Thursday, June 30, 2011

ನೂರೆಟು

 ನೂರೆಟು  "ನೂರ್ಕಡೆ" ಬರದೇನು ನಿನ್ಕಡೆ
ನೂರೆಟು "ಒಂದೇಕಡೆ" ಬರ್ತೈತೆಲ್ಲಾ ನಿನ್ನೆಡೆ

Tuesday, June 28, 2011

ಅನಿರೀಕ್ಷಿತ ಖುಷಿ

ಅನಿರೀಕ್ಷಿತ ವಾಗಿ ನಮ್ಮ ಬಗ್ಗೆ ಯಾರಾದರು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದಾಗ ಆಗುವ ಖುಷಿ ಅಷ್ಟಿಷ್ಟಲ್ಲ!
ಒಂದು ವೇಳೆ ಅಂತಹ ಖುಷಿ ನಮ್ಮಿಂದ ಬೇರೆಯವರಿಗೆ ಸಿಕ್ಕರೆ ಅದಕ್ಕಿಂತ ತೃಪ್ತಿ ಇನ್ನೊಂದಿಲ್ಲ.

Tuesday, June 14, 2011

ಹತ್ತರಲ್ಲಿ ಹನ್ನೊಂದು

ನಾವು ಕಷ್ಟದಲ್ಲಿ ಇದ್ದೇವೆ ಅಂತ ಗೊತ್ತಿದ್ದೂ ಸಹ , ಅದೇ ಸಮಯದಲ್ಲೇ ನಮಗೆ " ಅತೀ ಹತ್ತಿರವಿದ್ದವರು" ನಮ್ಮ ಮೇಲೆ ಯುದ್ಧ ಸಾರಿಬಿಟ್ಟಿರುತ್ತಾರೆ. ಚಿಂತೆಯಿಲ್ಲ,  ಹತ್ತರಲ್ಲಿ ಹನ್ನೊಂದು ಅಂತ ಅದನ್ನೂ ನಗು ನಗುತ್ತಲೇ  ಸ್ವೀಕರಿಸಿದರಾಯ್ತು.

Wednesday, June 8, 2011

ಐವತ್ತು

ಐವತ್ತಕ್ಕೆ ಬಂದು ಮುಟ್ಟಿ ದ್ದೇವೆ  ಅಂದರೆ ಅರ್ಧ ಹಾದಿಗೆ ಕ್ರಮಿಸಿದ್ದೇವೆ ಅಂತ ಅಲ್ಲ!
ಇಷ್ಟಕ್ಕೂ ಜೀವನವನ್ನ ನೂರಕ್ಕೆ ಸೀಮಿತಗೊಳಿಸಿದವರು "ನಾವೇ" ಹೊರತು ಬೇರಾರು ಅಲ್ಲ!


ಆನೆ ಬಲ

ಮನಸು ಮುಗುಚಿ ಬಿದ್ದಾಗ ಒಂದೆರಡು ಸಾಂತ್ವನದ ಮಾತು " ಆನೆ ಬಲ" ಬಂದಷ್ಟು ನೆಮ್ಮದಿ ಕೊಡುವುದರಲ್ಲಿ ಸಂದೇಹವೇ ಇಲ್ಲ.

ನಮಗೆ ಏನನ್ನಬೇಕು?

ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ "ಹುಚ್ಚು ಮನಸ್ಸು" ಹೇಳಿದ ಹಾಗೆ ಕುಣಿದು ಮತ್ತೆ ಮತ್ತೆ ಹಳ್ಳಕ್ಕೆ ಬೀಳುತ್ತೆವಲ್ಲ, ನಮಗೆ ಏನನ್ನಬೇಕು?

ಹೇಳಿಕೊಳ್ಳುವುದು - ತಿಳಿದುಕೊಳ್ಳುವುದು

ನಮ್ಮ ಬಗ್ಗೆ ನಾವೇ ಖುದ್ದಾಗಿ  ಹೇಳಿಕೊಳ್ಳುವುದಕ್ಕೂ,
ಬೇರೆಯವರೇ ಕುತೂಹಲ ದಿಂದ ನಮ್ಮ ಬಗ್ಗೆ ತಿಳಿದು ಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸವಿದೆ.


ಇಷ್ಟವಿರಲಿ ಬಿಡಲಿ

ನಿಮಗೆ ಇಷ್ಟವಿರಲಿ ಬಿಡಲಿ ನಿಮ್ಮನ್ನ ಆಡಿಕೊಳ್ಳಲು ಒಂದಿಬ್ಬರಾದರೂ ತಮ್ಮ ಸಮಯವನ್ನ ಅದಕ್ಕಾಗಿಯೇ ತೆಗೆದು ಇಟ್ಟಿರುತ್ತಾರೆ. 

ಮಾನವ ಜನ್ಮ ದೊಡ್ಡದೋ

ಕಾಡಿನಲ್ಲಿ ಒಂದು ಹುಲಿಯನ್ನ ಮತ್ತೊಂದು ಹುಲಿಯಿಂದ ರಕ್ಷಿಸಲು,  ಒಂದು ಜಿಂಕೆಯನ್ನ ಮತ್ತೊಂದು ಜಿಂಕೆಯಿಂದ ರಕ್ಷಿಸಲು,
ಒಂದು ಆನೆಯನ್ನ ಮತ್ತೊಂದು ಆನೆಯಿಂದ ರಕ್ಷಿಸಲು, ಯಾವುದೇ ಕಾಯಿದೆ ಕಾನೂನು ಇಲ್ಲ.
ಆದರೆ ಅದೇ ನಾಡಿನಲ್ಲಿ ಒಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನನ್ನ ರಕ್ಷಿಸಲು ಸಾವಿರಾರು ಪುಟಗಳ ಕಾಯಿದೆ ಗಳೂ, ಕಾನೂನುಗಳೂ ಇವೆ.  ಮಾನವ ಜನ್ಮ ದೊಡ್ಡದೋ .....

ಕೆಲಸ - ಕುತೂಹಲ

ಯಾವುದೇ ಕೆಲಸವಿರಲಿ ಪೂರ್ಣ ವಾಗುವ ಮುಂಚೆಯೇ ಅದರ ಬಗ್ಗೆ ಎಲ್ಲರ ಹತ್ತಿರ ಡಂಗುರ ಸಾರಿದರೆ ಕೊನೆಯಲ್ಲಿ ಕುತೂಹಲ ಉಳಿಯುವುದೇ ಇಲ್ಲಾ.

ಆಸಕ್ತಿ ಜಾಸ್ತಿ

ಆಗಬೇಕಾಗಿರುವ ವಿಷಯಕ್ಕಿಂತ ಆದ ವಿಷಯದ ಬಗ್ಗೆ ನೆ ಬಹಳಷ್ಟು ಜನಕ್ಕೆ ಆಸಕ್ತಿ ಜಾಸ್ತಿ.

ಸಾಗುವ ದಾರಿ - ಸುಸ್ತು

ಸಾಗುವ ದಾರಿ ಬಹಳ ಇರುವುದರಿಂದ ಅಷ್ಟು ಬೇಗ ಸುಸ್ತಾಗುವುದು ಬೇಡ.
ಒಂದು ವೇಳೆ ಸುಸ್ತಾದರೂ, ಹಾಗೆ ಆದವರಂತೆ ಕಾಣಿಸಿ ಕೊಳ್ಳುವುದು ಬೇಡ.


Wednesday, June 1, 2011

ಪುಟ್ಟ ಮಗು

ಪುಟ್ಟ ಮಗುವಿನ ಮುಖದಲ್ಲಿ ಅಂತಹುದೇನು ಇರುತ್ತದೆ ಅಂತ ಗೊತ್ತಿಲ್ಲ, ಆದರೆ ಅವರ ಮುಖ ನೋಡಿದ ತಕ್ಷಣ
ಆಯಾಸವೆಲ್ಲ ನೀರಾಯಾಸ ವಾಗಿ ಕರಗಿ, ಮತ್ತಷ್ಟು ಚೈತನ್ಯ ನಮ್ಮಲ್ಲಿ ನಮಗೆ ಗೊತ್ತಿಲ್ಲದಂತೆಯೇ ಬಂದು ಬಿಡುತ್ತದೆ.