ನೀವು ಈ ಅಂಕಣವನ್ನು ಬಹಳ ಕಣ್ಣರಳಿಸಿ ಕೊಂಡು ಓದುತ್ತಿರಿ ಅಂತ ನನಗೆ ಗೊತ್ತು. ಸಾಫ್ಟ್ ಡೈರಿ ಅಂಕಣ ದಲ್ಲಿ ಪ್ರತಿ ವಾರ ಒಂದೊಂದು ವಿಷಯದ ಬಗ್ಗೆ ಸ್ವಲ್ಪ ತಮಾಷೆಯಾಗಿ ಬರೆಯಲು ಶುರು ಮಾಡಿದಾಗ, ಬಹಳಷ್ಟು ಜನ ಪ್ರತಿ ವಾರ ಕೇಳಿದ ಮತ್ತು ಕೇಳುತ್ತಿರುವ ಪ್ರಶ್ನೆ ಅಂದ್ರೆ : “ ಆರ್.ಪಿ, ಮ್ಯಾನೇಜರ್ ಬಗ್ಗೆ ಆರ್ಟಿಕಲ್ ಯಾವಾಗ ಬರುತ್ತೆ ಅಂತ!”.
ಅವರು ಕೇಳೋ ಧಾಟಿಯಲ್ಲಿ ಗೊತ್ತಾಗುತ್ತಿತ್ತು ಅವರು ಆರ್ಟಿಕಲ್ ನಲ್ಲಿ ಏನು expect ಮಾಡುತ್ತಿದ್ದಾರೆ ಅಂತ. ಅದೇನೇ ಇರಲಿ, ಸಾಫ್ಟ್ ಲೋಕದಲ್ಲಿ ಅಷ್ಟೇ ಅಲ್ಲ ಬೇರೆ ಲೋಕದಲ್ಲೂ ಸಹ ಮ್ಯಾನೇಜರ್ ಅಥವಾ ಬಾಸ್ ಅನ್ನೋ ಹುದ್ದೆಗೆ ಒಂದು ವಿಶೇಷತೆ ಇದ್ದೆ ಇರುತ್ತದೆ. ಆದ್ದರಿಂದಲೇ ಆ ಸೀಟಿನಮೇಲೆ ಎಲ್ಲರ ಕಣ್ಣು!
ಮ್ಯಾನೇಜರ್ ಅಥವಾ ಬಾಸ್ ಗಳ ಬಗ್ಗೆ ಒಂದಿಷ್ಟು ತಮಾಷೆಯ ಮತ್ತು ಸಾಫ್ಟ್ ಲೋಕದಲ್ಲಿ ಚಾಲ್ತಿಯಲ್ಲಿರುವ ಮಾತುಗಳನ್ನ ನೋಡೋಣ ಬನ್ನಿ :
೦೧. ನೀವು ಆಫಿಸ್ ಗೆ ಬೇಗ ಬಂದಾಗ ಗಮನಿಸದವರನ್ನು ಮತ್ತು ನೀವು ಲೇಟ್ ಆಗಿ ಬಂದಾಗ ನಿಮಗಿಂತ ಮುಚೆ ಬಂದವರನ್ನು “ಮ್ಯಾನೇಜರ್” ಅಂತ ಕರೆಯುತ್ತಾರೆ.
೦೨. ಹೆಂಡತಿ ಮತ್ತು ಮ್ಯಾನೇಜರ್ ಗಳನ್ನೂ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ.
೦೩. ನೀವೆಷ್ಟೇ ಸಿಟ್ಟಾಗಿ ಅವರ ಮುಂದೆ ಹೋದರು ಅಷ್ಟೇ ಕೂಲಾಗಿ ಕೊನೆಗೆ ತಮಗೇನು ಬೇಕು ಅದರಂತೆ ನೀವು ಕೇಳುವಂತೆ ಮಾಡುವವರನ್ನು ಮ್ಯಾನೇಜರ್ ಎನ್ನುತ್ತಾರೆ.
೦೩. ಮ್ಯಾನೇಜರ್ ಗಳಿಗೆ ಇರಿಟೇಟ್ ಆಗುವುದು ಯಾವಾಗ ಗೊತ್ತಾ ? ಒಂದು ಅವರ ಕೆಲಸ ಮಾಡುತ್ತಿರುವ excel sheet crash ಆದಾಗ, ಇನ್ನೊಂದು ಟೀಂ ಮೀಟಿಂಗ್ ನಲ್ಲಿ ಕ್ಲೈಂಟ್ ಎದುರಿಗೆ ಪ್ರಾಜೆಕ್ಟ್ ಸ್ಟೇಟಸ್ ಬಗ್ಗೆ ಯಾರಾದರೂ ಟೀಂ ಮೆಂಬರ್ ಸತ್ಯವನ್ನು ನುಡಿದಾಗ !
ಸಾಫ್ಟ್ ಲೋಕದಲ್ಲಿ ಮ್ಯಾನೇಜರ್ ಗಳು ಏನಾದರೂ ಹೇಳಿದಾಗ ಅದನ್ನ ನಾವು ಹೇಗೆ ಅರ್ಥೈಸಿಕೊಳ್ಳಬೇಕು ಅನ್ನೋದರ ಬಗ್ಗೆ ಒಂದಿಷ್ಟು ಮಾತುಗಳು ಇವೆ ನೋಡೋಣ ಬನ್ನಿ :
೦೧. “It’s a great work done by all of you “ ಅಂದ್ರೆ : “ ಇಲ್ಲಿಗೆ ಕೆಲಸ ಮುಗಿದಿಲ್ಲ, ಇದಕ್ಕಿಂತ ಎರಡರಷ್ಟು ಕೆಲಸ ಮುಂದೆ ಇದೆ ಅಂತ ಅರ್ಥ’
೦೨. “It’s in pretty good shape (client ಗೆ update ಮಾಡ್ತಾ ಇರಬೇಕಾದರೆ )” ಅಂದ್ರೆ : “ ಕೆಲಸ ಇನ್ನು ಶುರುನೆ ಮಾಡಿಲ್ಲ ಅಂತ ಅರ್ಥ.
೦೩. “Take your time but I appreciate if you can complete it ASAP” ಅಂದ್ರೆ : ಮುಚ್ಕೊಂಡು ಇವತ್ತೇ ಕೆಲಸ ಮುಗಿಸಿ ಕೊಡು ಅಂತ ಅರ್ಥ.
೦೪. “There are so many opportunities are waiting for you” ಅಂದ್ರೆ : ಸದ್ಯಕ್ಕೆ ಖಾಲಿ ಹೊಡಿತಾ ಇದೆ ಅಂತ ಅರ್ಥ
೦೫. “We would like to work with you in future” ಅಂದ್ರೆ : ಇವಾಗ ಹೆಚ್ಚಿಗೆ ಮಾತಾಡದೆ ಹೋಯ್ತಾ ಇರು ಅಂತ ಅರ್ಥ.
೦೬. “It’s a good question (ಯಾರಾದರೂ ಮೀಟಿಂಗ್ ನಲ್ಲಿ question ಕೇಳಿದಾಗ)” ಅಂದ್ರೆ : ಸದ್ಯಕ್ಕೆ ಉತ್ತರ ನನಗೂ ಗೊತ್ತಿಲ್ಲ ಅಂತ ಅರ್ಥ.
೦೭. "What you said is correct. Let us work out in that way" ಅಂದ್ರೆ : “ ಮುಂದೆ ಏನಾರು ಹೆಚ್ಚು ಕಡಿಮೆ ಆದರೆ ನೀನೆ ಜವಾಬ್ದಾರಿ ಹೊತ್ಕೊಬೇಕು ಅಂತ ಅರ್ಥ.
೦೮. "you are on leave one week right? am i right?" ಅಂದ್ರೆ : ಲೀವ್ ಸ್ವಲ್ಪ ಕಡಿಮೆ ಮಾಡ್ಕೋ ಅಂತ ಅರ್ಥ
೦೯. "It’s a team work, we will do it together" ಅಂದ್ರೆ : ಅವರನ್ನ ಹೊರತು ಪಡಿಸಿ ಅಂತ ಅರ್ಥ
೧೦. "hope you understood the situation and project deadline" ಅಂದ್ರೆ : ಜಾಸ್ತಿ ಏನು ಕ್ವೆಶ್ಚನ್ ಕೇಳದೆ ಕೆಲಸ ಶುರು ಮಾಡು ಅಂತ ಅರ್ಥ.
ತಮಾಷೆ ಸಾಕು, ಸ್ವಲ್ಪ ಮ್ಯಾನೇಜರ್ ಗಳಿಗೆ ಇರುವ ಕಷ್ಟನೂ ನೋಡೋಣ....
ತಮಾಷೆ ಸಾಕು, ಸ್ವಲ್ಪ ಮ್ಯಾನೇಜರ್ ಗಳಿಗೆ ಇರುವ ಕಷ್ಟನೂ ನೋಡೋಣ....
ಸಾಫ್ಟ್ ಲೋಕದಲ್ಲಿ ಮ್ಯಾನೇಜರ್ ಅಂದ್ರೆ ಎಕ್ಸೆಲ್ ಶೀಟ್ ಕೆಲಸ ಅಂತ ಬಹಳ ಮಂದಿಯ ವಾದ. ಆದರೆ ಅವರ ಪೋಸಿಶನ್ ನಲ್ಲಿ ಒಂದು ಸಲ ನಾವು ಕೂತು ನೋಡಿದಾಗ ನಮಗೆ ಅವರ ತ್ರಾಸ ಅರ್ಥ ಆಗುತ್ತದೆ. ಅವರದು ಬರೀ ಎಕ್ಸೆಲ್ ಶೀಟ್ ಕೆಲಸ ಅಲ್ಲ, ಒಂದೀಡಿ ಪ್ರಾಜೆಕ್ಟ್ ನ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲೆ ಇರುತ್ತದೆ. ತಮ್ಮ ಪಾಡಿಗೆ ತಾವು ಕೆಲಸ ಮಾಡಿ ದಿನದ ಕೊನೆಗೆ ರಿಪೋರ್ಟ್ ಒಪ್ಪಿಸಿ ಹೋಗುವ ಕೆಲಸಕ್ಕಿಂತಲೂ ಜಾಸ್ತಿ.
ಎಲ್ಲರ ಕೆಲಸದ ಬಗ್ಗೆಯೂ update ತಗೋಬೇಕು, ಪ್ರಾಜೆಕ್ಟ್ ನ ಪ್ರತಿ ಹಂತವೂ ಯಾವ ರೀತಿ ಸಾಗ್ತಾ ಇದೆ ಅಂತ ಒಂದು ಟ್ರ್ಯಾಕ್ ಇಟ್ಟುಕೊಂಡಿರಬೇಕು , ಮತ್ತು ಅದು ಲೈನ್ ತಪ್ಪಿ ಹೋಗುತ್ತಿದ್ದರೆ ಅದನ್ನ ತಿರುಗಾ ಮತ್ತೆ ಲೈನ್ ಗೆ ತಂದು ನಿಲ್ಲಿಸಬೇಕು. ಪ್ರತಿಯೊಬ್ಬ ಟೀಂ ಮೆಂಬರ್ ನ ನಾಡಿ ಮಿಡಿತ ತಿಳಿದುಕೊಂಡಿರಬೇಕು, ಅವರ ಮುನಿಸುಗಳನ್ನು ತಣ್ಣಗೆ ಮಾಡಬೇಕು. ಅವರ ಸಿಟ್ಟನ್ನು ಶಮನ ಗೊಳಿಸಬೇಕು. ಕ್ಲೈಂಟ್ ಗಳಿಗೆ ಪ್ರಾಜೆಕ್ಟ್ ಬಗ್ಗೆ ಪ್ರತಿ ಹಂತ ದಲ್ಲೂ ಮಾಹಿತಿ ಕೊಡಬೇಕು, ಪ್ರಾಜೆಕ್ಟ್ ನ ಪ್ರತಿಯೊಂದು ಹಂತವನ್ನು ಕರೆಕ್ಟ್ ಆಗಿ ಪ್ಲಾನ್ ಮಾಡಬೇಕು, ಈ ಹಂತದಲ್ಲಿ ಪ್ರತಿಯೊಬ್ಬ ಟೀಂ ಮೆಂಬರ್ ಗಳನ್ನೂ ಮಾತಾಡಿಸಿ ಅವರ ಅಭಿಪ್ರಾಯ ಗಳನ್ನೂ ತಿಳಿದುಕೊಳ್ಳಬೇಕು . ಇದೆಲ್ಲದರ ಜೊತೆಗೆ ಅವರೂ ಸಹ ಇನ್ನೊಬ್ಬರಿಗೆ ರಿಪೋರ್ಟ್ ಮಾಡುತ್ತಿರುವುದರಿಂದ ಅವರ ಮ್ಯಾನೇಜರ್ ಗೆ ತಕ್ಕಂತೆ ನಡೆದುಕೊಳ್ಳಬೇಕು.
ಎಷ್ಟೊಂದು ಮ್ಯಾನೇಜರ್ ಗಳೇ ಹೇಳುವ ಪ್ರಕಾರ “ people management“ ತುಂಬಾ “complicated“.
ಏನಾದರೂ ಮಾಡಬಹುದು ರಿ, ಆದರೆ ಈ ಜನರನ್ನ ಹಿಡಿದಿಟ್ಟುಕೊಳ್ಳುವುದು ಇದೆಯಲ್ಲ ಅದೊಂಥರ ಕಪ್ಪೆ ತೂಕ ಮಾಡಿದ ಹಾಗೆ .
ಇದು ಸಾಫ್ಟ್ ಮ್ಯಾನೇಜರ್ ಕಥೆ.
ಇದು ಸಾಫ್ಟ್ ಮ್ಯಾನೇಜರ್ ಕಥೆ.
ಈ ವಾರದ ಬಿಲ್ಡ್ ಲೇಬಲ್ :
ನಿಮ್ಮ ಪ್ರೊಮೋಷನ್ ಬಗ್ಗೆ / ಆನ್ – ಸೈಟ್ ನೀವು ಏನಾದರೂ ಮ್ಯಾನೇಜರ್ ನ ಕೇಳಿದಾಗ ಅದಕ್ಕೆ ಅವರು ಉತ್ತರವಾಗಿ,
“I will get back to you" ಅಂತ ಹೇಳಿದಾರೆ ಅಂದ್ರೆ ಸತ್ರು ಅದರ ಬಗ್ಗೆ ಮತ್ತೆ ಮಾತಾಡೋದಿಲ್ಲ ಅಂತ ಅರ್ಥ .