ತಾ ಹೋಗಿ. ನಗು ತಂತಾನೇ ಬರುತ್ತದೆ.




೧. ಫ್ರೆಶರ್ ಆಗಿದ್ದರೆ ತಿಂಗಳ ಮೂರನೇ ವಾರದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಎಲ್ಲ ಖಾಲಿ ಆಗಿ, ನಾಲ್ಕನೇ ವಾರದ ಕೊನೆಯ ದಿನಕ್ಕೋಸ್ಕರ ಕಾದು  ಕೂತಿರುತ್ತಾನೆ.


೨. ಐದು ವರ್ಷಕ್ಕಿಂತ ಜಾಸ್ತಿ ಅನುಭವವಿರೊರು ಸಂಬಳ ಬಂದ ತಕ್ಷಣ ಕ್ಯಾಲ್ಕುಲೇಟರ್ ಓಪನ್ ಮಾಡ್ಕೊಂಡು ಪ್ರತಿ ಸಲದಂತೆ ತಮ್ಮ “EMI” ಲೆಕ್ಕ ಹಾಕ್ತಾ ಕೂಡುತ್ತಾರೆ.


೩.  ಕೆಲಸ ಇಲ್ಲದೆ ಖಾಲಿ ಇರುವಾಗ ಮದುವೆ  ಆದವರು ಮತ್ತು ಆಗದೆ ಇರುವ ಹೆಂಗಸರು ಬ್ರೌಸ್ ಮಾಡುವುದು -
“ಆನ್ ಲೈನ್ ಶಾಪಿಂಗ್ ನಲ್ಲಿ ಬಟ್ಟೆ  ಮತ್ತು  ಆಭರಣಗಳ ಬಗ್ಗೆ”. ಹಾಗಂತ ನೋಡಿದ್ದೆಲ್ಲವನ್ನು ಕೊಂಡುಕೊಳ್ಳುತ್ತಾರೆ ಅಂದುಕೋಬೇಡಿ.


೪. ಪ್ರತಿಯೊಬ್ಬ ಸಾಫ್ಟ್ ವೇರ್ ಎಂಜಿನೀರ್ ನ ಪರ್ಸ್  ಅಥವಾ ವಾಲೆಟ್ ತೆಗೆದು ನೋಡಿ, ಅದರಲ್ಲಿ ದುಡ್ಡಿಗಿಂತ ಕಾರ್ಡ್ ಗಳೇ ಜಾಸ್ತಿ ಇರುತ್ತವೆ (credit card, debit card, discount card, offer card, amex card, .. etc ). ಅದರಲ್ಲಿ ಅರ್ಧದಷ್ಟು ಕಾರ್ಡ್ ಗಳ ವ್ಯಾಲಿಡಿಟಿ ಮುಗಿದು ಹೋಗಿದ್ದರೂ ಸಹ, ಪರ್ಸ ನಲ್ಲಿ ಅವು ಭದ್ರವಾಗಿ ಇರುತ್ತವೆ!


೫. ಪ್ರತಿಯೊಬ್ಬ ಸಾಫ್ಟ್ ವೇರ್ ಎಂಜಿನೀರ್ ಕನಿಷ್ಠ ಪಕ್ಷ ಎರಡು ಗಂಟೆಗೆ ಒಂದು ಸಲವಾದರೂ ತನ್ನ ಮೊಬೈಲ್ ಫೋನ್ ನಲ್ಲಿ ಮಾತಾಡುತ್ತಾನೆ/ಳೆ. ಪ್ರತಿ ಅರ್ಧ ಗಂಟೆಗೆ ಒಂದು ಸಲ ವಾದರೂ ಫೋನ್ ನ ಅನ್ಲಾಕ್ ಮಾಡಿ ಚೆಕ್ ಮಾಡುವ ಅಭ್ಯಾಸ ವಿರುತ್ತದೆ.


೬. ಸಾಫ್ಟ್ ವೇರ್ ಎಂಜಿನೀರ್ ಮನೆಯಲ್ಲಿ ಯಾವಾಗಲು ರಾರಾಜಿಸುತ್ತಿರುವುದು ಒಂದು ಒಳ್ಳೆ ಕ್ವಾಲಿಟಿ  “ ಸೌಂಡ್ ಸಿಸ್ಟಂ” ಹಾಗೇನೆ ಲ್ಯಾಪ್ ಟಾಪ್ / ಪಿ.ಸಿ.


೭. ಸಾಫ್ಟ್ ವೇರ್ ಎಂಜಿನೀರ್  ಬ್ಯಾಗ ನಲ್ಲಿ ಯಾವಾಗಲು ಹ್ಯಾಂಡ್ ಫ್ರೀ ಇದ್ದೆ ಇರುತ್ತದೆ.


೮.  ಸಾಫ್ಟ್ ವೇರ್ ಎಂಜಿನೀರ್  ತಿಂಗಳ ಕೊನೆಯ ಬ್ಯಾಂಕ್ ಬ್ಯಾಲೆನ್ಸ್ ಒಂದೊಂದು ಸಲ ೧೮, ೪೫, ೩೮ ರೂಪಾಯಿ ಸಹ ಆಗಿರುತ್ತದೆ.


೯. ಸಾಫ್ಟ್ ಲೋಕದ ಹುಡುಗಿಯರು ತಾವಾಗಿಯೇ ಹೊರಗಡೆ (Treat)ಊಟಕ್ಕೆ ಹೋಗುವುದಿಲ್ಲ. ಯಾರಾದರೂ invite ಮಾಡಿದರೆ ಮಾತ್ರ ತಪ್ಪಿಸಿಕೊಳ್ಳುವುದಿಲ್ಲ !


೧೦. ಬಹಳಷ್ಟು ಸಾಫ್ಟ್ ವೇರ್ ಎಂಜಿನೀರ್ ಪರ್ಸ್ ತೆಗೆದು ನೋಡಿ ಅದರಲ್ಲಿ ೩೦೦/- ಕ್ಕಿಂದ ಜಾಸ್ತಿ ದುಡ್ಡು ಇರುವುದಿಲ್ಲ .


೧೧. ಸಾಫ್ಟ್ ವೇರ್ ಎಂಜಿನೀರ್  ಪ್ರತಿದಿನವೂ ಆಫಿಸಿಗೆ ಹೊತ್ತೊಯ್ಯುವ ಬ್ಯಾಗ್  ಹಾಲು ಮೂಳು ಸೇರಿ ಒಂದೈದಾರು ಕೆಜಿ ಆಗಿರುತ್ತದೆ. ಆದರೂ ಅವರಿಗೆ ತಮ್ಮ ಬ್ಯಾಗ್ ಕ್ಲೀನ್ ಮಾಡಿಕೊಳ್ಳಲು ಸಮಯ ಇರುವುದಿಲ್ಲ.


೧೨. ಸಾಫ್ಟ್ ಲೋಕದಲ್ಲಿ ತುಂಬಾ experience ಇದ್ದವರನ್ನ ನೋಡಿ, ಅವರು ಯಾವುದಾದರೂ ಒಂದು habit ನ್ನ ಪ್ರತಿ ದಿನ ಅದೇ ಸಮಯಕ್ಕೆ ಮಾಡ್ತಾ ಇರ್ತಾರೆ.  ಮಧ್ಯಾನದ ಊಟವಿರಬಹುದು, ಅಥವಾ ಊಟವಾದ ಮೇಲೆ ಮಾಡುವ ಒಂದು ವಾಕ್ ಇರಬಹುದು, ದಿನಕ್ಕೆರಡು ಸಲ  ಟೀ ಕುಡಿಯೋ ಸಮಯ ಇರಬಹುದು…


೧೩. ಇಬ್ಬರು ಮದುವೆ  ಆಗಿರೋ ಸಾಫ್ಟ್ ಲೋಕದ ಮಹಿಳೆಯರು ತಮ್ಮ ಬ್ರೇಕ್ ಟೈಮ್ ನಲ್ಲಿ ಮಾತಾಡೋ ವಿಷಯ ಒಂದು ಅವರವರ ಅತ್ತೆಯ ಬಗ್ಗೆ, ಇಲ್ಲ ಅವರವರ ಮಕ್ಕಳ ಬಗ್ಗೆ.


೧೪. ಇಬ್ಬರು ಮದುವೆಯಾದ ಸಾಫ್ಟ್ ಲೋಕದ ಗಂಡಸರು ತಮ್ಮ ಬ್ರೇಕ್ ಟೈಮ್ ನಲ್ಲಿ " ಹೆಂಡತಿ ಮತ್ತು ಮಕ್ಕಳು" ಇವರಿಬ್ಬರನ್ನು ಬಿಟ್ಟು ಬೇರೆ ಎಲ್ಲ ವಿಷಯವನ್ನು ಮಾತಾಡುತ್ತಾರೆ.


೧೫. ಸಾಫ್ಟ್ ಲೋಕದ ಜನರ ಶರ್ಟ್ ಪಾಕೆಟ್ ನಲ್ಲಿ ಯಾವತ್ತೂ ಪೆನ್ ಇರುವುದಿಲ್ಲ, ಅವರು ಬ್ಯಾಂಕ್ ಗೆ ಹೋದರು ಪಕ್ಕದಲ್ಲಿರುವವರನ್ನು ಪೆನ್ ಕೇಳಿ ಚೆಕ್ ಗೆ ಸಹಿ ಮಾಡುತ್ತಾರೆ.

ಈ ವಾರದ ಬಿಲ್ಡ್ ಲೇಬಲ್: ಏನಿದು ೩೦ ವಿಷಯಗಳು ಅಂತ ಹೇಳಿ ಬರೀ ಹದಿನೈದೇ ಇದೆ ಅನ್ಕೋಬೇಡಿ. ಇದು PART 1 ಅಷ್ಟೇ, ಉಳಿದ ಭಾಗ  PART 2 ಮುಂದಿನ ವಾರ ಬರುತ್ತೆ.

Thursday, June 5, 2014

ಅಂಕಣ ೨೦ : ಕಂಪನಿ ಬಿಡುವ ಮುನ್ನ.....

ಇದು ತುಂಬಾ interesting point  . ಹೊರಗಡೆಯ ಲೋಕದವರಿಗೆ ಈ ವಿಷಯ ಯಾವಾಗಲೂ ಅವರಿಗೆ ಕೂತುಹಲ. ಒಂದು ಕಂಪನಿ ಬಿಟ್ಟು ಇನ್ನೊಂದು ಕಂಪನಿ ಸೇರಿಕೊಳ್ಳುವಾಗ ಸಾಫ್ಟ್ ಲೋಕದವರ ಮನಸ್ತಿತಿ ಹೇಗಿರುತ್ತೆ? ಅನ್ನೋದು ಅವರ ಪ್ರಶ್ನೆ. ಯಾಕಂದ್ರೆ ನಮ್ಮ ಹಿಂದಿನ ತಲೆಮಾರಿನವರು ಆದಷ್ಟೂ  ಸರಕಾರೀ ನೌಕರಿಯಲ್ಲಿ ಇದ್ದುದರಿಂದ ಕೆಲಸ ಬಿಡುವುದು ಅಂದರೆ ರಿಟೈರ್ಡ್ ಆಗುವುದು ಅಂತಲೇ ಅರ್ಥ.


ಸರಕಾರೀ ನೌಕರಿಯಲ್ಲಿ ಯಾರಾದರು ಒಬ್ಬರು ರಿಟೈರ್ಡ್ ಅಥವಾ ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗಾವಣೆ ಯಾದರೆ, ಇವತ್ತಿಗೂ ಸಹ ಆ ಊರಿನ ಪ್ರಮುಖರು, ಗಣ್ಯ ವ್ಯಕ್ತಿಗಳು ಬಂದು ಒಂದು ಸಮಾರಂಭ ಮಾಡುತ್ತಾರೆ. ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳ್ಳನ್ನಾ ಡಿ ಅವರನ್ನ ಹೃದಯ ಪೂರ್ವಕ ವಾಗಿ ಬಿಳ್ಕೊಡುತ್ತಾರೆ. ನಮ್ಮ ಸಾಫ್ಟ್ ಲೋಕದಲ್ಲಿ ಈ ಪ್ರೊಸೀಜರ್ ಹೇಗೆ ಇರುತ್ತದೆ? ಯಾರಾದರು ಒಬ್ಬರು ಕಂಪನಿ ಬಿಟ್ಟು ಹೊರಡುವಾಗ ಅವರನ್ನ ಸಾಫ್ಟ್ ಲೋಕದಲ್ಲಿ ಹೇಗೆ ಬಿಳ್ಕೊಡುತ್ತಾರೆ ಅನ್ನೋದನ್ನ ಸ್ವಲ್ಪ ನೋಡೋಣ ಬನ್ನಿ.




ಸಾಮಾನ್ಯವಾಗಿ ಸಾಫ್ಟ್ ಲೋಕದವರು ತಾವು ಕೆಲಸ ಮಾಡುತ್ತಿರುವ ಕಂಪನಿ ಗೆ ರಿಸೈನ್ ಮಾಡಿದಾಗ ಆದಷ್ಟೂ ಅದನ್ನ confidential ಆಗಿ ಇಟ್ಟಿರುತ್ತಾರೆ ಮತ್ತು ಇನ್ನೊಂದು ವಿಷಯ,  “ಯಾವುದೇ ಕಂಪನಿ ಯಲ್ಲಾಗಲಿ ರಿಸೈನ್ ಮಾಡಿದ ದಿನವೇ ಅವರನ್ನು ಮನೆಗೆ ಕಳಿಸುವುದಿಲ್ಲ”. ರಿಸೈನ್ ಮಾಡಿ ಆದ ಮೇಲೆ ಕನಿಷ್ಠ ಪಕ್ಷ ಎರಡು ತಿಂಗಳಾದರೂ ಅವರು ಅದೇ ಕಂಪನಿ ಯಲ್ಲಿ ಕೆಲಸ ಮಾಡ್ಬೇಕು. ಈ ಎರಡು ತಿಂಗಳ ಅವಧಿಯನ್ನು ನಮ್ಮ ಸಾಫ್ಟ್ ಲೋಕದ ಭಾಷೆಯಲ್ಲಿ Notice Period ಅನ್ನುತ್ತಾರೆ . ಈ ಹಂತದಲ್ಲಿ ರಿಸೈನ್ ಮಾಡಿದ ವ್ಯಕ್ತಿ ತಾನು ಇಷ್ಟು ದಿವಸ ಮಾಡಿದ ಕೆಲಸದ ಕುರಿತು ಬೇರೊಬ್ಬರಿಗೆ ಮಾಹಿತಿ ಕೊಡಬೇಕು. ರಿಸೈನ್ ಮಾಡಿದ ವ್ಯಕ್ತಿ ಕಂಪನಿ ಬಿಟ್ಟ ನಂತರ ಆ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಇನ್ನೊಬ್ಬರಿಗೆ ಸಹಾಯವಾಗುತ್ತದೆ. ಇದನ್ನು ನಮ್ಮ ಸಾಫ್ಟ್ ಲೋಕದ ಭಾಷೆಯಲ್ಲಿ Knowledge Transfer ( KT)  ಅನ್ನುತ್ತಾರೆ.


ಸಾಫ್ಟ್ ಲೋಕದಲ್ಲ್ಲಿ ಯಾರಾದರು ಮತ್ತೊಬ್ಬರಿಗೆ KT ಕೊಡುತ್ತಿದ್ದಾರೆ ಅಂದರೆ ಕೇವಲ ಮೂರು ಕಾರಣಕ್ಕೆ ಮಾತ್ರ :
ಒಂದು, ಅವರು ಅದೇ ಕಂಪನಿ ಯಲ್ಲಿ ತಾವಿರುವ ಪ್ರಾಜೆಕ್ಟ್ ಬಿಟ್ಟು ಬೇರೆ ಪ್ರಾಜೆಕ್ಟ್ ಗೆ ಹೋಗುತ್ತಿದ್ದಾರೆ ಅಂತ.
ಎರಡು, ಕಂಪನಿ ಬಿಟ್ಟು ಬೇರೆ ಕಂಪನಿ  ಗೆ ಹೋಗುತ್ತಿದಾರೆ ಅಂತ.
ಮೂರು, ಈಗತಾನೆ ಕೆಲಸಕ್ಕೆ ಸೇರಿರುವವರನ್ನು ಮೆಂಟರ್ ಮಾಡುತ್ತಿದ್ದಾರೆ ಅಂತ ಅರ್ಥ.


ರಿಸೈನ್ ಮಾಡಿದ ವಿಷಯ  ಎಷ್ಟೇ ಗುಟ್ಟಾಗಿ ಇದ್ದರೂ ಸಹ ಅದು ಹೇಗೋ ಎಲ್ಲರಿಗೂ ಗೊತ್ತಾಗಿ ಹೋಗುತ್ತದೆ.  ಸಾಫ್ಟ್ ಲೋಕದಲ್ಲಿ ವಿಶೇಷವಾಗಿ Resign ಅಥವಾ Fire ಮಾಡಿದ ಸುದ್ದಿಗಳು ಗಾಳಿಯಂತೆ ಹರಡಿಬಿದುತ್ತವೆ. ಒಬ್ಬರು ( ಉದಾಹರಣೆಗೆ: ವ್ಯಕ್ತಿಯ ಹೆಸರು ಸಂತೋಷ್ ಅಂದು ಕೊಳ್ಳೋಣ) ರಿಸೈನ್ ಮಾಡಿದಾಗ ಅವರ ಲಾಸ್ಟ್ ವರ್ಕಿಂಗ್ ಡೇಟ್ ಗೊತ್ತಾಗುವುದು ರಹಸ್ಯವೇನಲ್ಲ. ಲಾಸ್ಟ್ ಡೇಟ್ ಹಿಂದಿನ ದಿನ ಆ ಪ್ರಾಜೆಕ್ಟ್ ಟೀಂ ನಲ್ಲಿ ಎಲ್ಲರಿಗು ಒಂದು ಮೇಲ್ ಹೋಗುತ್ತೆ ( ಸಂತೋಷ್ ನನ್ನು ಹೊರತು ಪಡಿಸಿ) :
“Contribution for Santosh farewell” ಅಂತ.
ಮರುದಿನ ಒಂದು ದೊಡ್ಡ ಗ್ರೀಟಿಂಗ್ ಕಾರ್ಡ್ ಮೇಲೆ ಪ್ರಾಜೆಕ್ಟ್ ಟೀಂ ಮೆಂಬರ್ಸ್ ಎಲ್ಲರೂ ತಮ್ಮ ತಮ್ಮ best wishes ನ ಬರೆದು ಅದರ ಜೊತೆಗೆ ಒಂದು ಗಿಫ್ಟ್ ಅನ್ನು ರೆಡಿ ಮಾಡಿ ಇಟ್ಟುಕೊಂಡಿರುತ್ತಾರೆ.  ಆ ದಿನ ಸರಿಯಾಗಿ ಮಧ್ಯಾನದ ವೇಳೆಗೆ ಎಲ್ಲರೂ ಒಂದು ಕಡೆ ಮೀಟಿಂಗ್ ರೂಂ ನಲ್ಲಿ ಸೇರುತ್ತಾರೆ. ಸಂತೋಷ್ ಕೂಡ ಅಲ್ಲಿಗೆ ಬರುತ್ತಾನೆ.
ಮೊದಲಿಗೆ ಪ್ರಾಜೆಕ್ಟ್ ಮ್ಯಾನೇಜರ್ : “It was wonderful having Santosh with us from last 2 years. we had great time. i wish him all the best!" ಅಂತ ಪೀಟಿಕೆ ಹಾಕುತ್ತಾರೆ.
ತದ  ನಂತರ ಪ್ರಾಜೆಕ್ಟ್ ಟೀಂ ನಲ್ಲಿ ಒಬ್ಬಬ್ಬರಾಗಿ ಎಲ್ಲರೂ ತಮ್ಮ ತಮ್ಮ ಸಿಹಿ ಅನುಭವಗಳನ್ನು ಮೆಲುಕು ಹಾಕುತ್ತ ಸಂತೋಷ್ ಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತಾರೆ.
ಕೊನೆಗೆ ಸಂತೋಷ್ ಸರದಿ : “ "I had very good experience, it was great learning curve in this project... thank you for your support and co-operation for all these days.. Keep in touch" ಅಂತ ಹೇಳಿ ಸಂತೋಷ್ ತನ್ನ ಮಾತನ್ನ ಮುಗಿಸುತ್ತಾನೆ.
ಚಪ್ಪಾಳೆಗಳು  .....
ತದ  ನಂತರ ತಂದಿದ್ದ greeting card ಮತ್ತು  gift ಗಳನ್ನೂ ಸಂತೋಷ್ ಗೆ ಕೊಡುತ್ತಾರೆ.
ಫೇರ್ವೆಲ್ ಸೆರೆಮನಿ ಆದಮೇಲೆ ಸಂತೋಷ್ ನಿಂದ ಎಲ್ಲರಿಗೂ ಒಂದು ಮೇಲ್ ಬರುತ್ತದೆ.
ಇದರ ಜೊತೆಗೆ ಅವತ್ತಿನ ದಿನ ಸಂತೋಷ್ ಒಂದಿಷ್ಟು  ಕಂಪನಿಯ ಪ್ರೋಸೆಸ್ ಗಳನ್ನ ಫಾಲೋ ಮಾಡಬೇಕಾಗುತ್ತದೆ.
ಅದು HR ಜೊತೆಗಿನ ಮೀಟಿಂಗ್, ಅದನ್ನ ಸಾಫ್ಟ್ ಲೋಕದ ಭಾಷೆಯಲ್ಲಿ : “Exit Interview “ ಅಂತ ಕರೀತಾರೆ.
ಮೀಟಿಂಗ್ ಎಲ್ಲ ಮುಗಿದ ಮೇಲೆ ಸಂತೋಷ್ ತನ್ನ ID  ಕಾರ್ಡ್ ನನ ಹ್ಯಾಂಡ್ ಓವರ್ ಮಾಡಿ ಬರುತ್ತಾನೆ. ಅಷ್ಟರಲ್ಲಾಗಲೇ Config team   ಟೀಂ ನವರು ಸಂತೋಷ್ ಮಷೀನ್ ( ಕಂಪ್ಯೂಟರ್ ) ನ ನ್ನು ತಮ್ಮ ವಶಕ್ಕೆ ತೆಗೆದು ಕೊಂಡಿರುತ್ತಾರೆ.


ಇಲ್ಲಿ ತಮಾಷೆಯ ವಿಷಯವೆಂದರೆ, farewell ceremony ಆದಮೇಲೆ ಪ್ರಾಜೆಕ್ಟ್ ಟೀಂ ನಲ್ಲಿ ಸಣ್ಣದಾಗಿ ಗುಸ ಗುಸ - ಪಿಸ ಪಿಸಾ  ಶುರು ಆಗುತ್ತದೆ.
" Hey which company Santhosh is joining?"
" No idea"
" Lucky fellow"
" Hey when is your turn?"
" I am not so lucky"
ಹೀಗೆ ಸಾಗುತ್ತಿರುತ್ತದೆ ಹೋದವರ ಬಗ್ಗೆ ಇದ್ದವರ ಮಾತುಗಳು.
ಸಂತೋಷ್ ಹೊರಕ್ಕೆ ಹೊದ. ಅವತ್ತು ಅವನ ಬಗ್ಗೆ ಒಂದಿಷ್ಟು ಮಾತು ಕಥೆಗಳು ಆಯಿತು. ಆ ದಿನ ಮುಗಿಯಿತು. ಮರುದಿನ ಯಥಾಪ್ರಕಾರ testing, debugging, build label submission, review.. etc ಅಂತ ಎಲ್ಲರೂ ತಮ್ಮ ತಮ ಕೆಲಸದಲ್ಲಿ ಬ್ಯುಸಿ.

ಈ ವಾರದ ಬಿಲ್ಡ್ ಲೇಬಲ್ : “My Last Working Day“ ಅನ್ನೋ ಮೇಲ್ ಯಾರಿಂದಾದರೂ ನಮ್ಮ inbox ಗೆ ಬಂದಾಗ “ ನಾನು ಒಂದು ದಿನ ಈ ಥರ ಮೇಲ್ ಕಳಿಸಿದಾಗ ಎಲ್ಲರೂ ಹೇಗೆ ರಿಯಾಕ್ಟ್ ಮಾಡಬಹುದು?” ಅನ್ನೋ  ಆಲೋಚನೆ ಪ್ರತಿಯೊಬ್ಬ ಸಾಫ್ಟ್ ವೇರ್ ಎಂಜಿನೀರ್ ಮನಸಿನಲ್ಲೂ ಬಂದೆ ಬಂದಿರುತ್ತದೆ !