ಎಲ್ಲರು ಸ್ನೇಹಿತರಾದರೆ ಸೋಮಾರಿಗಳಾಗಿಬಿಡುತ್ತೀವಿ, ಒಂದಿಬ್ಬರಾದರೂ ವಿರೋಧಿಗಳು ಇದ್ದರೆ ಒಂಚೂರು ಎಚ್ಚರದಿಂದಾರು ಇರ್ತೀವಿ.
Monday, May 30, 2011
ನಾಷನಲ್ - ಹೈವೆ : ಕಚ್ಚಾ- ರಸ್ತೆ
ಮನಸ್ಸು ತುಂಬ ಗಲಿಬಿಲಿಗೊಂಡಾಗ ಸಾಗುವ ದಾರಿ "ನಾಷನಲ್ - ಹೈವೆ" ಥರ ಇದ್ದರೂ ಪ್ರಯಾಣ ಕಷ್ಟವೆನಿಸುತ್ತದೆ,
ಮನಸ್ಸು ತಿಳಿಯಾಗಿದ್ದಾಗ ಸಾಗುವ ದಾರಿ " ಕಚ್ಚಾ- ರಸ್ತೆ" ಆಗಿದ್ದರೂ ಪ್ರಯಾಣ ಸುಲಭವೆನಿಸುತ್ತದೆ.
Monday, May 23, 2011
ಸಮಚಿತ್ತ
ಎಲ್ಲ ಸಮಯ - ಸಂಧರ್ಭ ಗಳಲ್ಲಿಯೂ ಸಂತೃಪ್ತಿ ಯಾಗಿ 'ಸಮಚಿತ್ತ' ದಿಂದ ಇರುವವನಿಗೆ, ಸ್ವರ್ಗಕ್ಕೆ ಕಿಚ್ಚು ಹಚ್ಚುವ 'ಅರ್ಹತೆ ಮತ್ತು ಸ್ವತಂತ್ರ' ಎರಡೂ ಇರುತ್ತದೆ.
Thursday, May 19, 2011
ಆಲೋಚನೆ - ಕೆಲಸ
ತಲೆಯ ತುಂಬಾ ಆಲೋಚನೆಗಳೇ ಓಡಾಡುತ್ತಿರುವಾಗ, ಯಾವ ಕೆಲಸವೂ ಮುಂದಕ್ಕೆ ಸಾಗುವುದಿಲ್ಲ.
ಆಲೋಚನೆಗಳನ್ನೆಲ್ಲ ಒಂದು ಕಡೆ ಗಂಟು ಕಟ್ಟಿಟ್ಟು, ಕೆಲಸಗಳ ಜೊತೆ ಮುನ್ನಡೆಯುವುದು ಚೊಲೊ(ಲೇಸು).
ಒಂದು ಹೆಜ್ಜೆ
ಎಷ್ಟೇ ದೊಡ್ಡವರಿರಲಿ, ಚಿಕ್ಕವರಿರಲಿ, ನಡೆಯುವಾಗ ಒಂದು ಸಲಕ್ಕೆ "ಒಂದು ಹೆಜ್ಜೆ" ಯನ್ನು ಮಾತ್ರ ಇಡಲಿಕ್ಕೆ ಸಾಧ್ಯ.
Tuesday, May 17, 2011
ಹೀಗಾಯ್ತು - ಹಾಗಾಯ್ತು
"ಹೀಗಾಯ್ತು" ಅಂತ ಹೇಳಿದರೆ, "ಹಾಗಾಗಿದ್ದರೆ ಇನ್ನು ಚೆನ್ನಾಗಿರ್ತಿತ್ತು" ಮತ್ತು
"ಹಾಗಾಯ್ತು" ಅಂತ ಹೇಳಿದರೆ, "ಹೀಗಾಗಿದ್ದರೆ ಸರಿಯಾಗಿರ್ತಿತ್ತು" ಅಂತ ಅನ್ನೋರ ಮುಂದೆ
"ಹೀಗಾಯ್ತು, ಹಾಗಾಯ್ತು" ಅಂತ ಹೇಳೋದೇ ನಮ್ಮ ಮೂರ್ಖತನ.
Wednesday, May 11, 2011
ಇಂಪ್ರೆಸ್ - ಸರ್ಕಸ್
ಯಾರ್ಯಾರನ್ನೋ ಇಂಪ್ರೆಸ್ ( ಮನವೊಲಿಸುವ ಕೆಲಸ ) ಮಾಡಲಿಕ್ಕೆ ಸರ್ಕಸ್ ಮಾಡುವ ಬದಲು ನಮ್ಮ ಮನಸ್ಸನ್ನು ತೃಪ್ತಿಗೊಳಿಸುವ ಕೆಲಸ ದಲ್ಲಿ ತೊಡಗಿಕೊಳ್ಳುವುದು ಉತ್ತಮ.
Monday, May 9, 2011
ಹೋಲಿಕೆ
ನಮ್ಮನ್ನ ಇನ್ನೊಬ್ಬರಿಗೆ "ಹೋಲಿಕೆ" ಮಾಡಿಕೊಳ್ಳುವುದು ಅಂದರೆ, "ನೀರನ್ನು ಕೆ.ಜಿ. ಮಾಪನದಲ್ಲಿ ಹಾಗೂ ಅಕ್ಕಿಯನ್ನು ಲೀಟರ್ ಮಾಪನದಲ್ಲಿ ಅಳತೆ ಮಾಡಿದ ಹಾಗೆ". ಪ್ರತಿಯೊಂದಕ್ಕೂ ಅದರದೇ ಆದ ಮಾನದಂಡ ಇರುತ್ತದೆ.
ಅವಶ್ಯಕತೆ
ಕೆಲವೊಂದು ಕೆಲಸಗಳು ನಮ್ಮಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ನಾವಿಲ್ಲಿ ಇರುವುದು. ಇಲ್ಲದಿದ್ದರೆ ಈ "ಭೂಮಿಗೆ" ನಮ್ಮ "ಅವಶ್ಯಕತೆ"ಯಾದರೂ ಏನಿತ್ತು?
ನಾವು ಮತ್ತು ನಮ್ಮ ಕಷ್ಟಗಳು
ನಾವು ಕಷ್ಟದಲ್ಲಿ ಇದ್ದಾಗ ಆದಷ್ಟು ನಮ್ಮ ಕಷ್ಟ ಗಳ ಬಗ್ಗೆ ಬೇರೆಯವರ ಹತ್ತಿರ ಬಡ-ಬಡಿಸುವುದನ್ನ ಬಿಡಬೇಕು.
ಸಂಭಂಧಗಳಲ್ಲಿ ಮೊದಲ ಹೆಜ್ಜೆ
ಸಂಭಂಧ ಗಳು ಹಳಸಿದಾಗ ಅವುಗಳನ್ನು ಸರಿಪಡಿಸುವ ಮೊದಲ ಹೆಜ್ಜೆ ನಾವು ಇಡೋಣ, ಪುನಃ ಹಳಸಿದರೆ ಈ ಸಲ ಅವಕಾಶವನ್ನ ಆ ತುದಿಯಲ್ಲಿರುವವರಿಗೆ ಕೊಡೋಣ.
Sunday, May 1, 2011
Subscribe to:
Posts (Atom)