ಇಬ್ಬರು ಹೊಸತಾಗಿ ಕೆಲಸಕ್ಕೆ ಸೇರಿರುವ ಸಾಫ್ಟ್ ಲೋಕದ ಹುಡುಗರ ಮಾತನ್ನ ಒಂದು ಸಲ ಕೇಳಿ ನೋಡಿ :
ಹೇಗಿದೆ ಕೆಲಸ?
ಚೆನ್ನಾಗಿದೆ..
ಟೆಸ್ಟಿಂಗಾ? ಡೆವಲಪ್ಮೆಂಟ್?
ಟೆಸ್ಟಿಂಗ್.
ಒಹ್.. ಟೆಸ್ಟಿಂಗಾ?
ಹೌದು ಇಂತಹದೊಂದು ಸನ್ನಿವೇಶ ಕೆಲಸಕ್ಕೆ ಸೇರಿದ, ವಿಶೇಷವಾಗಿ ಟೆಸ್ಟಿಂಗ್ ಕೆಲಸಕ್ಕೆ ಸೇರಿದವರು ಅನುಭವಿಸಿರುತ್ತಾರೆ.
ಅದೇನೋ ಗೊತ್ತಿಲ್ಲ ಇವತ್ತಿಗೂ ಸಹ ಸಾಫ್ಟ್ ಲೋಕದಲ್ಲಿ ಒಂದಿಷ್ಟು ಜನ ಟೆಸ್ಟಿಂಗ್ ಅಂದ್ರೆ ಮೂಗು ಮುರಿಯುತ್ತಾರೆ. ಆದರೆ, ಈಗೀಗ ಸ್ವಲ್ಪ ಮೂಗು ಮುರಿಯುವವರ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ ಅನ್ನಬಹುದು. ಸಾಫ್ಟ್ ಲೋಕದ ದಲ್ಲಿ ಡೆವಲಪ್ಮೆಂಟ್ ಅಂದ್ರೇನೆ ಎಲ್ಲ ಅನ್ನೋ ಭಾವನೆ ಕೆಲವರಿಗೆ ಇದೆ. ಅದೇನೇ ಇರಲಿ, ನಾವು ಇಲ್ಲಿ ಟೆಸ್ಟಿಂಗ್ ಗಿಂತ ಡೆವಲಪ್ಮೆಂಟ್, ಅಥವಾ ಡೆವಲಪ್ಮೆಂಟ್ ಗಿಂತ ಕ್ವಾಲಿಟಿ ಅಂತ ಕಂಪೇರ್ ಮಾಡೋದಕ್ಕಿಂತ ಟೆಸ್ಟಿಂಗ್ ಸಹ ಹೇಗೆ ಉತ್ತಮಾವಾದದ್ದು ಅನ್ನೋದನ್ನ ಸ್ವಲ್ಪ ನೋಡೋಣ.
ಟೆಸ್ಟರ್ ಹುದ್ದೆಯಲ್ಲಿರುವವನಿಗೆ ನಿಜವಾದ ಚಾಲೆಂಜ್ ಅಂದರೆ ಅವನು ಪರಕಾಯ ಪ್ರವೇಶ ಮಾಡಬೇಕು.ಇದರ ಅರ್ಥ, ಒಂದು ವಸ್ತುವನ್ನು (Product) ಅವನು ತಾನು ತಾನಾಗಿ ನೋಡದೆ ಒಬ್ಬ ಗಿರಾಕಿ (customer / client)ಯಾಗಿ ನೋಡಬೇಕು ಮತ್ತು ಗಿರಾಕಿಯಾಗಿಯೇ ಆಲೋಚನೆ ಮಾಡಬೇಕು. ಈ ಪ್ರಾಡಕ್ಟ್ ನಲ್ಲಿ ಒಬ್ಬ ಕ್ಲೈಂಟ್ ಆಗಿ ನಾನು ಕೆಲಸ ಮಾಡಿದರೆ ನನಗೆ ಏನು ಹಿಡಿಸುವುದಿಲ್ಲ ಮತ್ತು ಈ ಪ್ರಾಡಕ್ಟ್ ನಲ್ಲಿ ಏನೇನಿದ್ದರೆ ಚೆಂದ ಅವನಿಗೆ ಗೊತ್ತಿರಬೇಕು. ಅವಾಗಲೇ ಅವನಿಗೆ ಪ್ರಾಜೆಕ್ಟ್ ಟೀಂ ನಲ್ಲಿ ಒಂದು ಐಡೆಂಟಿಟಿ ಬರುವುದು.
ಟೆಸ್ಟರ್ ಐಡೆಂಟಿಟಿ ಇರುವುದು ಅವನು ಎಷ್ಟು ಬಗ್ ಗಳನ್ನೂ ಕಂಡು ಹಿಡಿಯುತ್ತಾನೆ ಅನ್ನೋದಕ್ಕಿಂತ, ಕಸ್ಟಮರ್ ಗೆ ಅದರಿಂದ ಆಗುವ “value addition “ ಏನು ಮತ್ತು ಎಷ್ಟು ಅನ್ನೋದು ಮುಖ್ಯ ಆಗುತ್ತದೆ.
ಟೆಸ್ಟರ್ ಐಡೆಂಟಿಟಿ ಇರುವುದು ಅವನು ಎಷ್ಟು ಬಗ್ ಗಳನ್ನೂ ಕಂಡು ಹಿಡಿಯುತ್ತಾನೆ ಅನ್ನೋದಕ್ಕಿಂತ, ಕಸ್ಟಮರ್ ಗೆ ಅದರಿಂದ ಆಗುವ “value addition “ ಏನು ಮತ್ತು ಎಷ್ಟು ಅನ್ನೋದು ಮುಖ್ಯ ಆಗುತ್ತದೆ.
ಡೆವೆಲಪರ್ ಪಾಸಿಟಿವ್ ಆಗಿ ಆಲೋಚನೆ ಮಾಡುವುದು ಅವನ ಪಾಸಿಟಿವ್ ಅಂಶ ಆದರೆ, ಕೈಯಲ್ಲಿರುವ “Product “ ಬಗ್ಗೆ ನೆಗೆಟಿವ್ ಆಗಿ ಆಲೋಚನೆ ಮಾಡುವುದು ಟೆಸ್ಟರ್ ನ ಪಾಸಿಟಿವ್ ಅಂಶ ಆಗಿರುತ್ತೆ. ಅದಕ್ಕೆ ಸಾಫ್ಟ್ ಲೋಕದ ಯಾವುದೇ ಕಂಪನಿ ತೆಗೆದುಕೊಳ್ಳಿ ಟೆಸ್ಟರ್ ಗಳು ಸ್ವಲ್ಪ ಕ್ರಿಯೇಟಿವ್ ಆಗಿರುತ್ತಾರೆ. ವಕ್ರ ವಕ್ರ ವಾಗಿ ಆಲೋಚನೆ ಮಾಡೋದನ್ನ ಕರತಲಾಮಲಕ ಮಾಡಿಕೊಂಡಿರುತ್ತಾರೆ. ಮಾಡಿಕೊಳ್ಳಲೇ ಬೇಕು ಸಹ!, ಇದು ಹೀಗಾದ್ರೆ ಚೆನ್ನಾಗಿರುತ್ತೆ ಅಂತ “Requirement“ ಹೇಳಿದ ಹಾಗೆ ಡೆವೆಲಪರ್ “ Product“ ನ ಡೆವೆಲೊಪ್ ಮಾಡಿದರೆ, ಇದು ಹೀಗೂ ಆಗಬಹುದಲ್ಲ ಅಥವಾ ಇದು ಹೀಗಾಗದಿದ್ರೆ “ Product“ ನ ಕಥೆ ಏನಾಗುತ್ತೆ ಅನ್ನೋದನ್ನ ಹುಡುಕುವುದೇ ಟೆಸ್ಟರ್ ನ ಕೆಲಸ. ಹಾಗಂತ ಇದು ಅಷ್ಟು ಸುಲಭದ ಕೆಲಸವಲ್ಲ.
ನಾವು ಕೆಲಸ ಮಾಡುವಾಗ ನಮ್ಮ ಕಣ್ಣಿಗೆ ಕಾಣುವ ಬಗ್ ಗಳು, ಡೆವೆಲಪರ್ ಅಥವಾ ಮ್ಯಾನೇಜರ್ ಮುಂದೆ ತೋರಿಸುವಾಗ ಎಲ್ಲೋ ಅಡಗಿ ಕುಳಿತು ಬಿಟ್ಟಿರುತ್ತವೆ. ಆಗ ಪೆಚ್ಚು ಮೊರೆ ಹಾಕಿಕೊಳ್ಳುವ ಸರದಿ ಟೆಸ್ಟರ್ ನದು. ಅಷ್ಟೇ ಅಲ್ಲ, ಒಂದು component ಸರಿಯಾಗಿ ಕೆಲಸ ಮಾಡ್ತಾ ಇಲ್ಲ ಅಂದ್ರೆ ಅದು ಸರಿಯಾಗಿಲ್ಲ ಅಂತ ಆ component ನ ಕೋಡ್ ಬರೆದವನ ಹತ್ತಿರ ಹೇಳೋಕೆ ಒಂದು ರೀತಿಯ ನಯ ನಾಜೂಕು ಟೆಸ್ಟರ್ ನ ಹತ್ತಿರ ಇರಬೇಕಾಗುತ್ತದೆ. ಇಲ್ಲದಿದ್ರೆ ನೇರವಾಗಿ, “ ನೀನು ಬರೆದಿರೋ Code ಸರಿಯಾಗಿ ಕೆಲಸ ಮಾಡ್ತಾ ಇಲ್ಲ” ಅಂತ ಡೆವೆಲಪರ್ ನ ಮುಂದೆ ಹೇಳಿದರೆ ಅವರಿಗೆ ಹೆಗನ್ನಿಸಬೇಡ?
ಸಾಫ್ಟ್ ಲೋಕದಲ್ಲಿ ಟೆಸ್ಟರ್ ದೇ ಒಂದು, ಡೆವಲಪ್ಮೆಂಟ್ ದೇ ಇನ್ನೊಂದು ಗುಂಪು ಅನ್ನೋ ಥರ ಏನು ಇರುವುದಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡ್ತಾ ಇರ್ತಾರೆ. ಎಷ್ಟೊಂದು ಸಲ ಇಂತಿಷ್ಟು ವರ್ಷ ಡೆವಲಪ್ಮೆಂಟ್ ನಲ್ಲಿ ಕೆಲಸ ಮಾಡಿದವರು ಟೆಸ್ಟಿಂಗ್ ಗೆ ಬಂದು ಸೇರೋದುಂಟು. ಅದೇ ತರಹ ಟೆಸ್ಟಿಂಗ್ ನಲ್ಲಿ ಒಂದಿಷ್ಟು ವರ್ಷ ಪಳಗಿದ ನಂತರ ಡೆವಲಪ್ಮೆಂಟ್ ಹೋಗಿ ಕೆಲಸ ಮಾಡೋದು ಉಂಟು. ಇನ್ನು ಆಶ್ಚರ್ಯ ಅಂದರೆ ಕೆಲವೊಂದು ಕಂಪನಿ ಗಳಲ್ಲಿ ಎಲ್ಲವನ್ನು (ಡೆವಲಪ್ಮೆಂಟ್ ಮತ್ತು ಟೆಸ್ಟಿಂಗ್ ) ಒಬ್ಬರೇ ಮಾಡೋದುಂಟು!
ಸಾಫ್ಟ್ ಲೋಕದಲ್ಲಿ ಟೆಸ್ಟರ್ ಕುರಿತಾಗಿ ಒಂದು ಮಾತಿದೆ : “ಟೆಸ್ಟರ್ “ Product“ ನಲ್ಲಿ ಹೊಸ ತಪ್ಪುಗಳನ್ನ ಹುಟ್ಟು ಹಾಕುವುದಿಲ್ಲ, ಬದಲಿಗೆ ಇರುವ ತಪ್ಪುಗಳನ್ನೇ ತೋರಿಸುತ್ತಾನೆ”. ಪ್ರಾಡಕ್ಟ್ ನಲ್ಲಿರುವ ತುಂಬಾ “Critical bugs“ ನ ಕಂಡು ಹಿಡುಯುವುದೆಂದರೆ, ಇದೊಂಥರ ಪೊಲೀಸರು ಪ್ರೊಫೆಷನಲ್ ಕಳ್ಳನನ್ನು ಹಿಡಿದ ಹಾಗೆ.
ವಾರದ ಬಿಲ್ಡ್ ಲೇಬಲ್ : ಟೆಸ್ಟಿಂಗ್ ನಲ್ಲಿ ಕೆಲಸ ಮಾಡಿ ಸಾಕಾದರೆ ಅಂತವರು ಪೋಲಿಸ್ ಡಿಪಾರ್ಟ್ಮೆಂಟ್ ಗೆ ಹೋಗಿ ಸೇರ್ಕೊಬಹುದು. ಯಾಕಂದ್ರೆ, ಟೆಸ್ಟರ್ ಆಲೋಚನೆ ಮಾಡೋದು ವಕ್ರ ವಕ್ರ ವಾಗಿ, ಇದರಿಂದ ಪೋಲಿಸ್ ಡಿಪಾರ್ಟ್ಮೆಂಟ್ ಗು ಸಹಾಯವಾಗಬಹುದುJ
No comments:
Post a Comment