ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Thursday, March 31, 2011
ಎದ್ದೇಳು
ಬಿದ್ದಾಗ ಎದ್ದೇಳಲು, ಗೆದ್ದಾಗ ಮತ್ತೊಂದು ಹೆಜ್ಜೆ ಮುಂದೆ ಇಡಲು
" ನಮ್ಮ ಕಾಲುಗಳೇ" ಬೇಕು.
ಚಿಂತೆ ಕಂತೆ ಸಂತೆ
ಹೊತ್ತು ಹರಿದ ಮೇಲೆ ಜೀವನದ ಬಗೆಗಿನ ನೂರಾರು ಚಿಂತೆಗಳು ಕಂತೆ ಕಂತೆ,
ಹೊತ್ತು ಮುಗಿದ ಮೇಲೆ ಬರೀ ಮೌನದ ಸಂತೆ.
ಧೀರ್ಘವಾದ "ನಡೆ"
ಒಂದು ಧೀರ್ಘವಾದ "ನಡೆ" ನಮ್ಮನ್ನು ನಿರಾಯಾಸವಾಗಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.
ನಂಬಿಕೆ
ಕೆಲವೊಂದು ಸಲ ನಂಬಿಕೆ ದ್ರೋಹ ಆದಾಗ, ಮೋಸ ಹೋದಾಗ,
ಕ್ಷಣ ಕಾಲ ಎಲ್ಲದರ ಮೇಲೆಯೂ, ಎಲ್ಲರ ಮೇಲೆಯೂ ನಂಬಿಕೆ ಕಳೆದುಕೊ ಪರವಾಗಿಲ್ಲ, ಆದರೆ ನಿನ್ನನ್ನು ಹೊರತು ಪಡಿಸಿ.
ತಪ್ಪು - ಸರಿ
ಅಸಲಿಗೆ "ತಪ್ಪು - ಸರಿ" ಅನ್ನುವುದು ಕೇವಲ ಅವರವರ "ದೃಷ್ಟಿಕೋನ".
ಅದೇನೇ ಇರಲಿ, ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲವಂತೂ ಕಟ್ಟಿಟ್ಟ ಬುತ್ತಿ.
ನೆಪ ಮತ್ತು ನಾನು
ನೂರು ಜನರಿಗೆ ನೂರು ನೆಪ ಹೇಳಿ ತಪ್ಪಿಸಿಕೊಳ್ಳಬಹುದು,
ಆದರೆ ನನಗೆ ನಾನು ಒಂದೇ ಒಂದು ನೆಪ ಹೇಳಿಕೊಂಡರೂ (ನನ್ನಿಂದ) ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
Sunday, March 27, 2011
ವಿಶ್ವಕಪ್ ವಿಷಯ
ಇಡೀ ಜಗತ್ತಿಗೇ ಇವರ ಗೆಲುವಿನ ಬಗ್ಗೆ ಸಂದೇಹವಿದ್ದರೂ,
ಅದಾವುದಕ್ಕೂ ಗಮನ ಕೊಡದೆ ಪ್ರತಿ ಆಟವನ್ನೂ ಅಷ್ಟೇ ಉತ್ಸಾಹದಿಂದ,
ಅಷ್ಟೇ ಶ್ರದ್ದೆಯಿಂದ ಆಡಿದ್ದು ಕೆನಡ, ಕೀನ್ಯಾ, ನೆದರ್ಲ್ಯಾಂಡ್, ಐರ್ಲ್ಯಾನ್ಡ ತಂಡಗಳು.
ಸೋಲು ಗೆಲುವು ತದನಂತರ, ಆಟ ಆಡುವುದು ಮೊದಲ ಕೆಲಸ.
Wednesday, March 9, 2011
ಹವ್ಯಾಸ
ಹವ್ಯಾಸಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಲೇ ಬೇಕು.
ಒಂದು ಹಂತದಲ್ಲಿ ಎಲ್ಲವೂ, ಎಲ್ಲರೂ ನಮ್ಮ ಕೈಬಿಟ್ಟು ಹೋದಾಗ,
ಹವ್ಯಾಸಗಳೇ ನಮ್ಮನ್ನ ಕೈಹಿಡಿದು ಮುಂದೆ ನಡೆಸಿ, ಒಬ್ಬಂಟಿತನವನ್ನ ಹೊಡೆದೋಡಿಸುತ್ತವೆ.
ಅಹಂಕಾರ
'ಅಹಂಕಾರ' ಎನ್ನುವುದನ್ನು 'ಆತ್ಮವಿಶ್ವಾಸ' ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬೇಕೆ ವಿನಃ ಮತ್ತೊಬ್ಬರ ಮೇಲೆ 'ಹೂಂಕರಿಸಲು' ಅಲ್ಲ!
ಮಾತು
ಸದಾ ಮಾತೇ ಮಾತಾಗದಿರಲಿ,
ಮಾತು ವಸಿ ಮೌನವಾಗಿದ್ದು,
"ಮಾಡಿದ ಕೆಲಸ" ಚೂರು ಮಾತಾಡುವಂತಾಗಲಿ.
Newer Posts
Older Posts
Home
Subscribe to:
Posts (Atom)