ಕೆಲವರಿರುತ್ತಾರೆ ಅವರಿಗೆ ಕೋಡಿಂಗ್ ಬಿಟ್ಟರೆ ಬೇರೆ ಜೀವನವೇ ಇಲ್ಲ ಎನ್ನುವಂತೆ. ಅವರಿಗೆ ಕೋಡಿಂಗ್ ಮೇಲೆ ಅದೆಷ್ಟು ಪ್ರೀತಿ ಎಂದರೆ, ಸಾಫ್ಟ್ ಲೋಕದ ಇತರ ವಿಭಾಗದ ಜನರೆಲ್ಲಾ (ಉದಾಹರಣೆಗೆ : ಟೆಸ್ಟಿಂಗ್, ಕ್ವಾಲಿಟಿ, ಮ್ಯಾನೇಜ್ಮೆಂಟ್ ) ಇವರಿಗೊಂದು ಥರ ಅಸಡ್ಡೆ. ಈ ಕೋಡ್ ದಿಗ್ಗಜರಿಗೆ ತಮ್ಮ ಕೆಲಸವೇ ಯಾವತ್ತಿಗೂ ಶ್ರೇಷ್ಠ ಎನ್ನುವ ಭಾವನೆ. ಹಾಗೇನೆ ತಮ್ಮ ಕೆಲಸದ ಮೇಲೆ ಅವರಿಗೆ ಅತೀವ ವಾದ ಅಭಿಮಾನ ಸಹ.
ಇವರಲ್ಲಿ ವಿಶೇಷವಾಗಿ ಒಂದಿಷ್ಟು ಜನ ಯಾವಾಗಲೂ ಲಾಜಿಕ್ ನಲ್ಲಿ ಮುಳುಗಿ ಹೋಗಿರುತ್ತಾರೆ. ಇಂತಹವರು ಪಿಚ್ಚರ್ ಗೆ ಹೋದರೆ ಥಿಯೇಟರ್ ನಲ್ಲಿರೋರೆಲ್ಲರೂ ಸಿನೆಮಾನ ಆನಂದಿಸುತ್ತಿದ್ದಾರೆ ಇವರು ಆ ಕಥೆಯನ್ನ ತಮ್ಮದೇ ಆದ ಲಾಜಿಕ್ ನಿಂದ ಆಲೋಚಿಸುತ್ತಾರೆ. ಅವರ ಪ್ರಕಾರ ಅದು ತಪ್ಪಾದರೆ, ಥಿಯೇಟರ್ ನಿಂದ ಹೊರಕ್ಕೆ ಬಂದೆ ಬಿಡುತ್ತಾರೆ. ಯಾವನಾದರೂ ಒಂದು ಜೋಕು ಹೇಳಿದರೆ ಅದು ಎಷ್ಟು ಪ್ರಾಕ್ಟಿಕಲ್ ಅಂತ ಆಲೋಚಿಸುತ್ತಾರೆ. ಇವರು ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ಏನನ್ನೋ ಹುಡುಕುತ್ತಿರುತ್ತಾರೆ ( ತಮ್ಮ ಲಾಜಿಕ್ ನ ಸಹಾಯ ದಿಂದ). ಇವರಿಗೆ ಪಜಲ್ ಗಳು, ಯಾವಾಗಲು ತಾರ್ಕಿಕವಾಗಿ ಕೊನೆಗೊಳ್ಳುವ ವಿಷಯಗಳು ತುಂಬಾ ಇಷ್ಟ. ಕೆಲವೊಂದು ಸಲ ಇವರ "ಸೆನ್ಸ್ ಆಫ್ ಹುಮರ್" ಸಹ ಅಷ್ಟೇ ಚೆನ್ನಾಗಿ ಇರುತ್ತದೆ.
ಇವರಿಗೆ ದಿನ ಪತ್ರಿಕೆಯಲ್ಲಿ ಬರುವ ಸುಡೋಕು ಮೇಲೆ ಎಲ್ಲಿಲ್ಲದ ಆಸಕ್ತಿ. ಹಾಗೇನೆ, ತಮ್ಮ ಬಿಡುವಿನ ವೇಳೆಯಲ್ಲೂ ಇವರು .Net, C++, Csharp, PHP, Python ಮುಂತಾದವುಗಳ ಬಗ್ಗೆ ಬಹಳ ಆಸಕ್ತಿಯಿಂದ ಓದುತ್ತಿರುತ್ತಾರೆ. ಇಂಗ್ಲಿಷ್ ಚಿತ್ರಗಳಲ್ಲಿ ತುಂಬಾ ಆಸಕ್ತಿ ಹೊಂದಿರುವ ಇವರು, ಲಾಜಿಕ್ ಇರುವ ಯಾವುದೇ ವಿಷಯಕ್ಕೆ ಇವರು ಸಂಪೂರ್ಣ ಬೆಂಬಲ ಕೊಡುತ್ತಾರೆ. ಇಷ್ಟೆಲ್ಲಾ ಹೇಳಿದ ಮೇಲೆ, ಕೋಡ್ ಮಾಡುವುದರಲ್ಲಿ ಇವರು “ಪಂಟ್ರು” ಅಂತ ಬೇರೆ ಹೇಳಬೇಕಾಗಿಲ್ಲ ತಾನೇ? ಇಂತಹ ಲಾಜಿಕ ಜನರ ತಮಾಷೆಯಾಗಿರುವ ಘಟನೆಗಳನ್ನ ನೋಡೋಣ ಬನ್ನಿ:
ಮೊನ್ನೆ ನನ್ನ ಗೆಳೆಯನೊಬ್ಬ ( ಗೆಳೆಯ ನಂಬರ್ ೧ ಅಂದುಕೊಳ್ಳೋಣ) ಫೇಸ್ ಬುಕ್ ನಲ್ಲಿ ಎಲ್ಲರಿಗೂ ಆಪತ್ತಿನಲ್ಲಿ ಅನುಕೂಲವಾಗಲಿ ಅಂತ ಒಂದು ಮೆಸೇಜು ಹಾಕಿದ್ದ : :
“ ನೀವು ಎ ಟಿ ಎಂ ನಲ್ಲಿ ದುಡ್ಡು ತೆಗೆದುಕೊಳ್ಳುವಾಗ, ಯಾರಾದರು ಕಳ್ಳ ಬಂದು ನಿಮಗೆ ಚಾಕು ತೋರಿಸಿ ಹೆದರಿಸಿದರೆ ನೀವು ತಕ್ಷಣ ನಿಮ್ಮ ಪಿನ್ ಅನ್ನು “ಉಲ್ಟಾ” ಎಂಟರ್ ಮಾಡಿ (ಅಂದರೆ ನಿಮ್ಮ ಪಿನ್ ೧೨೩೪ ಇದ್ದಾರೆ ೪೩೨೧ ಎಂಟರ್ ಮಾಡಿ), ಅವಾಗ ದುಡ್ಡು ಬರುವುದಿಲ್ಲ ಮತ್ತು ಪೊಲೀಸರಿಗೆ ಮೆಸೇಜ್ ಹೋಗುತ್ತದೆ”
ಅದಕ್ಕೆ ನನ್ನ ಇನ್ನೊಬ್ಬ ಗೆಳೆಯ ನಂಬರ್ ೨ ( logic category ಗೆ ಸೇರಿದ) ಕೆಳಗಡೆ ಕಾಮೆಂಟ್ ಬರೆದಿದ್ದ:
“what if my ATM pin is palindrome like 1221? “
ಅದಕ್ಕೆ ಉತ್ತರವಾಗಿ ನನ್ನ ಗೆಳೆಯ ನಂಬರ್ ೧ ಬರೆದಿದ್ದ: “ ಹಾಗಿದ್ರೆ, ಕಳ್ಳನ ಕೈಯಲ್ಲಿ ಚೆನ್ನಾಗಿ ಒದೆ ತಿನ್ನು!” ಅಂತ.
ಎಲ್ಲಾದರೂ ಒಂದು ಕಡೆ : “ Warning: Smoking is not allowed” ಅಂತ ಬರೆದಿದ್ದರೆ,
ಇವರು ಅಲ್ಲೇ ಸ್ಮೋಕ್ ಮಾಡಿ “I am an engineer, i care about only “ errors” not “warnings”!” ಅಂತ ಹೇಳಿ ಒಂದು ನಗು ಬೀರುತ್ತಾರೆ.
ಇಂತಹ ಹೇಳಿಕೆಗೆ ಏನು ಉತ್ತರ ಕೊಡುತ್ತೀರಿ?
ಈ ಥರ ಮೀಟಿಂಗ್ ರೂಂ ನಲ್ಲಿ ಸಹ ಪೆದ್ದು - ಪೆದ್ದಾದ ಲಾಜಿಕ್ ನಿಂದ ತಮ್ಮ ಮ್ಯಾನೇಜರ್ ನ್ನೇ ಗಲಿಬಿಲಿಗೊಳಿಸಿ ಬಿಡುತ್ತಾರೆ,
ಆದರೆ ಮ್ಯಾನೇಜರ್ ಮಾತ್ರ ಯಥಾ ಪ್ರಕಾರ “its a very good question, but now lets focus on our actual issue “ ಅಂತ ತಮ್ಮ ಜಾಣ್ಮೆ ಮೆರೆದಿರುತ್ತಾರೆ.
ಇವರ ಲಾಜಿಕ್ ಪ್ರಕಾರ:
೧. ಒಂದೇ ಸಲಕ್ಕೆ ಒಂದು ಟೀ ತೆಗೆದುಕೊಳ್ಳುವ ಬದಲಿಗೆ, ಒಬ್ಬರೇ ಇದ್ದರೂ ಟೀ ನ ಬೈ- ಟು ತಗೊಂಡ್ರೆ ಜಾಸ್ತಿ ಬರುತ್ತದಲ್ಲ?
೨. ಮೂರು ತಾಸು ಸಿನಿಮಾ ವನ್ನ ಒಂದು ಗಂಟೆಗೆ ಇಳಿಸಿ, ಕೇವಲ ಕಥೆಗೆ ಮುಖ್ಯವಾದ ಸನ್ನಿವೇಶವನ್ನೇ ನೋಡಬಹುದಲ್ಲ?
೩. ಬೆಂಗಳೂರಿನಲ್ಲಿ ನಾನೊಂದು ಸೈಟು ತಗೊಂಡು (ಉದಾಹರಣೆಗೆ : ೩೦ x ೪೦) , ಅದಿಷ್ಟು ಜಾಗಕ್ಕೆ ನಾನೇ ಒಡೆಯ ಅಂದರೆ, ಅದೇ ಸ್ಥಾನದಲ್ಲಿ ಭೂಮಿಯ ಇನ್ನೊಂದು ಭಾಗದಲ್ಲಿ (ದುಂಡಗಿರುವ ಭೂಮಿಯನ್ನು ತಿರುಗಿಸಿದಾಗ) ಬರುವ ಜಾಗವೂ ನನ್ನದೇ ತಾನೇ? ಅಂದರೆ ಆ ಭಾಗ ಇನ್ನೊಂದು ದೇಶದಲ್ಲಿದ್ದರೆ ಅದು ಕೂಡ (೩೦ x ೪೦) ನಂದೇ ತಾನೇ?
ಇಂತಹ ಪ್ರಶ್ನೆಗೆ ಆ ಭಗವಂತ ನೆ ಉತ್ತರ ಕೊಡಬೇಕು.
ಈ ವಾರದ ಬಿಲ್ಡ್ ಲೇಬಲ್ : ಎಲ್ಲವನ್ನು ಲಾಜಿಕ್ಕಿನಿಂದಲೇ ಅಳೆಯುವ ಇವರು ನಮ್ಮ ತಿಂಗಳ ಸ್ಯಾಲರಿ ಮತ್ತು ತಿಂಗಳ ಖರ್ಚು ಯಾಕೆ ಯಾವಾಗಲು ಹೊಂದಾಣಿಕೆ ಯಾಗುತ್ತಿಲ್ಲ ಅನ್ನುವ ಎಷ್ಟೋ ಜನರ ಪ್ರಶ್ನೆಗೆ ಲಾಜಿಕ್ ಕಂಡು ಹಿಡಿದರೆ ಜಗತ್ತಿ ಗಾದರೂ ಸ್ವಲ್ಪ ಸಹಾಯ ಮಾಡಿದ ಹಾಗೆ ಇರುತ್ತದೆ.
Article chennagide... olle vishya togondidira.. :)
ReplyDelete